ಭಟ್ಕಳ: ಕಾಂಗ್ರೇಸ್ ಪಕ್ಷ ಕ್ಷೇತ್ರದಲ್ಲಿ ಕುರುಡು ಕಾನೂನನ್ನು ಚಲಾಯಿಸುತ್ತಿದೆ. ಜಾಲಿಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗಿರುವ ವಾರ್ಡ್ ಗಳಿಗೆ ಕಾಂಗ್ರೇಸ್ ಸರ್ಕಾರದಿಂದ ಅನುದಾನ ತಾರತಮ್ಯ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಸುನಿಲ್ ಬಿ ನಾಯ್ಕ ಹೇಳಿದರು.
ವೇಶ್ಯಾವಾಟಿಕೆ ಆರೋಪ: ಮುರ್ಡೇಶ್ವರದಲ್ಲಿ ಹೊಟೇಲ್ ಮೇಲೆ ದಾಳಿ: ನಾಲ್ವರು ವಶಕ್ಕೆ
ಭಟ್ಕಳ ತಾಲೂಕಿನ ಆಸರಕೇರಿ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಮಂಡಲ ಕಾರ್ಯಕಾರಿಣಿ ವಿಶೇಷ ಸಭೆ, ಸದಸ್ಯತ್ವ ಅಭಿಯಾನ- 2024 ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಇಂತಹ ತಾರತಮ್ಯ ಎಂದಿಗೂ ಮಾಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುದಾನ ಹಂಚಿಕೆಯಲ್ಲಿ ಅಸಮಾನತೆ ತೋರಿಸದೆ ಎಲ್ಲಾ ವಾರ್ಡಗಳಿಗೂ ಹಂಚುವ ವ್ಯವಸ್ಥೆ ಆಗಬೇಕು. ಆದರೆ ಸಚಿವರು ಇಂತಹ ವಿಷಯಗಳಲ್ಲಿ ತಾರತಮ್ಯದ ದೋರಣೆ ತೋರುತ್ತಿದ್ದಾರೆ. ಒಮ್ಮೆ ಗೆದ್ದು ಬಂದ ನಂತರ ಯಾವುದೇ ಒಂದು ಪಕ್ಷಕ್ಕೆ ಮಾತ್ರ ಶಾಸಕರಾಗಿರುವುದಿಲ್ಲ. ಎಲ್ಲರಿಗೂ ಆಧ್ಯತೆ ನೀಡಬೇಕು ಎಂದರು.
ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಮಂಡಳದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಪಕ್ಷದ ಸಂಘಟನೆಯನ್ನು ತಳ ಹಂತದವರೆಗೆ ಮುಟ್ಟಿಸುವ ಸಲುವಾಗಿ ನಾವು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಜೆಪಿ ಜಿಲ್ಲಾ ಅಧ್ಯಕ್ಷ ಎನ್ ಎಸ್ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಪ್ರಶಾಂತ ನಾಯ್ಕ, ಶ್ರೀಕಾಂತ ನಾಯ್ಕ ಮತ್ತಿತರರು ಇದ್ದರು.