ಅಂಕೋಲಾ : ಅಹಿಂಸಾ ತತ್ವ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯಂದು ಎಲ್ಲೆಡೆ ಮಾಂಸ ,ಮದ್ಯ ಮಾರಾಟ ನಿಷೇಧವಿದ್ದರೂ ಬುಧವಾರ ಪಟ್ಟಣದ ಮಾಂಸ ಮಾರಾಟ ಅಂಗಡಿಯೊಂದರಲ್ಲಿ ಬಿಂದಾಸ್ ಆಗಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಮತ್ತು ಪೋಲಿಸ್ ಅಧಿಕಾರಿಗಳು ಮಾಂಸ ಮಾರಾಟದಂಗಡಿಯ ಮೇಲೆ ದಾಳಿ ನಡೆಸಿ,ಮಾಂಸವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.
ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು
ಪಟ್ಟಣದ ಅಂಬಾರಕೊಡ್ಲ ಮುಖ್ಯ ರಸ್ತೆಗೆ ಹೊಂದಿ ಕೊಂಡಿರುವ ನೂರಾನಿ ಚಿಕನ್ ಸೆಂಟರ್ ನಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ( ಅಹಿಂಸಾ ದಿನ) ಮಾಂಸ ಮಾರಾಟ ನಿಷೇಧವಿದ್ದರೂ,ಬಿಂದಾಸಾಗಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಪಟ್ಟಣದ ಕೆಲವೆಡೆ ಬೆಳಗ್ಗೆಯಿಂದಲೇ ಮಾಂಸ ಮಾರಾಟ ಮಳಿಗೆ ಕದ್ದು ಮುಚ್ಚಿ ತೆರೆದುಕೊಂಡಿತ್ತು ಎನ್ನಲಾಗಿದ್ದು, ಅಧಿಕಾರಿಗಳ ದಾಳಿಯ ಸುಳಿವರಿತೋ ಏನೋ ಮಾರಾಟ ಪ್ರಕ್ರಿಯೆ ಬಂದ್ ಮಾಡಿ ಕಾನೂನಿನ ಕುಣಿಕೆಯಿಂದ ಬಚಾವಾಗಿದ್ದಾರೆ ಎನ್ನಲಾಗಿದೆ.
ಆದರೆ ನೂರಾನಿ ಚಿಕನ್ ಸೆಂಟರ್ ಮಾಲಕ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೇ, ಮಾಂಸ ಮಾರಾಟ ಮಾಡಲು ಹೋಗಿ ಕಾನೂನು ಕ್ರಮ ಎದುರಿಸುವಂತೆ ಆಗಿದೆ. ರಸ್ತೆಯಲ್ಲಿಯೇ ಬಾಕ್ಸ್ ಗಳನ್ನಿಡುವುದು,ಅಕ್ಕ ಪಕ್ಕದ ಅಂಗಡಿಗಳಿಗೆ ಹಾಗೂ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ದುರ್ವಾಸನೆ ಬರುವಂತೆ ಇಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ ಎನ್ನಲಾಗಿದ್ದು,ಸಾರ್ವಜನಿಕ ಹಿತ ದೃಷ್ಟಿಯಿಂದ ಸಂಬಂಧಿತ ಆರೋಗ್ಯ,ಪೊಲೀಸ್,ಪುರಸಭೆ ಮತ್ತಿತರ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವ ಅಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ.
ಮಹಾಲಯ ಅಮವಾಸ್ಯೆ ಮತ್ತಿತರ ಕಾರಣಗಳಿಂದ ಕೆಲ ಗ್ರಾಹಕರೂ ಸಹ ಮಾಂಸ ಖರೀದಿಗೆ ಅಲ್ಲಿ ಇಲ್ಲಿ ಸುತ್ತಾಡುತ್ತಿರುವಂತೆ ಅಲ್ಲಲ್ಲಿ ಕಂಡು ಬಂದಿದೆ. ಗಾಂದಿ ಜನ್ಮ ದಿನದಂದು ಎಲ್ಲ ಕಡೆಗಳಲ್ಲೂ ಮಾಂಸ,ಮದ್ಯ ಮಾರಾಟ ನಿಷೇಧ ಕಟ್ಟಪ್ಪಣೆಯನ್ನು ಆಡಳಿತ ವರ್ಗ ಮತ್ತಷ್ಟು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ. ಇದೇ ವೇಳೆ ಮದ್ಯ ಮತ್ತು ಮಾಂಸ ಮಾರಾಟಗಾರರು,ತಮಗೆ ನಿಷೇಧ ಇರುವುದು ಗೊತ್ತೇ ಇರಲಿಲ್ಲ,ಅರ್ಜೆಂಟಾಗಿ ಒಬ್ಬರಿಗೆ ಕೊಡುವುದಿತ್ತು ಎಂಬ ಹಾರಿಕೆ ಉತ್ತರ ನೀಡಿ ನುಣುಚಿಕೊಳ್ಳುವ ಬದಲು,ಕಾನೂನಿನ ಅರಿವಿನೊಂದಿಗೆ ತಮ್ಮ ವ್ಯಾಪಾರ – ವಹಿವಾಟು ನಡೆಸಿ ಜವಾಬ್ದಾರಿ ನಿಭಾಯಿಸಬೇಕಿದೆ.
ಸಂಬಂಧಿತ ಅಧಿಕಾರಿಗಳು ಇಂತಹ ವ್ಯಾಪಾರ ವಹಿವಾಟುದಾರರಿಗೆ ಮತ್ತಷ್ಟು ಕಾನೂನಿನ ತಿಳುವಳಿಕೆ ಹೇಳಿ , ಮತ್ತೆ ಮತ್ತೆ ಕಾನೂನು ಉಲ್ಲಂಘನೆ ಕಂಡು ಬಂದರೆ,ಮಾರಾಟ ಪರವಾನಿಗೆ ರದ್ದುಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಇಂದು ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಕೋಳಿ ಮಾಂಸವನ್ನು ,ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ದು,ಕಾನೂನು ರೀತ್ಯ ವಿಲೇವಾರಿ ಮಾಡಿ,ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ