ಕರೊನಾ ತಡೆ ಕುರಿತು ಉಪನ್ಯಾಸ
ಮಹಿಳೆಯರಿಗೆ ಮಾಸ್ಕ್ ವಿತರಣೆ
ಕುಮಟಾ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟಾ ವತಿಯಿಂದ ಕರೋನಾ ವೈರಸ್ ಜಾಗೃತಿ ಮತ್ತು ಉಚಿತ ಮಾಸ್ಕ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯ ಕ್ರಮಕ್ಕೆ ಮುಖ್ಯ ಅತಿಥಿಯೂ,ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟಾದ ಕೋಶಾಧಿಕಾರಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ರಾದ ಶ್ರೀ ಬೀರಣ್ಣ ನಾಯಕರವರು ಕರೋನ ವೈರಸ್ ಯಾವ ರೀತಿಯಲ್ಲಿ ಹರಡುತ್ತದೆ ಹಾಗೂ ಬರದಂತೆ ತಡೆಯುವ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಈ ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಅಧ್ಯಕ್ಷರೂ,ಖ್ಯಾತ ವೈದ್ಯರು ಆದ ಡಾ.ಅಶೋಕ್ ಭಟ್ ರವರು ಕರೋನ ವೈರಸ್ ಬಂದಾಗ ಉಂಟಾಗುವ ಲಕ್ಷಣಗಳು ,ಅಂತಹ ಸಂದರ್ಭದಲ್ಲಿ ನಾವು ತೆಗೆದುಕೊಳ್ಳಬೇಕಾದ ಮುನ್ನೇಚ್ಚರಿಕಾ ಕ್ರಮದ ಕುರಿತು ತುಂಬಾ ಸುಂದರ ವಾಗಿ ಉಪನ್ಯಾಸ ನೀಡುವುದರ ಜೊತೆಗೆ ಅಲ್ಲಿ ಸೇರಿ ರುವ ಎಲ್ಲಾ ಮಹಿಳೆಯರಿಗೂ ಮಾಸ್ಕ ವಿತರಿಸಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಕಾರ್ಯಕ್ರಮಾಧೀಕಾರಿ ಮಿಸ್. ಮಂಜುಳಾ ಗೌಡರವರು ಸ್ವಾಗತಿಸಿ-ವಂದಿಸಿದರು. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಿಸ್ಟರ್ ಆದ ಶ್ರೀಮತಿ ಪದ್ಮಾ ಪಟಗಾರ ಮಹಿಳೆಯರ ಟೆಂಪ್ರಚರ ತಪಾಸಣೆ ಮಾಡಿದರು.ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಿಸ್ಟರ್ ಆದ ಶ್ರೀಮತಿ ಶಾಲಿನಿ ನಾಯ್ಕ್ ಮತ್ತು ಆಶಾ ಕಾರ್ಯಕತ್ರೆ ಕವಿತಾ ನಾಯ್ಕ ಸಹಕರಿಸಿದರು.
ವಿಸ್ಮಯ ನ್ಯೂಸ್, ಕುಮಟಾ