ಹಿಚ್ಕಡ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ರಾಘವೇಂದ್ರ ನಾಯಕ & ಟಿಮ್ ಗೆ ಹೆಚ್ಚಿನ ಸ್ಥಾನ : ಎಲ್ಲರಿಗಿಂತ ಹೆಚ್ಚು ಮತ ಪಡೆದ ಬಿಂದೇಶ ನಾಯಕ
ಅಂಕೋಲಾ: ತಾಲೂಕಿನ ಪ್ರತಿಷ್ಠಿತ ಸೇವಾ ಸಹಕಾರಿ ಸಂಘಗಳಲ್ಲಿ ಒಂದಾದ ಹಿಚ್ಕಡ ಸೊಸೈಟಿಯ ನೂತನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸ್ಥಳೀಯ ಯುವ ಪ್ರಮುಖ ರಾಘವೇಂದ್ರ ರಾಮದಾಸ ನಾಯಕ ನೇತೃತ್ವದ ತಂಡ ಗೆಲುವು ಸಾಧಿಸಿದೆ. ಒಟ್ಟೂ 12 ನಿರ್ದೇಶಕ ಸ್ಥಾನಗಳಲ್ಲಿ 5 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಲ್ಲದೇ ಆ ಸ್ಥಾನ ಖಾಲಯಾಗಿಯೇ ಇದೆ. ಉಳಿದ 6 ಸ್ಥಾನಗಳಿಗೆ ನಡೆದ ತುರುಸಿನ ಚುನಾವಣೆಯಲ್ಲಿ ಒಟ್ಟೂ 10 ಜನ ಉಮೇದುವಾರರು ಅಂತಿಮ ಕಣದಲ್ಲಿ ಉಳಿದು ತಮ್ಮ ಅದೃಷ್ಟ ಮತ್ತು ಸಾಮರ್ಥ್ಯ ಪರೀಕ್ಷೆಗೆ ಒಳಪಟ್ಟಿದ್ದರು.
ಸ್ಥಳೀಯ ಪ್ರಮುಖ ಬಿಂದೇಶ ಎಂ ನಾಯಕ ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತೀ ಹೆಚ್ಚು (200) ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗೆಲುವಿನ ನಗೆ ಬೀರಿದ್ದು ಉಳಿದಂತೆ ,ಮಂಜುನಾಥ ಸದಾನಂದ ನಾಯಕ(196) ಚೇತನ ನಾರಾಯಣ ನಾಯಕ(195) ವೈಭವ ಗಣಪತಿ ನಾಯಕ (189) ಗೋಪಾಲ ಪ್ರದೀಪ ನಾಯಕ(160) ಸುಧೀರ ಬಾಲಚಂದ್ರ ನಾಯಕ(152). ಮತಗಳನ್ನು ಪಡೆದುಕೊಳ್ಳುವ ಮೂಲಕ ತಮಗಿರುವ ವಿವಿಧ ಕ್ಷೇತ್ರಗಳ ಅನುಭವವನ್ನು ಎನ್ಕ್ಯಾಶ್ ಮಾಡಿಕೊಂಡು ಅರ್ಹ ಜಯಗಳಿಸಿದ್ದಾರೆ.
ಸ್ಥಳೀಯ ಯುವ ಪ್ರಮುಖ ಮತ್ತು ಉದ್ಯಮಿ ರಾಘವೇಂದ್ರ ರಾಮದಾಸ ನಾಯಕ ಈಗಾಗಲೇ ಅವಿರೋಧ ಆಯ್ಕೆಯಾಗಿ ತನ್ನ ನಾಯಕತ್ವ ಗುಣ ತೋರ್ಪಡಿಸಿರುವುದಲ್ಲದೇ , ಅರ್ಚನಾ ಚೇತನಾ ನಾಯಕ, ಸರಳಾ ದೀಕ್ಷಿತ ನಾಯಕ, ಮಂಗಲಾ ಗೋಪಾಲ ನಾಯಕ, ಪರಿಶಿಷ್ಟ ಜಾತಿಯ ಶಾಂತರಾಮ ನಾಗಪ್ಪ ಆಗೇರ ಸಹ ಅವಿರೋಧವಾಗಿ ಆಯ್ಕೆಯಾಗಿ ತಮ್ಮ ವೈಯಕ್ತಿಕ ಹಾಗೂ ಗುಂಪು ಸಾಮರ್ಥ್ಯ ತೋರ್ಪಡಿಸಿದಂತಿದೆ. ಮೂಲಕ ಎಲ್ಲಾ ಅಭ್ಯರ್ಥಿಗಳು ಒಂದೇ ಗುಂಪಿನಿಂದ ಆಯ್ಕೆ ಆಗಿದ್ದಾರೆ. ವಿಜೇತ ಅಭ್ಯರ್ಥಿಗಳಿಗೆ ಸ್ಥಳೀಯ ಪ್ರಮುಖರು , ಹಿರಿ-ಕಿರಿಯ ಆತ್ಮೀಯರು , ಗೆಳೆಯರು ಅಭಿನಂದಿಸಿದರು. ಈ ಹಿಂದೆ ನಿರ್ದೇಶಕರಾಗಿ ಗಮನ ಸೆಳೆದಿದ್ದ ಕೆಲ ಹಿರಿಯ ನಾಯಕರು , ಕೊನೆಯ ಹಂತದ ರಾಜಕೀಯ ಬಿಸಿ ಗಾಳಿಗೆ ಪರಾಜಯ ಹೊಂದುವಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಮುಂದಿನ ಹಂತದಲ್ಲಿ ರಾಘವೇಂದ್ರ ನಾಯಕ ಮತ್ತು ತಂಡ ಆಡಳಿತ ಚುಕ್ಕಾಣಿ ಹಿಡಿಯುಂದೆಯೇ ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ