Important
Trending

ಸಮುದ್ರದಲ್ಲಿ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಗೋಕರ್ಣ: ಎಚ್ಚರಿಕೆಯನ್ನೂ ಮೀರಿ ಮೋಜು-ಮಸ್ತಿಗಾಗಿ ಅಪಾಯವನ್ನೂ ಲೆಕ್ಕಿಸದೆ ಸಮುದ್ರಕ್ಕೆ ಇಳಿಯುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಅನಾಹುತಗಳು ಸಂಭವಿಸುತ್ತಿವೆ. ಹೌದು, ಗೋಕರ್ಣದ ಸಮುದ್ರ ತೀರದಲ್ಲಂತೂ ಇಂತಹ ಘಟನೆ ಮರುಕಳಿಸುತ್ತಲೇ ಇದೆ.

ಹೌದು, ಸಮುದ್ರದಲ್ಲಿ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಿದ ಘಟನೆ ಕುಡ್ಲೇ ಬೀಚ್‌ನಲ್ಲಿ ನಡೆದಿದೆ. ಸ್ಮಿತಾ(23), ನಿಹಾರಿಕಾ (22), ಪವಿತ್ರಾ (22) ರಕ್ಷಣೆಗೊಳಗಾದ ಪ್ರವಾಸಿಗರು. ಬೆಂಗಳೂರಿನ ಜಯನಗರ ನಿವಾಸಿಗಳಾದ ಈ ಪ್ರವಾಸಿಗರು ಸಮುದ್ರಕ್ಕೆ ಈಜಲು ತೆರಳಿದ್ದರು.

ಈ ವೇಳೆ ಭಾರೀ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗೆ ಇಳಿದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ನವೀನ್ ಅಂಬಿಗ, ಮಂಜುನಾಥ ಹರಿಕಂತ್ರ ಎಂಬುವವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿ.

ವಿಸ್ಮಯ ನ್ಯೂಸ್, ಗೋಕರ್ಣ

Back to top button