ಗಣಪತಿ ದೇವಸ್ಥಾನದ ಯೋಗ ಕಕ್ಷೆಯಲ್ಲಿ ವಿಶ್ವ ಧ್ಯಾನ ದಿನಾಚರಣೆ: ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜನೆ
ಅಂಕೋಲಾ : ಪತಂಜಲಿ ಯೋಗ ಸಮಿತಿ ವತಿಯಿಂದ ಪಟ್ಟಣದ ಕೆ.ಸಿ. ರಸ್ತೆ ಅಂಚಿಗಿರುವ ಗಣಪತಿ ದೇವಸ್ಥಾನದ ಯೋಗ ಕಕ್ಷೆಯಲ್ಲಿ ವಿಶ್ವ ಧ್ಯಾನ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಈಶ್ವರೀಯ ವಿದ್ಯಾಲಯದ ಬಿ.ಕೆ ವಿದ್ಯಾ ಮುಖ್ಯ ಅತಿಥಿ ಸ್ಥಾನದಲ್ಲಿ ಉಪಸ್ಥಿತರಿದ್ದು ಮಾತನಾಡಿ , ಮನುಷ್ಯನಿಗೆ ಧ್ಯಾನ ದ ಅಗತ್ಯ ಏಕಿದೆ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು. ‘ಮೈತ್ರೇಯ ಧ್ಯಾನ’ ದ ಧ್ಯಾನ ಸಾಧಕಿ ಸುಧಾ ಶೆಟ್ಟಿ , ನೆರೆದವರಿಗೆ ಮಾರ್ಗದರ್ಶನ ಧ್ಯಾನ ಮಾಡಿಸಿ ಧ್ಯಾನ ದಿಂದ ತಮಗೆ ಆಗಿರುವ ಕೆಲ ಅನುಭವಗಳನ್ನು ಹಂಚಿಕೊಂಡು ಎಲ್ಲರಿಗೂ ಈ ಧ್ಯಾನ ಪ್ರಚಾರ ಮಾಡುವುದು ತಮ್ಮ ಗುರಿ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ವಾಭಿಮಾನ ಟ್ರಸ್ಟ್ ನ ಡಾ.ವಿಜಯದೀಪ ಧ್ಯಾನ ಮಾಡಿ ಆರೋಗ್ಯ ವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು. ಸಾಮಾಜಿಕ ಜಾಲತಾಣ ಪ್ರಭಾರಿ ಸ್ಮಿತಾ ನಾಯ್ಕ ಮಾತನಾಡಿದರು. ಕಿಸಾನ್ ಭಾರತ ವಿಭಾಗದ ಅಧ್ಯಕ್ಷ ಅಭಯ್ ಮರಬಳ್ಳಿ, ಯುವ ಪ್ರಭಾರಿ ಸತೀಶ ನಾಯ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದೋನ್ನತಿಯೊಂದಿಗೆ ವರ್ಗಾವಣೆ ಗೊಂಡಿರುವ ಬ್ಯಾಂಕ್ ಉದ್ಯೋಗಿ ವಿಜಯ ಕುಲಕರ್ಣಿ ಅವರನ್ನುಅಭಿನಂದಿಸಿ ಶುಭ ಹಾರೈಸಲಾಯಿತು.
ಪತಂಜಲಿಯ ಯೋಗ ಸಮಿತಿಯ ತಾಲೂಕು ಪ್ರಭಾರಿ ವಿನಾಯಕ ಗುಡಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಕೆ.ನಾಯರ್ ಸ್ವಾಗತಿಸಿದರು. ಕು. ಆರ್ಯಾ ಶೆಟ್ಟಿ ಪ್ರಾರ್ಥನೆ ಗೀತೆ ಹಾಡಿದರು. ರಾಧಿಕಾ ಆಚಾರಿ ವಂದಿಸಿದರು. ನಿರುಪಮಾ ಅಂಕೋಲೇಕರ್ ನಿರೂಪಿಸಿದರು. ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು -ಸದಸ್ಯರು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ