ಇದು ನಮ್ಮಿಂದ ಕಳೆದಹೋದ ಐತಿಹಾಸಿಕ ವೈಭವಗಳನ್ನು ಮರಳಿ ಪಡೆಯುವ ಮೊದಲ ಹೆಜ್ಜೆ : ರಾಮಮಂದಿರ ಉದ್ಘಾಟನೆ ಹಿಂದೂ ಸಮಾಜದ ಸಾತ್ವಿಕ ಶಕ್ತಿಯ ಅನಾವರಣ: ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ
ಶಿರಸಿ: ಕಳೆದ ಸಾವಿರಾರು ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಆದ ದೌರ್ಜನ್ಯ ಕ್ಕೆ ಬದಲಾಗಿ ಸಮಾಜ ಎದ್ದು ನಿಂತಿದೆ. ನಮ್ಮಿಂದ ಕಳೆದಹೋದ ಐತಿಹಾಸಿಕ ವೈಭವಗಳನ್ನು ಮರಳಿ ಪಡೆಯುವ ಮೊದಲ ಹೆಜ್ಜೆ ರಾಮಮಂದಿರ ವಾಗಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಂಪರೆ ಇತಿಹಾಸ ದ ಕಲ್ಪನೆ ಇಲ್ಲದವರಿಗೆ ಅದೊಂದು ಕಲ್ಲಿನ ಗೂಡು.ಯಾರಿಗೆ ದೇಶ, ಧರ್ಮ, ಸಂಸ್ಕೃತಿ, ಸಂಪ್ರದಾಯ ಗಳ ಪರಿಜ್ಞಾನ ವಿದೆ ಆಳವಾದ ನಂಬಿಕೆ ಇದೆ ಅಂತವರಿಗೆ ಇದೊಂದು ಭವ್ಯತೆಯ ಮಂದಿರ ವಾಗಿದೆ.ಹಿಂದೂ ಸಮಾಜ ವಾಪಸ್ ತನ್ನ ಸ್ವಂತ ಶಕ್ತಿಯಿಂದ ಎದ್ದು ನಿಲ್ಲುತ್ತಿದೆ ಎಂದರು.
ಸಮಸ್ತ ಹಿಂದೂ ಸಮಾಜ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಿದೆ.ಮನೆಮನೆಗೆ ತೆರಳಿ ಆಮಂತ್ರಣ ಪತ್ರಿಕೆ ನೀಡುತ್ತಿದ್ದೇವೆ. ರಾಮಮಂದಿರ ಉದ್ಘಾಟನೆ ಯಲ್ಲ ಇದು ಹಿಂದೂ ಸಮಾಜದ ಸಾತ್ವಿಕ ಶಕ್ತಿಯ ಅನಾವರಣ. ರಾಮ ಮಂದಿರ ದ ಹೋರಾಟ 500ವರ್ಷಗಳಿಂದ ನಡೆಯುತ್ತಿದೆ . ಲಕ್ಷಾಂತರ ಜನರ ಬಲಿದಾನ ವಾಗಿದೆ.ಸಾಕಷ್ಟು ಹೋರಾಟ ಗಳು ನಡೆದಿದೆ.ಎಲ್ಲವನ್ನೂ ಹಿಂದೂ ಸಮಾಜ ಮೆಟ್ಟಿ ಎದ್ದು ನಿಂತಿದೆ. ಧರ್ಮ ಮತ್ತು ಸಂಸ್ಕೃತಿ ರಾಜಕೀಯ ಕ್ಕೆ ಮೀರಿದ್ದಾಗಿದೆ.ಎಲ್ಲಾ ರಾಮಭಕ್ತರೀಗೂ ಆಮಂತ್ರಣ ಪತ್ರಿಕೆ ನೀಡುತ್ತಿದ್ದೇವೆ.ನಿಜ ರಾಮಭಕ್ತರಾದರೇ ಬನ್ನಿ.ಡೊಂಬರಾಟದ ಮಾತುಗಳು ಬೇಡ ಎಂದು ಕಾಂಗ್ರೆಸ್ ನವರ ಹೇಳಿಕೆಗೆ ತಿರುಗೇಟು ನೀಡಿದರು.ರಾಮ ಮಂದಿರ ಹಿಂದೂ ಸಮಾಜದ ಮಂದಿರ . ಯಾವುದೇ ಪಕ್ಷದ ಮಂದಿರವಲ್ಲ ಎಂದರು.
ವಿಸ್ಮಯ ನ್ಯೂಸ್, ಶಿರಸಿ