Focus NewsImportant
Trending

ದಾಖಲೆ ಇಲ್ಲದೇ 14 ಲಕ್ಷಕ್ಕೂ ಅಧಿಕ ಹಣ ಸಾಗಾಟ: ಅಕ್ರಮ ಹಣದೊಂದಿಗೆ ಮೂವರು ಪೋಲಿಸ್ ವಶಕ್ಕೆ

ಭಟ್ಕಳ: ದಾಖಲೆ ಇಲ್ಲದೇ ಲಕ್ಷಾಂತರ ಮೌಲ್ಯದ ಅಕ್ರಮ ಹಣವನ್ನು ಕಾರಿನಲ್ಲಿ ಸಾಗಿಸುವ ವೇಳೆ ಭಟ್ಕಳ ತಾಲೂಕಿನ ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಯಶ್ವಂತ ಸುಕ್ರ ಗೊಂಡ ಕಟಗಾರಕೊಪ್ಪ ಭಟ್ಕಳ, ಶ್ರೀನಿವಾಸ ನಾರಾಯಣ ಗೌಡ ಗುಣವಂತೆ ಹೊನ್ನಾವರ, ರಘು ಅನಂತ ನಾಯ್ಕ ಈ ಮೂವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡವರು ಎಂದು ತಿಳಿದು ಬಂದಿದೆ.

ನಗರ ಠಾಣೆಯ ಪಿಎಸ್‌ಐ ಸಂತೋಷ ಹಾಗೂ ಸಿಬ್ಬಂದಿಗಳು ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ನಿಂತ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಭಟ್ಕಳ ಕಡೆಗೆ ಇಕೋ ಕಾರನಲ್ಲಿ 14,90,125 ಲಕ್ಷ ಮೊತ್ತದ ಯಾವುದೇ ದಾಖಲೆ ಇಲ್ಲದ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ತಪಾಸಣೆಯ ಮಾಡಿದಾಗ ಮೂವರು ಆರೋಪಿಗಳು ಹಣವನ್ನು ಮುರುಡೇಶ್ವರದ ಕಡೆಗೆ ಸಾಗಿಸುತ್ತಿರುವುದಾಗಿ ಪೋಲಿಸರಲ್ಲಿ ತಿಳಿಸಿದ್ದಾರೆ. ಮೂವರು ಆರೋಪಿಗಳೊಂದಿಗೆ, ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ದಪುರದಲ್ಲೂ ಕಾರ್ಯಾಚರಣೆ

ಸಿದ್ದಾಪುರ : ಬೈಕ್ ನಲ್ಲಿ ದಾಖಲೆ ರಹಿತ ಹಣ ಸಾಗಿಸುತ್ತಿರುವ ವೇಳೆ ಚೂರಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಒಂದು ಲಕ್ಷ ದ ಹತ್ತು ಸಾವಿರ ನಗದು ಹಣ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ . ಜೋಗದಿಂದ – ತಾಳಗುಪ್ಪ ದ ಕಡೆಗೆ ಬೈಕ್ ನಲ್ಲಿ ಹೊಗುತ್ತಿದ್ದ   ಸತ್ತಾರ್ ಶೇಖ್ ತಂದೆ ಅಬ್ದುಲ್ ಸತ್ತಾರ್ ಸಾಬ್ ಕಣಲೆ ಗ್ರಾಮ ತಾಳಗುಪ್ಪ ಅವರ ಬೈಕ್ ಡಿಕ್ಕಿಯಲ್ಲಿ ದಾಖಲೆ ಇಲ್ಲದ ಹಣ ವಶಕ್ಕೆ ಪಡೆದಿದ್ದಾರೆ.

ಸಿದ್ಧಾಪುರ ಇನ್ಸ್‌ಪೆಕ್ಟರ್ ಕುಮಾರ್ ಕೆ ಚೆಕ್ ಪೋಸ್ಟ್ ಮ್ಯಾಜಿಸ್ಟ್ರೇಟ್ ಬಾಸ್ಕರ್, kptcl ಜೂನಿಯರ್ ಇಂಜಿನೀಯರ್, ಅಶೋಕ್ ಹೆಗಡೆ ಶಿಕ್ಷಕರು, ಸಿಬ್ಬಂದಿಗಳಾದ ಪೂರ್ಣಿಮಾ, ಪ್ರಕಾಶ, ಅರುಣ್ ರವರು  ವಶಕ್ಕೆ ಪಡೆದು ದಾಖಲೆಯನ್ನು ಹಾಜರು ಪಡಿಸದ ಕಾರಣ ಮುಂದಿನ ಕ್ರಮಕ್ಕಾಗಿ  ಸಹಾಯಕ ಚುನಾವಣಾ ಅಧಿಕಾರಿಗಳಿಗೆ – (ಕ್ಯಾಶ್ ಸೀಜರ್) ಕಮಿಟಿ ಗೆ ಹಸ್ತಾಂತರಿಸಿದ್ದಾರೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ ಮತ್ತು ದಿವಾಕರ ಸಂಪಖoಡ, ಸಿದ್ದಾಪುರ

Related Articles

Back to top button