Follow Us On

WhatsApp Group
Important
Trending

ಅರ್ಜುನ್ ಲಾರಿಯಲ್ಲಿ ಏನೆಲ್ಲಾ ಸಿಕ್ಕಿತು : ಶಿರೂರು ಗುಡ್ಡ ಕುಸಿತದ ಬಳಿಕವೂ ರಿಂಗಣಿಸಿತ್ತೇ ಮೊಬೈಲ್ ?

ಲಾರಿ ಕ್ಯಾಬಿನ್ ನಲ್ಲಿತ್ತು ಮಿನಿ ಲಾರಿ: ಅಪ್ಪ ಮಗನ ಪ್ರೀತಿಯ ಸವಾರಿ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಮತ್ತು ಆತನ ಬೆಂಜ್ ಲಾರಿಯನ್ನು ಕೊನೆಗೂ ಪತ್ತೆಹಚ್ಚಲಾಗಿದ್ದು ಗಂಗಾವಳಿ ನದಿಯಿಂದ ಮೇಲೆತ್ತಲಾಗಿತ್ತು. ಈ ವೇಳೆ ಅರ್ಜುನನ ಲಾರಿಯಲ್ಲಿ ಆತನ ಮೊಬೈಲ್ ಪತ್ತೆಯಾಗಿದೆ. ಜುಲೈ 16 ರಂದು ಗುಡ್ಡ ಕುಸಿತ ದುರಂತ ಸಂಭವಿಸಿದ ಬಳಿಕವೂ ಅರ್ಜುನನ ಮೊಬೈಲ್ ರಿಂಗಣಿಸಿತ್ತು. ಆತನ ಮೊಬೈಲ್ ನಿಂದ ಮನೆಗೆ ಕರೆ ಮಾಡಲಾಗಿತ್ತು .ಮನೆಯವರು ಪುನ: ಪ್ರಯತ್ನಿಸಿದಾಗ ಕರೆ ಸಂಪರ್ಕ ಸಾಧ್ಯವಾಗಿರಲಿಲ್ಲ ಇತ್ಯಾದಿ ಅಂತೆ ಕಂತೆಗಳ ಮಾತು ಹಲವಡೆ ಕೇಳಿ ಬಂದಿತ್ತು.

ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment

ಈ ವೇಳೆ ಲಾರಿಯ ಕ್ಯಾಬಿನ್ ಒಳಗಿರುವ ಅರ್ಜುನ್ ಬದುಕಿರಬಹುದು ಎಂಬ ಆಶಾಭಾವನೆಯೂ ಕೆಲವರಲ್ಲಿ ಇತ್ತು. ದಿನಗಳದಂತೆ ಆ ಆಶಾ ಭಾವನೆ ಮಾಯವಾಗಿ ಅರ್ಜುನ್ ಲಾರಿ ಮತ್ತು ಮೃತದೇಹ ದೊರೆತರೆ ಸಾಕು ಎನ್ನುವಷ್ಟರ ಮಟ್ಟಿಗೆ ಕೆಲವರಲ್ಲಿ ನಿರಾಸೆ ಭಾವನೆ ಮೂಡುವಂತಾಗಿತ್ತು. ಸತತ ಎರಡು ತಿಂಗಳುಗಳ ಕಾಲ ನಾನಾ ರೀತಿಯ ಕಾರ್ಯಚರಣೆ ನಡೆಸಿದರೂ ಅರ್ಜುನ್ ಲಾರಿಯ ಕುರುಹೇ ಪತ್ತೆಯಾಗದೇ ಮತ್ತೆ ಮತ್ತೆ ಶೋಧ ಕಾರ್ಯ ಮುಂದುವರಿಸುವಂತಾಗಿತ್ತು.

ಕಾರ್ಯಾಚರಣೆ ಮತ್ತು ತಮ್ಮ ಬಗ್ಗೆ ಕೆಲವರಿಂದ ಅಸಮಾಧಾನದ ಮಾತುಗಳು ಕೇಳಿ ಬಂದರೂ,ಎಲ್ಲವನ್ನು ಸಮಾಧಾನ ಚಿತ್ತದಿಂದಲೇ ಸ್ವೀಕರಿಸಿ,ತನ್ನ ಕಾರ್ಯ ಶೈಲಿ ಮತ್ತು ಜವಾಬ್ದಾರಿಯ ಮೂಲಕವೇ ಉತ್ತರ ನೀಡಿದಂತಿದ್ದ ಶಾಸಕ ಸತೀಶ್ ಸೈಲ್,ಕೊನೆಗೂ ತನ್ನ ಸೇವೆ ಮತ್ತು ಸಾಮರ್ಥ್ಯದ ಮೂಲಕ ಹಲವರ ಮೆಚ್ಚುಗೆಗೆ ಕಾರಣರಾಗಿದ್ದಾರೆ .ಈ ಮೂಲಕ ಛಲ ಬಿಡದ ಮಹಾ ನಾಯಕನಾಗಿ ಕಾರ್ಯಾಚರಣೆ ನೇತೃತ್ವ ವಹಿಸಿ,ತನ್ನ ಮತಕ್ಷೇತ್ರವಷ್ಟೇ ಅಲ್ಲದೆ,ರಾಜ್ಯ ಹಾಗೂ ಪಕ್ಕದ ರಾಜ್ಯ ಕೇರಳ ಸೇರಿದಂತೆ,ದೇಶದಾದ್ಯಂತ,ಹಾಗೂ ವಿದೇಶದಲ್ಲಿ ನೆಲೆಸಿರುವ ಇತರೆ ಹಲವರ ಗಮನ ಸೆಳೆದಿದ್ದಾರೆ.

ಸೆ 25 ರ ಬುಧವಾರ ಅರ್ಜುನ್ ಲಾರಿ ಮತ್ತು ಅದರಲ್ಲಿದ್ದ ಮೃತ ದೇಹವನ್ನು ಗಂಗಾವಳಿ ನದಿಯಿಂದ ಮೇಲೆತ್ತುವಾಗ ಸ್ಥಳದಲ್ಲಿಯೇ ಬೀಡು ಬಿಟ್ಟು ಮಾರ್ಗದರ್ಶನ ಮತ್ತು ಸಲಹೆ ನೀಡಿದ್ದ ಶಾಸಕ ಸತೀಶ್ ಸೈಲ್, ಗುರುವಾರ ಬೆಳಗ್ಗೆ ಸಹ ಶಿರೂರು ಗುಡ್ಡ ಪ್ರದೇಶದ ಬಳಿ ಭೇಟಿ ನೀಡಿ,ಅರ್ಜುನ್ ಲಾರಿ ಕ್ಯಾಬಿನ್ ನಲ್ಲಿ ಇರ ಬಹುದಾದ ವಾಹನದ ಕಾಗದಪತ್ರಗಳು,ಅಡುಗೆ ಸಾಮಾಗ್ರಿಗಳು ಮತ್ತು ಸಾಮಾನು,ಬಟ್ಟೆ ಬರೆ ಸೇರಿದಂತೆ ಇತರೆ ವಸ್ತುಗಳನ್ನು ಹೊರತೆಗೆ ಸಿ ಪರಿಶೀಲಿಸುತ್ತಿದ್ದರು.

ಈ ವೇಳೆ ಅರ್ಜುನನ ಮೊಬೈಲ್ ಒಂದು ಸಿಕ್ಕಿದ್ದು,ಅದನ್ನು ಮಾಧ್ಯಮದವರಿಗೆ ಶಾಸಕ ಸತೀಶ್ ಸೈಲ್ ತೋರಿಸಿದ್ದಾರೆ. ಸ್ವಲ್ಪ ಸಮಯದಲ್ಲಿ ಇನ್ನೊಂದು ಮೊಬೈಲ್ ಸಹ ಅದೇ ವಾಹನದಲ್ಲಿ ದೊರೆತಿದೆ. ಈ ಎರಡು ಮೊಬೈಲ್ ಗಳು ಅರ್ಜುನನದ್ದೇ ಎನ್ನಲಾಗುತ್ತಿದೆ.ಅಲ್ಲದೇ ಅರ್ಜುನನ ಲಾರಿ ಡ್ರೈವರ್ ಕ್ಯಾಬಿನ್ ಒಳಗಡೆ ಪುಟ್ಟ ಲಾರಿ ಮಾದರಿಯ ಆಟಿಕೆ ವಾಹನ ದೊರೆತಿದ್ದು,ಅರ್ಜುನ್ ಮತ್ತು ಆತನ ಮಗನ ಪ್ರೀತಿಯ ಸಂಬಂಧ ಇದಕ್ಕೆ ಇತ್ತು ಎನ್ನಲಾಗುತ್ತಿದೆ.

ಹಾಗಾಗಿಯೇ ತಂದೆ ತಾನು ಲಾರಿ ಏರಿ ಸವಾರಿ ಮಾಡುವಾಗ ಮುದ್ದು ಕಂದಮ್ಮ ನ ನೆನಪು ಬರುತ್ತಿತ್ತು ಎನ್ನಲಾಗಿದ್ದು ಕೇರಳ ಮಂಜೇಶ್ವರ ಶಾಸಕ ಅಶ್ರಫ, ಮಿನಿ ಲಾರಿ ಆಟಿಕೆ ಸಾಮಾನನ್ನು ಮಾಧ್ಯಮದವರಿಗೆ ತೋರಿಸಿದರು. ಒಟ್ಟಾರೆ ಈ ದುರ್ಘಟನೆಯಲ್ಲಿ ಆರಂಭದಿಂದ ಈವರೆಗೆ ಅತಿ ಹೆಚ್ಚಾಗಿ ವೈರಲ್ ಆಗುತ್ತಿದ್ದ ಅರ್ಜುನ್ ಮತ್ತು ಆತನ ಲಾರಿ,ಮೊಬೈಲ್ ರಿಂಗಣ ಮತ್ತಿತರ ಅಂತೆ ಕಂತೆಗಳ ಸುದ್ದಿಗೆ ಖಚಿತತೆಯ ಕೊನೆ ದೊರೆಯಲಾರಂಭಿಸಿದೆ.

ಈಗಾಗಲೇ ದೊರೆತಿರುವ ಆತನ ಮೂಳೆ ಮತ್ತು ಮಾಂಸಗಳುಳ್ಳ ಮೃತ ದೇಹವನ್ನು,ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ,ಸಹಾಯಕರಾದ ಬೊಮಯ್ಯ ನಾಯ್ಕ, ಅನಿಲ ಮಹಾಲೆ, ಇತರರು ಪೋಲಿಸ್ ಇಲಾಖೆಯ ಸಹಕಾರ ಮತ್ತು ಸೂಚನೆಯ ಮೇರೆಗೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರಕ್ಷಕ ಅಂಬುಲೆನ್ಸ್ ಮೂಲಕ ತಲುಪಿಸಿ ಬಂದಿದ್ದಾರೆ.ಅಲ್ಲಿ ಮೃತ ದೇಹದ ಡಿ. ಎನ್ ಎ ಪರೀಕ್ಷೆ ಮತ್ತಿತರ ಕಾನೂನು ಕ್ರಮಗಳು ಪೂರ್ಣಗೊಂಡ ಬಳಿಕ, ಆ ಮೃತ ದೇಹವನ್ನು ವರಸುದಾರರಿಗೆ ನೀಡಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.ಒಟ್ಟಿನಲ್ಲಿ ಕೇರಳದ ಅರ್ಜುನ್ ಕರುನಾಡಿನ ಗಂಗಾವಳಿ ನದಿಯಲ್ಲಿ ತನ್ನ ಅಂತಿಮ ಯಾತ್ರೆ ಮುಗಿಸಿದಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button