ಇಲ್ಲಿ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿ: ಗೌರಮ್ಮನ ದರ್ಶನ ಪಡೆಯಲು ಹರಿದುಬರುತ್ತಿರುವ ಭಕ್ತರ ದಂಡು
ಸಿದ್ದಾಪುರ: ಭಕ್ತರ ಇಷ್ಟಾರ್ಥ ಈಡೇರಿಸುವ ಬೇಡಿದ ವರ ಕೊಡುವ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಪ್ರಸಿದ್ಧ ಮುಠ್ಠಳ್ಳಿ ಗೌರಮ್ಮನ ದರ್ಶನ ಪಡೆಯಲು ಭಕ್ತರ ದಂಡೆ ಹರಿದು ಬರುತ್ತಿದೆ. ಅರಸರ ಕಾಲದಿಂದಲೂ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷವಾಗಿ ಪೂಜಿಸುತ್ತ ಆಚರಣೆ ಮಾಡುತ್ತ ಬರಲಾಗುತ್ತಿದೆ. ಇಲ್ಲಿ ಹರಕೆ ಹೊತ್ತರೆ ಶ್ರೀ ದೇವಿಯು ಭಕ್ತರ ಕೋರಿಕೆ ಈಡೇರಿಸುತ್ತಾಳೆ ಎಂದು ಭಕ್ತರು ಹೇಳುತ್ತಾರೆ.
Anganwadi Recruitment: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ
ಕಂಕಣ ಭಾಗ್ಯ, ಸಂತಾನ ಭಾಗ್ಯ ಮುಂತಾದ ಹಲವಾರು ಸಮಸ್ಯೆ ಗಳಿಗೆ ಹರಕೆ ಹೊರುತ್ತಾರೆ. ವರ್ಷದಲ್ಲಿ ಒಂದು ಬಾರಿ ಮಾತ್ರ ವಿಶೇಷ ಆಚರಣೆ ನಡೆಯುತ್ತದೆ. ಚೌತಿಯ 4 ದಿನಗಳ ಕಾಲ ದೇವಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ದೊಂದಿಗೆ ಪೂಜಿಸಿ ನಂತರ ವಿಸರ್ಜನೆ ಮಾಡುತ್ತಾರೆ. ದರ್ಶನ ಕ್ಕೆ ಬರುವ ಭಕ್ತರಿಗೆ ಪ್ರತಿ ದಿನ ಅನ್ನ ಸಂತರ್ಪಣೆ ಜರುಗುತ್ತದೆ. ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.