Join Our

WhatsApp Group
Big News
Trending

ದೊಡ್ಡ ದೇವರ ಮಹಿಮೆ ಅಪಾರ: ದೋಣಿಯಲ್ಲಿ ವಿರಾಜಮಾನವಾಗಿ ಜಲ ವಿಹಾರ

ಅಂಕೋಲಾ: ದೊಡ್ಡ ದೇವರೆಂದೇ ಖ್ಯಾತವಾಗಿ, ದೇಶ ವಿದೇಶಿಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಅಂಕೋಲೆಯ ಶ್ರೀ ವೆಂಕಟರಮಣದೇವರ ತೇರು ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿAದ ನಡೆಯಿತು. ಮೊದಲ ದಿನ ಪುಷ್ಪ ರಥೋತ್ಸವದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡರೆ, ಎಪ್ರಿಲ್ 12ರ ಶನಿವಾರ ಹನುಮ ಜಯಂತಿಯAದು ಬ್ರಹ್ಮ ರಥೋತ್ಸವ ಅತ್ಯಂತ ವಿಜೃಂಭಣೆಯಿoದ ನಡೆಯಿತು. .ಕಿಕ್ಕಿರಿದ್ದು ಸೇರಿದ್ದ ಭಕ್ತ ಸಮೂಹ ವಿಜೃಂಭಣೆಯ ತೇರು ಉತ್ಸವಕ್ಕೆ ಸಾಕ್ಷಿಯಾದರು.

ಮಾರನೇ ದಿನ ಎಪ್ರಿಲ್ 13 ರ ರವಿವಾರ ಶ್ರೀ ದೇವರ ಪಲ್ಲಕ್ಕಿ ಮೆರವಣಿಗೆ ಪಟ್ಟಣದಿಂದ ಹೊರಟು ಕನಸಿಗದ್ದೆ ಮಾರ್ಗವಾಗಿ ಬೇಳಾ ಬಂದರನತ್ತ ಪಯಣ ಬೆಳೆಸಿ, ಅಲ್ಲಿಯ ಸಮುದ್ರ ಹಿನ್ನೀರಿನ ಪ್ರದೇಶದಲ್ಲಿ ಓಕುಳಿ ಸಂಪ್ರದಾಯ ನಡೆಸಿತು. ದೇವರ ಆಗಮನಕ್ಕೆ ಕಾದು ಕುಳಿತಿದ್ದ ಭಕ್ತಾದಿಗಳು ವೆಂಕಟರಮಣನಿಗೆ ಜೈ ಘೋಷ ಕೂಗಿದರು., ಹಳ್ಳದ ತೀರದಿಂದ ವಿಶೇಷವಾಗಿ ಅಲಂಕರಿಸಿದ ದೋಣಿ ಯ ಮೂಲಕ ದೇವರ ಉತ್ಸವ ಮೂರ್ತಿಯನ್ನು ನದಿಯಲ್ಲಿ ವಿಹಾರಕ್ಕೆ ಕರೆದೊಯ್ಯಲಾಯಿತು. ನಿಸರ್ಗ ನಿರ್ಮಿತ ಸುಂದರ ತಾಣಗಳಲ್ಲಿ ಒಂದಾಗಿ , ಕಾಂಡ್ಲಾ ಮತ್ತಿತರ ಗಿಡಗಳಿಂದ ಕಂಗೊಳಿಸುವ ಹಸಿರು ಪರಿಸರದ ನಡುವೆ ಸಮುದ್ರ ಸಂಗಮ ಪ್ರದೇಶದ ಬಳಿ ತೆರಳುವ ಪರಿ, ಕಣ್ಣಿಗೆ ಹಬ್ಬ ಕಟ್ಟಿದಂತಿತ್ತು. ಜಲಕ್ರೀಡೆ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಕೇಣಿಯ ಗಾಬೀತವಾಡದ ನದಿ ಸಾಗರ ಸಂಗಮ ಪ್ರದೇಶಕ್ಕೆ ಆಗಮಿಸಿದ ಜಲವಿಹಾರದ ದೋಣಿಯನ್ನು ಮೀನುಗಾರ ಗಾಬೀತ ಸಮಾಜದವರು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ಶ್ರೀ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿದರು.ಈ ಹಿಂದೆ ನಾನಾ ಕಾರಣಗಳಿಂದ ನಿಂತುಹೋಗಿದ್ದ ಈ ಸಂಪ್ರದಾಯವನ್ನು,ಅoದಿನ ಧಾರ್ಮಿಕ ಮುಖಂಡರಾಗಿದ್ದ ಆರ್ ಎನ್ ನಾಯಕ್ ವಿಶೇಷ ಮುತುವರ್ಜಿಯಲ್ಲಿ, ಗಾಬಿತ ಕೇಣಿಯ ಸ್ಥಳೀಯ ಪ್ರಮುಖರಾಗಿದ್ದ ಅಪ್ಪಣ್ಣ ಕಾಂಬ್ಳೆ ಮತ್ತಿತರ ಮೀನುಗಾರರ ಸಹಕಾರದಲ್ಲಿ ಪುನರಾರಂಭಿಸಿ ಅಂದಿನಿoದ ಇಂದಿನವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿರುವುದನ್ನು ಮತ್ತು ಈಗ ಮಯೂರ ನಾಯಕ ಮತ್ತು ಇತರೆ ಪ್ರಮುಖರ ಸಹಕಾರವನ್ನು ಸ್ಥಳೀಯ ಭಕ್ತರು ಸ್ಮರಿಸಿದರು.

ದೇವಸ್ಥಾನ ಆಡಳಿತ ಮಂಡಳಿಯವರು, ಬೇಳಾ ಬಂದರ ಗಾಬಿತ್ ಕೇಣಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮುಖಂಡರು ಹಾಗೂ ಇತರೆ ಭಕ್ತಾದಿಗಳು ಈ ಕಾರ್ಯದಲ್ಲಿ ವಿಶೇಷ ಸಹಕಾರ ನೀಡುತ್ತಿದ್ದಾರೆ.ಬೇಳಾ ಬಂದರ್ ಜನತೆಯಂತೂ ಇದು ತಮ್ಮೂರ ಹಬ್ಬ ಎಂಬAತೆ ಪೆಂಡಾಲ್ ತಳಿರು ತೋರಣ ವ್ಯವಸ್ಥೆ ಮಾಡಿ ಸಂಭ್ರಮಿಸಿದರು. ಮತ್ತು ಭಕ್ತಾದಿಗಳಿಗೆ ಕಡಲೆಕಾಳು , ಬಾಳೆಹಣ್ಣು ಪ್ರಸಾದ ವಿತರಿಸಿದರು. ಮೇತ್ರಿ ಮನೆತನದ ಹೊನ್ನಪ್ಪ ನಾಯಕ್ ಕುಟುಂಬದವರು ಈಗಲೂ ಎಲ್ಲರಿಗೂ ಪಾನಕ ಸೇವೆ ನೀಡುತ್ತಿದ್ದಾರೆ.ಊರ ನಾಗರಿಕರು ಸಹಕರಿಸಿದರು.. ಶ್ರೀದೇವರ ಓಕುಳಿ,ಜಲಕ್ರೀಡೆ,ದೋಣಿ ವಿಹಾರ ಎಂಬ ನಾನಾ ಅರ್ಥಗಳಲ್ಲಿ ಆಚರಣೆಗೊಳ್ಳುವ ಈ ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಶಿಷ್ಟ ಪದ್ಧತಿ ಮುಂದುವರಿಸಿಕೊAಡು ಬರುತ್ತಿರುವುದು ಹಲವು ಭಕ್ತರ ಹರ್ಷಕ್ಕೆ ಕಾರಣವಾಗಿದೆ.

ಗಾಬಿತ ಕೇಣಿ ಭಕ್ತರಿಂದ ದೋಣಿಯಲ್ಲಿಯೇ ಕುಳಿತು ಆರತಿ ಫಲಪುಷ್ಪ ಸೇವೆ ಸ್ರೀಕರಿಸಿದ ಶ್ರೀ ದೇವರು ,ಜಲಮಾರ್ಗವಾಗಿ ಬೇಳಾ ಬಂದರಿಗೆ ವಾಪಸಾಗಿ,ಇಲ್ಲಿಯ ಭಕ್ತರಿಂದಲೂ ಹಣ್ಣು – ಕಾಯಿ ಆರತಿ ಮುಂತಾದ ಸೇವೆ ಸ್ವೀಕರಿಸಿತು. ನಂತರ ಪಲ್ಲಕಿ ಮೆರವಣಿಗೆ ಕನಸಿಗದ್ದೆ ಬಳಿಯ ಪೀರ್ ಶೆಟ್ಟಿ ಕಟ್ಟೆ ಮತ್ತಿತರೆಡೆ ಸಾಗಿ,ದಾರಿಯುದ್ದಕ್ಕೂ ಭಕ್ತಾದಿಗಳ ಹರಕೆ ಸೇವೆ ಪಡೆದುಕೊಂಡು ವೆಂಕಟರಮಣ ದೇವಾಲಯಕ್ಕೆ ಆಗಮಿಸುವ ಮೂಲಕ ತೇರು ಉತ್ಸವದ ವಿಧಿ ವಿಧಾನಗಳು ಸಂಪನ್ನಗೊoಡವು. ದೇವಾಲಯದ ಆಡಳಿತ ಮಂಡಳಿ ಪ್ರಮುಖರು,ವಿವಿಧ ಸಮಾಜದ ಹಿರಿ-ಕಿರಿಯ ಗಣ್ಯರು,ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.ಆರಕ್ಷಕ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button