Important
Trending

ಮುಗ್ವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಉತ್ಸವ: ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆ ರದ್ದು

ಹೊನ್ನಾವರ: ಡಿಸೆಂಬರ್ 18 ರಂದು ಹೊನ್ನಾವರದ ಮುಗ್ವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಉತ್ಸವ ನಡೆಯಲಿದೆ. ಆದರೆ, ಈ ವರ್ಷ ಚಂಪಾಷಷ್ಠಿ ಉತ್ಸವದ ಮೊದಲು ನಡೆಸಲಾಗುವ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯ ಮೂಲಕ ತಿಳಿಸಿದೆ. ಪ್ರತಿ ವರ್ಷ ಮುಗ್ವಾದ ಚಂಪಾಷಷ್ಠಿ ಉತ್ಸವಕ್ಕೂ ಮುನ್ನ ಅಂಗಡಿ ಮುಂಗಟ್ಟು ಸ್ಥಳದ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಅಂಗಡಿ ಮುಂಗಟ್ಟುಗಳಿಗೆ ನೀಡಲು ಸ್ಥಳದ ಅಭಾವ ಇರುವುದರಿಂದ ಈ ವರ್ಷ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಆದ ಕಾರಣ ಚಂಪಾಷಷ್ಠಿ ಉತ್ಸವದ ದಿನದಂದು ವ್ಯಾಪಾರಸ್ಥರು ದೇವಾಲಯದ ಸ್ಥಳಗಳಲ್ಲಿ ಅಂಗಡಿಗಳನ್ನು ಹಾಕದಂತೆ ಮಗ್ವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟಿಗಳು ಹಾಗೂ ಸೇವಾ ಸಮಿತಿಯವರು ವಿನಂತಿಸಿಕೊoಡಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button