Follow Us On

Google News
Big News
Trending

ಕುಮಟಾದಲ್ಲಿಂದು 45 ಕರೊನಾ ಕೇಸ್ ಪತ್ತೆ

ನೆಲ್ಲಿಕೇರಿ, ಹೆಗಡೆ, ಹೊಲನಗದ್ದೆ, ಮೂರೂರು, ಧಾರೇಶ್ವರ, ಗೋಕರ್ಣ, ಚಿತ್ರಗಿ, ಸಂತೇಗುಳಿ, ಹೆರವಟ್ಟಾ, ಅಳ್ವೇಕೊಡಿ, ಜೇಷ್ಠಪುರ, ಯಲವಳ್ಳಿ, ಬಗ್ಗೋಣ ಭಾಗದಲ್ಲಿ ಸೋಂಕು ಪತ್ತೆ
ತಾಲೂಕಿನಲ್ಲಿ 600ರ ಗಡಿದಾಟಿದ ಸೋಂಕಿತರ ಸಂಖ್ಯೆ

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಬರೋಬ್ಬರಿ 45 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ನೆಲ್ಲಿಕೇರಿ, ಹೆಗಡೆ, ಹೊಲನಗದ್ದೆ, ಮೂರೂರು, ಧಾರೇಶ್ವರ, ಗೋಕರ್ಣ, ಚಿತ್ರಗಿ, ಸಂತೇಗುಳಿ, ಹೆರವಟ್ಟಾ, ಅಳ್ವೇಕೊಡಿ, ಜೇಷ್ಠಪುರ, ಯಲವಳ್ಳಿ, ಬಗ್ಗೋಣ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ನೆಲ್ಲಿಕೇರಿ ಭಾಗದಲ್ಲೇ 10 ಕೇಸ್ ದೃಢಪಟ್ಟಿದೆ. ಹೊಲನಗದ್ದೆಯಲ್ಲಿ 4, ಧಾರೇಶ್ವರದಲ್ಲಿ 2 , ಗೋಕರ್ಣದಲ್ಲಿ 5, ಚಿತ್ರಗಿಯಲ್ಲಿ ಮೂರು ಕೇಸ್ ದಾಖಲಾಗಿದೆ.

ನೆಲ್ಲಿಕೇರಿಯ 24 ವರ್ಷದ ಯುವತಿ, ನೆಲ್ಲಿಕೇರಿಯ 23 ವರ್ಷದ ಯುವತಿ, ನೆಲ್ಲಿಕೇರಿಯ 21 ವರ್ಷದ ಯುವತಿ, ನೆಲ್ಲಿಕೇರಿಯ 19 ವರ್ಷದ ಯುವತಿ, ನೆಲ್ಲಿಕೇರಿಯ 17 ವರ್ಷದ ಯುವತಿ, ನೆಲ್ಲಿಕೇರಿಯ 11 ವರ್ಷದ ಬಾಲಕ, ನೆಲ್ಲಿಕೇರಿಯ 5 ವರ್ಷದ ಬಾಲಕಿ, ನೆಲ್ಲಿಕೇರಿಯ 2 ವರ್ಷದ ಮಗು, ನೆಲ್ಲಿಕೇರಿಯ 40 ವರ್ಷದ ಪುರುಷ, ನೆಲ್ಲಿಕೇರಿಯ 70 ವರ್ಷದ ವೃದ್ಧೆಗೆ ಸೋಂಕು ಕಾಣಿಸಿಕೊಂಡಿದೆ. ಹೊಲನಗದ್ದೆಯ 58 ವರ್ಷದ ಮಹಿಳೆ, ಹೊಲನಗದ್ದೆಯ 17 ವರ್ಷದ ಯುವತಿ, ಹೊಲನಗದ್ದೆಯ 13 ವರ್ಷದ ಬಾಲಕಿ, ಜೇಷ್ಠಪುರದ 63 ವರ್ಷದ ಮಹಿಳೆ, ಅಳ್ವೇಕೊಡಿಯ 52 ವರ್ಷದ ಮಹಿಳೆ, ಅಳ್ವೇಕೊಡಿಯ 54 ವರ್ಷದ ಪುರುಷಗೂ ಸೋಂಕು ದೃಢಪಟ್ಟಿದೆ.

ಯಲವಳ್ಳಿಯ 57 ವರ್ಷದ ಪುರುಷ, ಹೆರವಟ್ಟಾದ 20 ವರ್ಷದ ಬಾಲಕ, ಮೂರೂರಿನ 54 ವರ್ಷದ ಮಹಿಳೆ, ಗೋಕರ್ಣದ 42 ವರ್ಷದ ಮಹಿಳೆ, ಗೋಕರ್ಣದ 40 ವರ್ಷದ ಪುರುಷ, ಗೋಕರ್ಣದ 2 ವರ್ಷದ ಮಗು, ಗೋಕರ್ಣದ 55 ವರ್ಷದ ಮಹಿಳೆ, 30 ವರ್ಷದ ಮಹಿಳೆ, 25 ವರ್ಷದ ಮಹಿಳೆ, ಕುಮಟಾದ 52 ವರ್ಷದ ಪುರುಷ, ಕುಮಟಾದ 32 ವರ್ಷದ ಪುರುಷ, ಕುಮಟಾದ 20 ವರ್ಷದ ಯುವಕ, ಕುಮಟಾದ 29 ವರ್ಷದ ಯುವತಿ, ಕುಮಟಾದ 75 ವರ್ಷದ ವೃದ್ಧೆ, ಕುಮಟಾದ 60 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಚಿತ್ರಗಿಯ 47 ವರ್ಷದ ಮಹಿಳೆ, ಚಿತ್ರಗಿಯ 60 ವರ್ಷದ ಮಹಿಳೆ, ಬರ್ಗಿಯ 68 ವರ್ಷದ ಮಹಿಳೆ, ಬಗ್ಗೋಣದ 36 ವರ್ಷದ ಮಹಿಳೆ, ಶಶಿಹಿತ್ಲದ 26 ವರ್ಷದ ಮಹಿಳೆ, ಹೆಗಡೆಯ 36 ವರ್ಷದ ಪುರುಷ, ಹೆಗಡೆಯ 11 ವರ್ಷದ ಬಾಲಕಿ, ಹೆಗಡೆಯ 14 ವರ್ಷದ ಬಾಲಕ, ಹೆಗಡೆಯ 40 ವರ್ಷದ ಮಹಿಳೆ, ಸಂತೆಗುಳಿಯ 70 ವರ್ಷದ ವೃದ್ಧೆ, ಕುಮಟಾ ಹೊಸ busstand ಸಮೀಪದ 21 ವರ್ಷದ ಯುವಕ, 56 ವರ್ಷದ ಮಹಿಳೆ, ಧಾರೇಶ್ವರದ 56 ವರ್ಷದ ಮಹಿಳೆ, ಧಾರೇಶ್ವರದ 29 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದಿನ 45 ಪ್ರಕರಣ ಬಂದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 600 ರ ಗಡಿ ದಾಟಿದೆ.

ಅಂಕೋಲಾದಲ್ಲಿಂದು 19 ಕೇಸ್ : ಗುಣಮುಖ 9

ಅಂಕೋಲಾ : ತಾಲೂಕಿನ ಪಟ್ಟಣ ಮತ್ತು ಗ್ರಾಮಾಂತರ ಭಾಗಗಳಿಂದ ರವಿವಾರ ಒಟ್ಟೂ 19 ಕೋವಿಡ್ ಕೇಸ್‍ಗಳು ಪತ್ತೆಯಾಗಿದ್ದು, ಅವುಗಳಲ್ಲಿ 18 ಪ್ರಕರಣಗಳು ಆಯಾ ವ್ಯಾಪ್ತಿಯ ಈ ಹಿಂದಿನ ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ. ಉಳಿದ ಇನ್ನೊಂದು ಪ್ರಕರಣವು ಮಂಗಳೂರಿನ ಟ್ರಾವೆಲ್ ಹಿಸ್ಟರಿ ಹೊಂದಿದೆ ಎನ್ನಲಾಗಿದೆ.
ಇಂದು 64 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಸೋಂಕು ಮುಕ್ತರಾದ 9 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮೂಲಕ 88 ಪ್ರಕರಣ ಗಳು ಸಕ್ರೀಯವಾಗಿವೆ.

ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ ಕುಮಟಾ ಮತ್ತು ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು

Back to top button