Follow Us On

WhatsApp Group
Important
Trending

ಗುಡ್ಡ ಕುಸಿತದ ಹಾನಿ ತಪ್ಪಿಸಿ ಶಾಶ್ವತ ಪರಿಹಾರ ಕಲ್ಪಿಸಲು 100 ಕೋಟಿ ಯೋಜನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಗುಡ್ಡ ಕುಸಿತದ ಹಾನಿ ತಪ್ಪಿಸಿ ಶಾಶ್ವತ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಸುಮಾರು 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದು ಈ ಕುರಿತು ಕ್ರೀಯಾ ಯೋಜನೆ ರೂಪಿಸಿ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ತೀವ್ರ ಅಪಾಯಕಾರಿಯಾದ ಗುಡ್ಡ ಕುಸಿತದ ಸ್ಥಳದಲ್ಲಿ ತಡೆಗೋಡೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ ಸಂಸ್ಥೆ ಯ ತಜ್ಞರ ನಿರ್ದೇಶನದಲ್ಲಿ ಈ ಕಾಮಗಾರಿಗಳು ನಡೆಯಲಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಒಂದಾದರೊAದರAತೆ ಭೂ ಕುಸಿತ ಪ್ರಕರಣಗಳು ನಡೆಯುತ್ತಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರವನ್ನೂ ಬೆಚ್ಚಿ ಬೀಳಿಸಿದೆ. ಜಿಲ್ಲೆಯ ಅಣಶಿ, ದೇವಿಮನೆ ಘಟ್ಟ, ಕೈಗಾ ಬಳಿಯ ಅರಣ್ಯ ಪ್ರದೇಶ, ಕಳಜೆ, ರಾಮನಗುಳಿ, ದೇವಳಮಕ್ಕಿ, ಆರಬೈಲ್ ಘಟ್ಟ, ಹೊನ್ನಾವರ ಗೇರುಸೊಪ್ಪ, ಕುಮಟಾ ಉಳ್ಳೂರು ಮಠ, ಸೊಪ್ಪಿನ ಹೊಸಳ್ಳಿ, ಸಂಕ್ರುಭಾಗ ಘಟ್ಟ, ಕದ್ರಾ ಸೂಳಗೆರೆ ಸೇರಿದಂತೆ ‘ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಆದರೆ ಕಳಚೆ ಹೊರತುಪಡಿಸಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿರಲಿಲ್ಲ. ಆದರೆ ಇದೀಗ ಕಳೆದ ಮೂರು ತಿಂಗಳಲ್ಲಿ ಸುಮಾರು 40ಕ್ಕೂ ಅಧಿಕ ಸ್ಥಳಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಇದರಲ್ಲಿ ಜುಲೈ 16 ರಂದು ನಡೆದ ಶಿರೂರು ದುರ್ಘಟನೆ ಹಲವು ಸಾವು

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button