Important
Trending

4 ವರ್ಷದ ಮಗನೊಂದಿಗೆ ನಾಪತ್ತೆಯಾದ ವಿವಾಹಿತ ಮಹಿಳೆ: ಬಾಡಿಗೆ ಮನೆಯಲ್ಲಿ  ವಾಸವಿದ್ದವಳು ಹೋದದ್ದೆಲ್ಲಿಗೆ ?

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೋರ್ವ, ತನ್ನ  ಹೆಂಡತಿಯು  ಮಗನೊಂದಿಗೆ, ಮನೆಯಿಂದ ಎಲ್ಲಿಯೋ ಹೋಗಿ  ಕಾಣೆಯಾಗಿದ್ದಾಳೆ ಎಂದು ಪೊಲೀಸ್ ದೂರು ನೀಡಿದ್ದಾರೆ.  ತಾಲೂಕಿನ  ಬೊಬ್ರುವಾಡ ಮೂಲದ (ಉರ್ದು ಶಾಲೆ  ಹಿಂದೆ ) ಹಾಲಿ ಲಕ್ಷ್ಮೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ  ವಾಸವಾಗಿದ್ದ  ಸೈಯದ್ ಗಜಲಾ ಗಂಡ ಸ್ಥೆಯದ್ ಮಹ್ಮದ್ ಇಬ್ಬಾಲ ಪೀರಜಾದೆ (43 ) ಕಾಣೆಯಾದ ಮಹಿಳೆ.

ನವೆಂಬರ್ 22  ರಂದು ಬೆಳಿಗ್ಗೆ 10  ಗಂಟೆ  ಸುಮಾರಿಗೆ, ತನ್ನ ಮಗ  ಸಯ್ಯದ್ ಆರಿಜ್  ( 4 ವರ್ಷ 6 ತಿಂಗಳು ) ಇವನನ್ನು ಕರೆದುಕೊಂಡು ಮನೆಯಿಂದ ಎಲ್ಲಿಗೋ ಹೋದವಳು ಇದುವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ, ಕಾಣೆಯಾದ ತನ್ನ ಹೆಂಡತಿ ಮತ್ತು ಮಗನನ್ನು ಪತ್ತೆ ಮಾಡಿ ಕೊಡಿ ಎಂದು ಸೈಯದ್ ಮಹ್ಮದ್ ಇಖ್ಬಾಲ್ ತಂದೆ ಸಯ್ಯದ್ ಫತ್ತುಲ್ಲಾ  ಫೀರಜಾದೆ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ .

ಅಂದಾಜು 5 ಪೂಟ್ ಎತ್ತರ, ಗೋದಿ ಮೈ ಬಣ್ಣ, ಗೋಲು ಮುಖ, ಸದ್ರಢ ಮೈಕಟ್ಟು, ಹಿಂದಿ, ಉರ್ದು  ಭಾಷೆ ಅರಿತಿರುವ, ಇವಳು ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ, ಕೆಂಪು ಬಣ್ಣದ ಪ್ಯಾಂಟ್,  ಕೆಂಪು  ಬಣ್ಣದ ವೇಲ್ ಧರಿಸಿರುತ್ತಾಳೆ.ಈ ಮೇಲಿನ ಚಹರೆಯುಳ್ಳ ಸೈಯದ್ ಗಜಾಲಾ ಇವಳು ಎಲ್ಲಿಯಾದರೂ  ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ  ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.                     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button