
ಹೊನ್ನಾವರ: ಶಕ್ತಿ ಸ್ಥಳವೆಂದೇ ಪ್ರಖ್ಯಾತಿ ಪಡೆದ ನೀಲಗೋಡಿನ ಶ್ರೀ ಯಕ್ಷೀ ಚೌಡೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ 2 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮವು ನಡೆದವು. ಜಾತ್ರೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಅಪಾರ ಭಕ್ತರು ಆಗಮಿಸಿದರು. ಶ್ರೀದೇವಿಗೆ ಊಡಿಸೇವೆ, ವಿಶೇಷ ಪೂಜೆ, ವಿವಿಧ ಸೇವೆಗಳನ್ನ ನೀಡಿ ಶ್ರೀದೇವಿಗೆ ಹರಕೆ ಸಮರ್ಪಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಮಾತನಾಡಿ ತಾಯಿಯ ಸನ್ನಿಧಾನದಲ್ಲಿ 2 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಯು ನಡೆಯಿತು. ರಥೋತ್ಸವದ ದಿನದಂದು ತಾಯಿಯು, ಗರ್ಭಗುಡಿಯಿಂದ ಹೊರಬಂದು ಭಕ್ತರಿಗೆ ಹರಿಸುತ್ತಾಳೆ ಎನ್ನುವುದು ವಿಶೇಷವಾಗಿದೆ ಎಂದು ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರು.
ಸಿದ್ದಾಪುರದಿಂದ ಬಂದoತಹ ಭಕ್ತರಾದ ವಿನಯ ಶೇಟ್ ಮಾತನಾಡಿ ಈ ದೇವಸ್ಥಾನದಲ್ಲಿ ಅಮಾವಾಸ್ಯೆಯಂದು ಶ್ರೀದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿ ತುಪ್ಪ ದೀಪದ ಆರತಿಯನ್ನು ಬೆಳಗಿಸಿದರೇ ಕಷ್ಟಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ನೇರವೇರಿಸುತ್ತಾರೆ ಎನ್ನುವ ನಂಬಿಕೆಯಿದೆ. ಇಲ್ಲಿ ನಂಬಿಕೆಯಿಟ್ಟಿದ್ದರೇ ಎಲ್ಲ ಕಾರ್ಯವು ನಡೆಯುತ್ತದೆ. ರಾಜ್ಯದ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
ಇಲ್ಲಿ ತೀರ್ಥ ಸ್ನಾನಕ್ಕೂ ಅಷ್ಟೇ ಮಹತ್ವವಿದೆ. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಗೆ ಉಡಿ ಸೇವೆಗಳನ್ನ ನೀಡುತ್ತಾರೆ. ಇಲ್ಲಿಯ ಸತ್ಯದೇವತೆಯ ಶಕ್ತಿಯು ಸಹ ಅಪಾರವಾಗಿದ್ದು, ಭಕ್ತರು ಬಾಳೆಗೊನೆ, ಊಡಿ ಸೇವೆ ನೀಡುತ್ತೇನೆ ಎಂದು ಹರಕೆ ಸಲ್ಲಿಸಿದರೇ ದೇವಿಯು ಪರಿಹಾರ ನೀಡುತ್ತಾರೆ ಎಂದರು. ಜಾತ್ರಾ ಪ್ರಯುಕ್ತ, ಚಂಡೇ ವಾದ್ಯ, ಪಂಚವಾದ್ಯ,ಭಜನೆ, ಸೇರಿದಂತೆ ಮೃಗಬೇಟೆ ನಡೆಯಿತು. ಬೇರೆ ಬೇರೆ ಕಡೆಯಿಂದ ಭಕ್ತರು ಬಂದು ತಾಯಿಗೆ ವಿವಿಧ ಸೇವೆಗಳನ್ನು ಸಲ್ಲಿಸಿ ತಮ್ಮ ಮನೋಕಾಮನೆಗಳಿಗಾಗಿ ಪ್ರಾರ್ಥಿಸಿಕೊಂಡರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ