Important
Trending

ಹೆಂಡತಿ ಮನೆ ಎದುರು ಸಾವಿಗೆ ಶರಣಾದ ವಿಚ್ಛೇದಿತ

ಅಂಕೋಲಾ: ವಿಚ್ಛೇದಿತನೋರ್ವ ತನ್ನ ಹೆಂಡತಿಯಾಗಿದ್ದವಳ ಮನೆಯ ಎದುರುಗಡೆಯ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ವಿವಾಹ ವಿಚ್ಛೇದಿತ ವ್ಯಕ್ತಿಯೋರ್ವ ತನ್ನ ಹೆಂಡತಿಯಾಗಿದ್ದವಳ ಮನೆಯ ಎದುರಿನ ಮರವೊಂದರ ರೆಂಬೆಗೆ ಹಗ್ಗ ಕಟ್ಟಿ , ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾರವಾಡ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಹಾರವಾಡಾ ಗುಡಿ ಜಟಕ ದೇವಸ್ಥಾನದ ಹತ್ತಿರದ ನಡುವಿನ ಕೇರಿ ನಿವಾಸಿ ಪ್ರಶಾಂತ್ ಚಂದ್ರಕಾಂತ ನಾಯ್ಕ (45 ) ಈತನೇ ಮೃತ ದುರ್ದೈವಿ. ಈತನ ಕೆಲ ವರ್ತನೆಗಳಿಂದ ಬೇಸತ್ತ ಪತ್ನಿ ವಿವಾಹ ವಿಚ್ಛೇದನ ಪಡೆದಿದ್ದಳು ಎನ್ನಲಾಗಿದೆ. ಇದೇ ವಿಚಾರ ಇಲ್ಲವೇ ಇನ್ನಿತರೇ ಕಾರಣಗಳಿಂದ ಮನನೊಂದಿದಂತಿದ್ದ ಪ್ರಶಾಂತ ನಾಯ್ಕ , ವಿಪರೀತ ಸರಾಯಿ ಕುಡಿತದ ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದ್ದು , ಅದಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯ ಹತ್ತಿರವೇ ಇದ್ದ ಹೆಂಡತಿಯಾಗಿದ್ದವಳ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕೇಳಿ ಬಂದಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾವಿನ ಕುರಿತಂತೆ ನಿಖರ ಮಾಹಿತಿ ತಿಳಿದು ಬರಬೇಕಿದೆ.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಜೊತೆ ಹಾರವಾಡಾ ಗ್ರಾ.ಪಂ ಸದಸ್ಯ ಸೇರಿದಂ ಹಾರವಾಡಾ ಹಾಗೂ ಅವರ್ಸಾದ ಕೆಲ ಸ್ಥಳೀಯ ಪ್ರಮುಖರು , ಹಾಗೂ ಮೃತನ ಕುಟುಂಬ ಸಂಬಂಧಿಗಳು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button