ಭಟ್ಕಳ: ಕಳೆದ ನಾಲ್ಕು ವರ್ಷಗಳಿಂದ ಭಟ್ಕಳ ತಾಲೂಕಿನ ಹಲವಾರು ಕಡೆಗಳಲ್ಲಿ ರಸ್ತೆಯ ಮೇಲೆ ಹೊಲಸು, ಹರಿದ ಬಟ್ಟೆಯನ್ನು ಹಾಕಿಕೊಂಡು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವನನ್ನು ಕರೆತಂದು ಶುದ್ಧ ಬಟ್ಟೆ ಹಾಕಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಹಿರಿಯ ಸಿವಿಲ್ ಜಡ್ಜ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿ ಅವರು ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ನಡೆಯಬೇಕಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ಸಿದ್ಧರಾಗಿದ್ದರು.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕ
ಈ ವೇಳೆ ನ್ಯಾಯಾಲಯದ ಎದುರುಗಡೆಯಲ್ಲಿ ಸುಮಾರು 50 ವರ್ಷ ಪ್ರಾಯದ ವ್ಯಕ್ತಿಯೋರ್ವ ಹೊಲಸು ಬಟ್ಟೆ, ಕೈಯಲ್ಲಿ ಐದಾರು ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ ಚೀಲಗಳು, ಹೊಲಸು ಗಡ್ಡ, ಕುರುಚಲು ತಲೆಕೂದಲು ಹೊಂದಿ ನಿಂತುಕೊAಡಿದ್ದನ್ನು ನೋಡಿ ಆತನಿಗೆ ಸರಿಯಾದ ಮಾರ್ಗ ತೋರಿಸಬೇಕು ಎಂದು ನಿರ್ಧರಿಸಿ ಆತನನ್ನು ನ್ಯಾಯಾಲಯದ ಆವರಣಕ್ಕೆ ಕರೆಸಿ ಶುದ್ಧ ಬಟ್ಟೆ ಹಾಕಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಸ್ಮಯ ನ್ಯೂಸ್, ಭಟ್ಕಳ