Follow Us On

WhatsApp Group
Important
Trending

ಉತ್ತರ ಕನ್ನಡದಲ್ಲಿ ದಾಖಲೆ ಬರೆದ ಕರೊನಾ ಕೇಸ್: Coronavirus case in Uttar Kannada increased

  • ಜಿಲ್ಲೆಯಾದ್ಯಂತ ಇಂದು 238 ಪಾಸಿಟಿವ್
  • ಹೊನ್ನಾವರದಲ್ಲಿ ಒಂದು ಸಾವು
  • ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,999 ಕ್ಕೆ ಏರಿಕೆ
[sliders_pack id=”1487″]

ಕಾರವಾರ: ದಿನಕಳೆದಂತೆ ಕರೊನಾ ಆರ್ಭಟ ತಾಲೂಕಿನ ಎಲ್ಲಾ ಭಾಗದಲ್ಲಿ ಹೆಚ್ಚುತ್ತಿದೆ. ನಿನ್ನೆ 213 ಪ್ರಕರಣ ದಾಖಲಾದ ಬೆನ್ನಲ್ಲೆ, ಇಂದು 238 ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ, ಕುಮಟಾದಲ್ಲಿ 45, ಅಂಕೋಲಾ 21, ಹೊನ್ನಾವರದಲ್ಲಿ 28, ಶಿರಸಿಯಲ್ಲಿ 35, ಸಿದ್ದಾಪುರ 18, ಯಲ್ಲಾಪುರದಲ್ಲಿ 28, ಕಾರವಾರದಲ್ಲಿ 23, ಮುಂಡಗೋಡಿನಲ್ಲಿ 10, ಜೋಯ್ಡಾ 4, ಹಾಗು ಹಳಿಯಾಳದಲ್ಲಿ 26 ಮಂದಿಗೆ ಸೋಂಕು ದೃಢಪಟ್ಟಿದೆ.


ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 97 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹಳಿಯಾಳದಲ್ಲಿ 30 ಮತ್ತು ಶಿರಸಿಯಲ್ಲಿ 22, ಕಾರವಾರದಲ್ಲಿ 4, ಕುಮಟಾದಲ್ಲಿ 9, ಜೊಯಿಡಾದಲ್ಲಿ 10 , ಭಟ್ಕಳದಲ್ಲಿ 22, ಹಳಿಯಾಳದಲ್ಲಿ 30 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹೊನ್ನಾವರದಲ್ಲಿ ಒಂದು ಸಾವು

ಹೊನ್ನಾವರದಲ್ಲಿ ಓರ್ವ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಇಂದು 213 ಕೇಸ್ ದಾಖಲಾದ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,999 ಕ್ಕೆ ಏರಿಕೆಯಾಗಿದೆ. 4,298 ಮಂದಿ ಗುಣಮುಖರಾಗಿದ್ದಾರೆ. 840 ಸೋಂಕಿತರಿಗೆ ಹೋಮ್ ಐಸೋಲೇಷ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್,

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356

Back to top button