Follow Us On

WhatsApp Group
Important
Trending

ಬಾವಿಯಲ್ಲಿ ಬಿದ್ದ ಕಾಡುಹಂದಿ: ಯಶಸ್ವಿ ಕಾರ್ಯಾಚರಣೆ

ಅಂಕೋಲಾ : ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳವಳ್ಳಿ ಕನಕನಹಳ್ಳಿ ಗ್ರಾಮದಲ್ಲಿ ರಾಘವೇಂದ್ರ ಗಾವಂಕರ ಎನ್ನುವವರ ಮನೆಯ ತೋಟದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಾವಿಯ ಗುಂಡಿಯಲ್ಲಿ ಆಕಸ್ಮಿಕವಾಗಿ ಕಾಡು ಹಂದಿ ಒಂದು ಬಿದ್ದಿತ್ತು. ಇದನ್ನು ಗಮನಿಸಿದ್ದ ತೋಟದ ಮಾಲಕ ರಾಘವೇಂದ್ರ ಗಾಂವಕರ,ಪ್ರಾಣಿ ದಯೆ ಮತ್ತು ವನ್ಯಜೀವಿ ಸಂರಕ್ಷಣೆ ಉದ್ದೇಶದಿಂದ ರಾಮನ ಗುಳಿ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

KSRTC ಬಸ್ ಡಿಕ್ಕಿ: ಆಸ್ಪತ್ರೆಗೆ ಬರುತ್ತಿದ್ದ ಕಾರಿನಲ್ಲಿದ್ದ ಗಂಡ ಸಾವು, ಹೆಂಡತಿ ಗಂಭೀರ

ತಕ್ಷಣವೇ ಸ್ಪಂದಿಸಿದ ಆರ್ ಎಫ್ ಓ ಸುರೇಶ್ ನಾಯ್ಕ,ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ,ಕಾಡು ಹಂದಿಯ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಹಂದಿಯನ್ನು ಮೇಲೆತ್ತಬೇಕು ಎನ್ನುತ್ತಿರುವಾಗ ರಾತ್ರಿ ಕತ್ತಲು ಮತ್ತಿತರ ಕಾರಣಗಳಿಂದ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿತ್ತು. ಬೆಳಗಿನ ವೇಳೆ ಮತ್ತೆ ಕಾರ್ಯಾಚರಣೆ ಮುಂದುವರೆಸಿ,ನಿರ್ಮಾಣ ಹಂತದಲ್ಲಿದ್ದ ಬಾವಿಯ ಗುಂಡಿಯಲ್ಲಿ ಬಲೆಗಳನ್ನು ಬಿಟ್ಟು,ಬಾವಿಗುಂಡಿಯಿಂದ ಹಂದಿಯನ್ನು ಮೇಲೆತ್ತಿ,ರಕ್ಷಣೆ ಮಾಡುವ ಮೂಲಕ ಅರಣ್ಯ ಇಲಾಖೆ ಸ್ಥಳೀಯರ ಸಹಕಾರದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿತು.

ಪ್ರತ್ಯೇಕ ಇನ್ನೊಂದು ಘಟನೆಯಲ್ಲಿ ಅಂಕೋಲಾ ತಾಲೂಕಿನ ಹುಲಿ ದೇವರವಾಡ ಬಳಿ ರೈಲ್ವೆ ಸುರಂಗ ಮಾರ್ಗದ , ರೈಲ್ವೆ ಟ್ರ್ಯಾಕ್ ಪಕ್ಕ, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕಾಡು ಹಂದಿಯ ಕಳೆ ಬರವನ್ನು ಪರಿಶೀಲಿಸಿದ ಅಂಕೋಲಾ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,ಕಾನೂನು ಕ್ರಮ ಕೈಗೊಂಡು,ಕಟ್ಟಿಗೆ ಮೇಲಿಟ್ಟು ದಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button