Focus NewsImportant
Trending

ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾಮಹೋತ್ಸವ: ಮಾರುತಿ ಗುರೂಜಿಯವರಿಂದ ವಿಶೇಷ ಪೂಜೆ

ಬಂಗಾರಮಕ್ಕಿ: ಶ್ರೀರಾಮನವಮಿ ಪ್ರಯುಕ್ತ ಪರಮಪೂಜ್ಯ ಶ್ರೀ ಮಾರುತಿಗುರೂಜಿಯವರು ಶ್ರೀ ವನವಾಸಿ ಸೀತಾ-ರಾಮ-ಲಕ್ಷಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ವೀರಾಂಜನೇಯದೇವಾಲಯದಲ್ಲಿಯೂ ಶ್ರೀರಾಮನವಮಿ ನಿಮಿತ್ತಅಷ್ಟಾವದಾನ ಪೂಜೆ, ಮಹಾಪೂಜೆ, ಪಲ್ಲಕ್ಕಿಉತ್ಸವ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾಮಹೋತ್ಸವವು ಶ್ರೀರಾಮನವಮಿಯಿಂದ ಆರಂಭವಾಗಿ ಏಪ್ರಿಲ್ 6 ರ ಹನುಮ ಜಯಂತಿಯವರೆಗೆ ಜರುಗಲಿದೆ.

ಮುಂಜಾನೆ ಭಜನಾ ಆರಂಭದೊoದಿಗೆಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀರಾಮನವಮಿಯ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೋಂಡು ಶ್ರೀ ರಾಮನಕ್ರಪೆಗೆ ಪಾತ್ರರಾದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button