ಶತಮಾನಗಳ ಇತಿಹಾಸ ಇರುವ ಕನ್ನಡ ವೈಶ್ಯ ವಿದ್ಯಾನಿಧಿ ಸಂಸ್ಥೆಗೆ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಅವಿರೋಧ ಆಯ್ಕೆ.
ಅಂಕೋಲಾ : ನಾಡಿನ ಪ್ರತಿಷ್ಠಿತ ಸಂಘಟನೆಯಾಗಿ ಗುರುತಿಸಿಕೊಂಡು,107 ವರ್ಷ ಸುದೀರ್ಘ ಇತಿಹಾಸವಿರುವ ಕನ್ನಡ ವೈಶ್ಯ ವಿದ್ಯಾನಿಧಿ ಸಂಸ್ಥೆಗೆ ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಯ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸದಾನಂದ ರಾಮಯ್ಯ ಶೆಟ್ಟಿ ಅಂಕೋಲಾ ಇವರು ಅಧ್ಯಕ್ಷರಾಗಿ, ಮತ್ತು ಗೀತಾ ಗುರುನಾಥ ಶೆಟ್ಟಿ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸದಾನಂದ ಶೆಟ್ಟಿ ಅವರು ಎರಡನೇ ಬಾರಿ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದು, ವೈಶ್ಯ ಸಮಾಜದ ಇನ್ನಿತರೇ ಸಂಘ ಸಂಸ್ಥೆಗಳಲ್ಲಿಯೂ ಸಕ್ರೀಯ ಸದಸ್ಯ ರಾಗಿ, ಅಂಕೋಲಾ ಲಯನ್ಸ್ ಕ್ಲಬ್ ಕರಾವಳಿಯ ಸದಸ್ಯ ರಾಗಿ, ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕುಟ್ಟ ಶೆಟ್ಟಿ ಎಂದೇ ಚಿರಪರಿಚಿತವಾಗಿರುವ ಅಂಕೋಲಾದ ಪ್ರತಿಷ್ಠಿತ ಕುಟುಂಬದ ಮಗಳಾದ ಗೀತಾ ಗುರುನಾಥ ಶೆಟ್ಟಿ ,ತನ್ನ ಕಾಲೇಜ್ ದಿನಗಳಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದು, ಇವರು ಸತತ ಮೂರನೇ ಬಾರಿ ವೈಶ್ಯ ವಿದ್ಯಾನಿಧಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಬಹುಮುಖ ಪ್ರತಿಭೆ ಉಳ್ಳವರಾಗಿರುವ ಇವರು,ಸದಾ ಸಮಾಜ ಮುಖಿ ಸೇವೆಯಲ್ಲಿ ತೊಡಗಿ ಕೊಂಡಿದ್ದು ಶ್ರೀ ಶಾರದಾoಬಾ ಮಹಿಳಾ ಮಂಡಳಿಯ( ಶಿರಸಿ- ಬನವಾಸಿ) ಅಧ್ಯಕ್ಷರಾಗಿ, ಸದಸ್ಯರಾಗಿ, ಲಯನ್ಸ್ ಕ್ಲಬ್ ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂತನ ಆಡಳಿತ ಮಂಡಳಿ ನಿರ್ದೇಶಕರಾಗಿ ಜಿ. ಜಿ. ಶೆಟ್ಟಿ, ವಿಠ್ಠಲ್ ಡಿ ಶೆಟ್ಟಿ, ರವೀಂದ್ರ ಎನ್ ಶೆಟ್ಟಿ, ಗಣಪತಿ ಎಚ್ ಶೆಟ್ಟಿ, ಸಂಜೀವಕುಮಾರ್ ಹೊಸ್ಕೆರಿ, ವೆಂಕಟೇಶ್ ಕಾಕರಮಠ, ಅಶೋಕ ಶಂಭಾ ಶೆಟ್ಟಿ ಆಯ್ಕೆಯಾಗಿದ್ದು, ಸಂಸ್ಥೆಯ ಪ್ರಮುಖ ಜವಾಬ್ದಾರಿ ಯಾರ ಕಾರ್ಯದರ್ಶಿ ಹುದ್ದೆಗೆ ಶ್ರೀನಿವಾಸ್ ಡಿ ಶೆಟ್ಟಿ, ಸ್ಧಾನಿಕ ಲೆಕ್ಕ ತಪಾಸಕರಾಗಿ ಸಂತೋಷ ಎನ್ ಬಂಡಿಕಟ್ಟೆ ಆಯ್ಕೆಯಾಗಿರುತ್ತಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ