ಕುಮಟಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾ ದ ಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳು ಕೋಟಿ ಕಂಠಗಾಯನ ಕಾರ್ಯಕ್ರಮವನ್ನು ಸು ಶ್ರಾವ್ಯವಾಗಿ ಹಾಡಿ ಯಶಸ್ವಿಗೊಳಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಶಿಲ್ಪ ಬಿ ಎಂ ಕನ್ನಡ ನಾಡು ನುಡಿಯ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.ಕನ್ನಡ ಏ ಕೀಕಿರಣ ಕಾಲದ ಸೂಕ್ಷ್ಮ ವಿಚಾರಗಳನ್ನು ಪ್ರಸ್ತುತ ಕನ್ನಡದ ಪರಿಸ್ಥಿತಿಯನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದಪ್ರೊ ಐ. ಕೆ .ನಾಯ್ಕ್ ಸ್ವರಚಿತ ಕನ್ನಡ ಅಭಿಮಾನದ ಗೀತೆಯನ್ನು ವಾಚಿಸಿ ಗಮನ ಸೆಳೆದರು. ಯೂನಿಯನ್ ವಿಭಾಗದ ಉಪಾಧ್ಯಕ್ಷೆ ಡಾ.ಗೀತಾ ಬೀ.ನಾಯಕಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆ ಮೇಲೆ ಹಿರಿಯ ಉಪನ್ಯಾಸಕ ಡಾ. ವಿನಾಯಕ ನಾಯಕ್ ಉಪಸ್ಥಿತರಿದ್ದರು.ಕೊನೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ ನಮೃತಾ ವಂದಿಸಿದರು. ಉಪನ್ಯಾಸಕ ವನ್ನಳ್ಳಿ ಗಿರಿ ಕಾರ್ಯಕ್ರಮ ನಿರೂಪಿಸಿದರು . ಅಚ್ಚುಕಟ್ಟಾಗಿ ಹಾಡಿದ ಕೋಟಿಕಂಠ ಗಾಯನ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ರಚಿಸಿದ ಕನ್ನಡ ದ ಕುರಿತ ರಂಗೋಲಿ ಆಕರ್ಷಕ ವಾಗಿತ್ತು.
ವಿಸ್ಮಯ ನ್ಯೂಸ್, ಕುಮಟಾ