Important
Trending

ರೈಲಿನಿಂದ ಕಾಲುಜಾರಿ ಬಿದ್ದು ಬಾಲಕಿ ಸಾವು

ಭಟ್ಕಳ : ತಾಲೂಕಿನ ಮುರುಡೇಶ್ವರದ ಬಳಿ ರೈಲಿನಿಂದ 11 ವರ್ಷದ ಬಾಲಕಿ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. ಅಲ್ಜಿಯಾಬಾನು ಮೃತ ದುರ್ದೈವಿಯಾಗಿದ್ದು ಈಕೆ ರಾಜಸ್ಥಾನದ ಗಂಗಾಪುರ ಸಿಟಿಯ ನಿವಾಸಿಯಾಗಿದ್ದಾಳೆ. ತನ್ನ ತಂದೆ ತಾಯಿಯೊಂದಿಗೆ ಕೋಟ ಜಂಕ್ಷನ್‍ನಿಂದ ಕೇರಳ ರಾಜ್ಯದ ಕಣ್ಣೂರಿಗೆ ಅಮೃತಸರ್ ಕುಚುವೇಲಿ ಸೂಪರ್ ಫಾಸ್ಟ್ ರೈಲಿನ ಮೂಲಕ ತರಳುತ್ತಿರುವಾಗ ನವೆಂಬರ್ 25 ರ ರಾತ್ರಿ 9 ಗಂಟೆಗೆ ಈ ದುರ್ಘಟನೆ ನಡೆದಿದೆ.

ಘಟನೆಯಲ್ಲಿ ಮಗುವಿನ ತಲೆಗೆ ತೀವೃ ಸ್ವರೂಪದ ಗಾಯಗಳಾಗಿದ್ದು ಮುರುಡೇಶ್ವರ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ನವೆಂಬರ್ 28 ರಂದು ಮಗು ಚಿಕಿತ್ಸೆಗೆ ಸ್ಪಂಧಿಸದೆ ಸಾವನಪ್ಪಿದೆ ಎಂದು ಹೇಳಲಾಗಿದೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button