Follow Us On

WhatsApp Group
Important
Trending

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ : ಓರ್ವ ಮಹಿಳೆ , ಗಿರಾಕಿಗಳು ಸಹಿತ ನಾಲ್ವರು ಆರೋಪಿಗಳು ವಶಕ್ಕೆ

ಇದನ್ನೂ ಓದಿ: ಬೃಹತ್ ಉದ್ಯೋಗಾವಕಾಶ: IOCL Recruitment 2023: 1,720 ಹುದ್ದೆಗಳು: SSLC, ITI, PUC, DEGREE ಆದವರು ಅರ್ಜಿ ಸಲ್ಲಿಸಬಹುದು

ಅಂಕೋಲಾ: ತಾಲೂಕಿನ ಬೇಲೆಕೇರಿಯಲ್ಲಿ ವೇಶ್ಯಾವಾಟಿಕೆ ಆರೋಪದಡಿ, ಆಪಾದಿತರಾದ ರಜಿಯಾ ಗಂಡ ಕಮಲಭಾಷಾ, ( 38 ವರ್ಷ) ಬಳ್ಳಾರಿ ರಸ್ತೆ, ಗುರುಬವನ ಆಶ್ರಯ ಕಾಲನಿ ಹಿಂದುಗಡೆ, ಹೊಸಪೇಟೆ- ಬಳ್ಳಾರಿ ಮತ್ತು ಹೊನ್ನಾವರ ಮೂಲದ ಸಂತೋಷ ಎಂ ನಾಯ್ಕ, ( 27) ವರ್ಷ, ವೃತ್ತಿ: ಅಟೋಚಾಲಕ, ಇವರು ತಮ್ಮ ಲಾಭಕ್ಕೋಸ್ಕರ ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಬೆಂಗಳೂರು ಮೂಲಕ 26 ವರ್ಷದ ಮಹಿಳೆಯನ್ನು ತಾವು ವಾಸವಾಗಿರುವ ಬೆಲೇಕೇರಿಯ ಬಾಡಿಗೆ ಮನೆಗೆ ಕರೆಯಿಸಿಕೊಂಡು ಹೆಚ್ಚಿನ ಹಣದ ಆಸೆ ತೋರಿಸಿ, ಅವಳ ಇಚ್ಚೆಗೆ ವಿರುದ್ಧವಾಗಿ ವೇಶ್ಯಾವಾಟಿಕೆ ದಂಧೆಗೆ ತೊಡಗಿಸಲು ಒಪ್ಪಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ, ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂತೋಷ ಶೆಟ್ಟಿ ರವರ ತಂಡ ದಾಳಿ ನಡೆಸಿದ ಸಮಯದಲ್ಲಿ ಸ್ಥಳೀಯರೆನ್ನಲಾದ ಇಬ್ಬರು ಗಿರಾಕಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

WhatsApp Group Join Now

ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಬೆಂಗಳೂರು ಮೂಲದ ಸಂತ್ರಸ್ತ ಯುವತಿಯನ್ನು ರಕ್ಷಿಸಿದ್ದಾರೆ. ಘಟನೆಯ ಕುರಿತಂತೆ ಮತ್ತಷ್ಟು ವಿವರಗಳು ತಿಳಿದು ಬರಬೇಕಿದೆ. ಈ ಹಿಂದೆ ಬೆಲೇಕೇರಿಗೆ ದೂರದ ಬಳ್ಳಾರಿ – ಹೊಸಪೇಟೆಯಿಂದ ಅದಿರು ವಹಿವಾಟು ಇತ್ತಾದರೂ, ಈಗ ಅಲ್ಲಿಯ ಮೂಲದ ಮಹಿಳೆ ಓರ್ವಳಿಂದ ವೈಶ್ಯಾವಾಟಿಕೆ ಆರೋಪ ಕೇಳಿ ಬರುವಂತಾಗಿರುವುದರಿಂದ ಸ್ಥಳೀಯ ಕೆಲವರಿಗೆ ಬೇಸರವಾದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button