Important
Trending

ಕುದಿಯುವ ಎಣ್ಣೆ ಬಾಣಲೆಯಿಂದ ಕೈಯಿಂದ ವಡೆ ತೆಗೆದ ಭಕ್ತರು

ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ನಾಡಿನ ಹಲವು ದೇವಾಲಯಗಳಲ್ಲಿ ಕುದಿಯುವ ಎಣ್ಣೆ ಬಾಣಲೆಯಿಂದ ಕೈಯಿಂದ ವಡೆ ತೆಗೆಯುವ ಸಂಪ್ರದಾಯ ಕಾಣಬಹುದಾಗಿದೆ.ಇದೆ ವೇಳೆ ಅಂಕೋಲಾ ತಾಲೂಕಿನ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನದ ವಡೆ ಪಂಚಮಿಗೆ ತನ್ನದೇ ಆದ ವಿಶೇಷತೆ ಇದ್ದು ರಾಜ್ಯ ಹೊರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸುವ ಪದ್ಧತಿ ಮುಂದುವರಿದಿದೆ.

ಅಂಕೋಲಾ: ತಾಲೂಕಿನ ಹನುಮಟ್ಟಾದ ಶ್ರೀಲಕ್ಷ್ಮೀ ನಾರಾಯಣ ಮಹಾಮಾಯಾ ದೇವಾಲಯ ಪುರಾತನ ಪ್ರಸಿದ್ಧಿ ಪಡೆದಿದ್ದು ,ಪ್ರವಾಸೋದ್ಯಮ ದೃಷ್ಟಿಯಿಂದಲೂ ತನ್ನದೇ ಆದ ವಿಶೇಷ ಮಾನ್ಯತೆ ಪಡೆದಿದೆ.ಇಲ್ಲಿ ನಡೆಯುವ ಹತ್ತಾರು ಧಾರ್ಮಿಕ ಉತ್ಸವಗಳು ಅತ್ಯಂತ ವಿಶೇಷ ಹಾಗೂ ಕೆಲ ಅಪರೂಪದ ಕ್ಷಣಗಳಿಗೂ ಸಾಕ್ಷಿಯಾಗುತ್ತದೆ ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ನಾಡಿನ ಹಲವು ದೇವಾಲಯಗಳಲ್ಲಿ ಕುದಿಯುವ ಎಣ್ಣೆ ಬಾಣಲೆಯಿಂದ ಕೈಯಿಂದ ವಡೆ ತೆಗೆಯುವ ಧಾರ್ಮಿಕ ಸಂಪ್ರದಾಯ ಕಂಡು ಬರುತ್ತದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕ

ಇದೇ ವೇಳೆ ಅಂಕೋಲಾ ತಾಲೂಕಿನ ಮಹಾಮಾಯ ದೇವಸ್ಥಾನದಲ್ಲಿಯೂ ವಡೆ ತೆಗೆಯಲಾಗುತ್ತದೆಯಾದರೂ ಇಲ್ಲಿನ ವಡೆ ತಯಾರಿಕೆ ರೀತಿ ಮತ್ತಿತರ ಧಾರ್ಮಿಕ ಸಂಪ್ರದಾಯ ಹಾಗೂ ಪೂಜೆ ವಿಧಿ ವಿಧಾನಗಳು ತನ್ನದೇ ಆದ ವಿಶೇಷತೆ ಹೊಂದಿದ್ದು ,ವಡೆ ಪಂಚಮಿ ಎಂದರೆ ಅದು ಮಹಾಮಾಯ ದೇವಸ್ಥಾನದ ಮಹಾಪ್ರಸಾದ ಎನ್ನುಷ್ಟರ ಮಟ್ಟಿಗೆ ರಾಜ್ಯ ಹೊರರಾಜ್ಯಗಳ ಸಾವಿರಾರು ಭಕ್ತರು ಕಾದು ಕುಳಿತು ,ದೇವರ ದರ್ಶನ ಭಾಗ್ಯ ಪಡೆದುಕೊಂಡು ಪ್ರಸಾದ ಸ್ವೀಕರಿಸಿದರೇನೇ ಸಂತೃಪ್ತಿ ಎಂಬ ಭಾವನೆ ಅಸಂಖ್ಯ ಭಕ್ತರಲ್ಲಿದೆ. ಅಕ್ಟೋಬರ್ 22ರ ಮಂಗಳವಾರ ಮಹಾಮಾಯ ಮತ್ತು ಪರಿವಾರ ದೇವಾಲಯಗಲ್ಲಿ ವಡೆ ಪಂಚಮಿ ಉತ್ಸವದ ನಿಮಿತ್ತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ವಿಜ್ರಂಭಣೆಯಿಂದ ನಡೆಯಿತು.

ನಾಗ್ವೇ ಸಂಸ್ಥಾನದ ಶ್ರೀಲಕ್ಷ್ಮೀನಾರಾಯಣ ಮಹಾಮಾಯಾ ದೇವಾಲಯದಲ್ಲಿ ಪ್ರತಿ ವರ್ಷ ಆಶ್ವೀನ ಮಾಸದ ಕೃಷ್ಣ ಪಕ್ಷದ ವದ್ಯ ಪಂಚಮಿಯ ದಿನ ಎಣ್ಣೆ ಕಾವಲಿಯಿಂದ ವಡೆ ತೆಗೆಯುವ ಧಾರ್ಮಿಕ ಆಚರಣೆ ನಡೆಸಲಾಗುತ್ತದೆ. ವಡೆ ಪಂಚಮಿ ಪ್ರಯುಕ್ತ ಮುಂಜಾನೆಯಿಂದಲೇ ಕುಳಾವಿ ಭಕ್ತರಿಂದ ವಿವಿಧ ಹರಕೆ ಸೇವೆಗಳು ಜರುಗಿವು.

ಮದ್ಯಾಹ್ನ ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯೆ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ ನಂತರ ದೇವಾಲಯದ ಆವರಣದಲ್ಲಿ ಇರುವ ಶ್ರೀಭಗವತಿ ದೇವಾಲಯದಲ್ಲಿ ಕಾವಲಿಯಲ್ಲಿ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆಯುವ ಕಾರ್ಯಕ್ರಮ ನಡೆಯಿತು. ಗೋವಾ, ಮಹಾರಾಷ್ಟ್ರ, ರಾಜ್ಯದ ಉಡುಪಿ, ಮಂಗಳೂರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಕುಳಾವಿ ಭಕ್ತರು ಆಗಮಿಸಿ ದೇವರ ಸೇವೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಕ್ತರು ಪಾಲ್ಗೊಂಡು ದೇವರ ವಡೆ ಪ್ರಸಾದ ಸ್ವೀಕರಿಸಿದರು. ರಾತ್ರಿ ವೇಳೆಯೂ ಶ್ರೀ ದೇವರ ಸನ್ನಿಧಿಯಲ್ಲಿ ಭಜನೆ ಸಂಗೀತ ಕಾರ್ಯಕ್ರಮಗಳು ,ವಿಶೇಷ ಪೂಜೆ ನಡೆದವು . ಶ್ರೀ ದೇವರ ಸರ್ವಲಂಕಾರ ಭಕ್ತರ ಮನಸೂರೆಗೊಂಡಿತು. ಶ್ರೀದೇವರ ದರ್ಶನ ಭಾಗ್ಯ ಮತ್ತು ವಡೆ ಪ್ರಸಾದ ಅನ್ನಪ್ರಸಾದ ಸ್ಪೀಕರಿಸಿ ಸಾವಿರಾರು ಭಕ್ತರು ಕೃತಾರ್ಥರಾದರು. ಒಟ್ಟಿನಲ್ಲಿ ಈ ಪ್ರಸಿದ್ಧ ದೇವಾಲಯದಲ್ಲಿ ನಡೆದ ವಡೆ ಪಂಚಮಿ , ಗ್ರಾಮದಲ್ಲಿ ಮತ್ತು ತಾಲೂಕಿನಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button