Join Our

WhatsApp Group
Important
Trending

ಶಿರಸಿಯಲ್ಲಿ ಆರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಶಿರಸಿ: ಹಲವು ಉಧ್ಯಮೀಗಳ ಮನೆ ಮೇಲೆ ಶುಕ್ರವಾರ ಮುಂಜಾನೆ ಐಟಿ ಅಧಿಕಾರಿಗಳು ಧಿಡೀರ್ ಧಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ದೀಪಕ್ ದೊಡ್ಡೂರು, ಟಿಎಸ್ ಎಸ್ ಮಾಜಿ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಶಿವರಾಮ ಹೆಗಡೆ,ಅನಿಲ್ ಕುಮಾರ್ ಮುಷ್ಟಗಿ, ಪ್ರವೀಣ ಹೆಗಡೆ ಹಾಗೂ ರಾಮಕೃಷ್ಣ ಹೆಗಡೆ ಕಡವೆ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.

ಕಾಗದ ಪತ್ರಗಳನ್ನು ಪರಿಶಿಲೀಸುತ್ತಿರುವ ಅಧಿಕಾರಿಗಳು ಸಂಜೆ ವರೇಗೂ ಪರಿಶೀಲನಾ ಕಾರ್ಯ ಮುಂದು ವರೆಸಿದ್ದಾರೆ. ಮಧ್ಯಾಹ್ನ ದ ವರೆಗೆ ಯಾವುದೇ ಹಣ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಎಂಟರಿಂದ ಹತ್ತು ಗಂಟೆಗಳ ಕಾಲ ಪರಿಶೀಲನೆ ಯಲ್ಲಿ ಅಧಿಕಾರಿಗಳು ತೊಡಗಿರುವುದು ನೋಡಿದರೆ ಭರ್ಜರಿ ಭೇಟೆಯೇ ಆದಂತಿದೆ ಎಂಬ ಅನುಮಾನ ಗಳೂ ಕಾಡುತ್ತಿದೆ. ಟಿಎಸ್ ಎಸ್ ಸೊಸೈಟಿ ಯಲ್ಲಾದ ಹಗರಣಗಳನ್ನು ಬೆಳಕಿಗೆ ತರುವಲ್ಲಿ ಆದ ಧಾಳಿಯೋ ಅಥವಾ ರಾಜಕೀಯ ಪ್ರೇರಿತ ಧಾಳಿಯೋ ಎಂದು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button