Big News
Trending

Kumta Vaibhava ದಲ್ಲಿ ಖ್ಯಾತ ರ‍್ಯಾಪ್ ಸಿಂಗರ್ ರಾಹುಲ್ ಡಿಟ್ಟೋ ಮ್ಯಾಜಿಕ್ : ಬಿಜ್ಜು ಸಾಂಗ್ ಗೆ ಹುಚ್ಚೆದ್ದು ಕುಣಿದ ಜನತೆ

ಕುಮಟಾ: ಮಣಕಿ ಮೈದಾನದಲ್ಲಿ ತಾಂಡವ ಕಲಾನಿಕೇತನ ಬೆಂಗಳೂರು ಹಾಗೂ ವೈಭವ ಸಮಿತಿ ಕುಮಟಾ ವತಿಯಿಂದ ನಡೆದ ಕುಮಟಾ ವೈಭವ 2023 ಇದರ 4 ನೇ ದಿನದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯುವುದಲ್ಲದೆ, ನೆರೆದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸುವಂತಿತ್ತು. ಸಭಾ ಕಾರ್ಯಕ್ರಮದ ಬಳಿಕ ಕನ್ನಡದ ಖ್ಯಾತ ರ‍್ಯಾಪ್ ಸಿಂಗರ್ ರಾಹುಲ್ ಡಿಟ್ಟೋ ಹಾಗೂ ಎಮ್.ಸಿ ಬಿಜ್ಜು ಇವರ ರ‍್ಯಾಪ್ ಸಾಂಗ್ ಎಲ್ಲರ ಗಮನ ಸೆಳೆಯಿತು.

ಹೌದು… ಕುಮಟಾ ವೈಭವದ 4 ನೇ ದಿನದ ವಿಶೇಷವಾಗಿ ಕನ್ನಡದ ಸುಪ್ರಸಿದ್ದ ರ‍್ಯಾಪ್ ಸಿಂಗರ್ ರಾಹುಲ್ ಡಿಟ್ಟೋ ಹಾಗೂ ಎಮ್.ಸಿ ಬಿಜ್ಜು ಅವರಿಂದ ರ‍್ಯಾಪ್ ಸಿಂಗಿAಗ್ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನಿಟ್ಟಿನಲ್ಲಿ ಕುಮಟಾದ ಮಣಕಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸಾವಿರಾರು ಅಭಿಮಾನಿಗಳು, ಪ್ರೇಕ್ಷಕರ ಎದುರು ಉತ್ತಮ ರ‍್ಯಾಂಪ್ ಸಾಂಗ್ ಪ್ರದರ್ಶನ ನಡೆಯಿತು. ರಾಹುಲ್ ಡಿಟ್ಟೋ ಹಾಗೂ ಎಮ್.ಸಿ ಬಿಜ್ಜು ಅವರ ಪವರ್ ಪುಲ್ ರ‍್ಯಾಪ್‌ಗೆ ಪ್ರೇಕ್ಷಕರೆಲ್ಲೂ ಹುಚ್ಚೆದ್ದು ಕುಣಿದರು.

ಕಾರ್ಯಕ್ರಮ ಪ್ರಾರಂಭಗೊoಡ ಕೆಲವೇ ಕ್ಷಣಗಳಲ್ಲಿ ವೇದಿಕೆಯ ಸುತ್ತಲೂ ಮುತ್ತಿಗೆ ಹಾಕಿದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ರ‍್ಯಾಪ್ ಸಿಂರ‍್ಸ್ ಜೊತೆಗೆ ತಾವು ಸಹ ಹೆಜ್ಜೆ ಹಾಕಿದರು. ಸರಿಸುಮಾರು 1 ಗಂಟೆಗಳ ಕಾನ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಾರ್ವಜನಿಕರು ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಕರ್ನಾಟಕ ರಾಜ್ಯದಾದ್ಯಂತ ಲಕ್ಷಾಂತರ ಅಭಿಮಾನಿ ಭಳಗವನ್ನು ಹೊಂದಿರುವ ಕನ್ನಡ ರ‍್ಯಾಪ್ ಸಿಂಗರ್ ಎಮ್.ಸಿ ಬಿಜ್ಜು ಹಾಗೂ ರಾಹುಲ್ ಡಿಟ್ಟೋ ಕುಮಟಾ ಜನತೆಯನ್ನು ಕೂಡ ತಮ್ಮ ರ‍್ಯಾಪ್ ಸಾಂಗ್ ರಂಜಿಸಿ, ಎಲ್ಲರ ಪ್ರೀತಿ ಅಭಿಮಾನಕ್ಕೆ ಪಾತ್ರರಾದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button