Important
Trending

ಜಮೀನು ನೊಂದಣಿಗೆ ಲಂಚ ಆರೋಪ: ಶಿರಸಿಯ ಸಬ್ ರಿಜಿಸ್ಟರ್ ರಾಧಮ್ಮ ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಾಧಮ್ಮ

ಶಿರಸಿ: ದಾನ ನೀಡಿದ ಜಮೀನನ್ನು ನೊಂದಣಿ ಮಾಡಿಕೊಡಲು ಮೂರು ಸಾವಿರ ಲಂಚ ಕೇಳಿದ ಶಿರಸಿಯ ಸಬ್ ರಿಜಿಸ್ಟರ್ ರಾಧಮ್ಮ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿರಸಿಯ ದಾಸನಕೊಪ್ಪದ ಬಸವರಾಜ್ ನಂದಿಕೇಶ್ವರ್ ಮಠ ಅವರ ದೂರಿನ ಆಧಾರದಲ್ಲಿ ಲೋಕಾಯುಕ್ತ ಎಸ್ .ಪಿ ಕುಮಾರ್ ಚಂದ್ರ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ. 3 ಗುಂಟೆಜಮೀನನ್ನು ದಾನ ನೀಡಿದ್ದು, ಇದನ್ನು ನೊಂದಣಿ ಮಾಡಿಕೊಡಲು 3 ಸಾವಿರ ಲಂಚ ವನ್ನು ಸಬ್ ರಿಜಿಸ್ಟರ್ ರಾಧಮ್ಮ ಕೇಳಿದ್ದರು. ಈ ವೇಳೆ ಲಂಚದ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಧಮ್ಮನನ್ನು ಹೆಚ್ಚಿನ ತನಿಖೆಗೆ ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಸಂಜುಕುಮಾರ್, ಅಲಿ ಮುಂತಾದವರು ಭಾಗಿಯಾಗಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button