Join Our

WhatsApp Group
Important
Trending

ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಅವರಿಗೆ 2025ರ ಗ್ಲೋಬಲ್ ಅಚಿವರ್ಸ್ ಅವಾರ್ಡ್ಸ್

ವಿದೇಶಿ ನೆಲದಲ್ಲಿ ಪ್ರತಿಷ್ಠಿತ ಪುರಸ್ಕಾರ ಪಡೆಯಲಿರುವ ಯುವ ನಾಯಕ

  • ರಷ್ಯಾದ ಮಾಸ್ಕೊ ನಗರದಲ್ಲಿ ಸಮಾರಂಭ
  • 23 ಏಪ್ರಿಲ್ 2025ರಂದು ಗ್ಲೋಬಲ್ ಅಚೀವರ್ಸ ಪ್ರಶಸ್ತಿ ಸ್ವೀಕಾರ
  • ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಕ್ಷೇತ್ರದಲ್ಲಿ ಪಾದರ್ಪಣೆ
  • ಹೋರಾಟದ ಮನೋಭಾವ,ಶಿಸ್ತು , ಅಪರಿಮಿತ ಶ್ರಮದಿಂದ ಸಾಧನೆ

ಅಂಕೋಲಾ : ಬಹುಮುಖಿ ವ್ಯಕ್ತಿತ್ವದ ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಅವರು 2025ರ ಗ್ಲೋಬಲ್ ಅಚಿವರ್ಸ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ. ವಿಶ್ವವಾಣಿ ಸಂಸ್ಥೆ ಮತ್ತು ರಷ್ಯಾ ಕಾನ್ಹೆಟ್ ಸಹಯೋಗದೊಂದಿಗೆ ಅಪೂರ್ವ ಸಾಧಕರಿಗೆ ನೀಡುವ ಪ್ರಶಸ್ತಿ ಇದಾಗಿದ್ದು ವಿದೇಶಿ ನೆಲದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ .ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಗಣ್ಯರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದ್ದು, ಉದ್ಯಮ , ಕೈಗಾರಿಕೆ, ಸಹಕಾರಿ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ತೋರುತ್ತ ಈ ವರೆಗೆ ನೂರಾರು ಪ್ರಶಸ್ತಿ ಸನ್ಮಾನ ಗೌರವಗಳನ್ನು ಮುಡಿಗೇರಿಸಿಕೊಂಡ ರಾಘವೇಂದ್ರ ನಾಯಕ ರಷ್ಯಾದ ಮಾಸ್ಕೊ ನಗರದಲ್ಲಿ 23 ಏಪ್ರಿಲ್ 2025ರಂದು ಗ್ಲೋಬಲ್ ಅಚೀವರ್ಸ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ

ತಮ್ಮ ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಸಮರ್ಥ ಸಾಧಕರಾಗಿ ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಬೆಳೆದು ಹೆಮ್ಮರವಾಗುತ್ತಿದ್ದಾರೆ. ಪರಿಶ್ರಮ ಮತ್ತು ಸಾಧನೆ ಇಲ್ಲದೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಿಲ್ಲ. ಬೆಟ್ಟ ಎಂದಿಗೂ ಬಾಗುವುದಿಲ್ಲ ಆದರೆ ಕಷ್ಟಪಟ್ಟು ಏರಿದ ಮೇಲೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ ಎಂಬ ಸರ್ವಕಾಲಿಕ ನುಡಿಯಂತೆ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಕ್ಷೇತ್ರದಲ್ಲಿ ಪಾದರ್ಪಣೆ ಮಾಡಿ ಹುಬ್ಬಳ್ಳಿಯಲ್ಲಿ ಗೋದಾವರಿ ಇನ್ಪ್ರಾ ಎನ್ನುವ ಕಂಪನಿಯನ್ನು ಪ್ರಾರಂಭಿಸಿ, ಜೊತೆಗೆ ಗೋದಾವರಿ ಇಂಡಸ್ಟ್ರೀಸ್ ಆರಂಭ ಮಾಡಿ ಅಲ್ಲಿಯ ಸುತ್ತಮುತ್ತಲಿನ ಸಾವಿರಾರು ಜನರಿಗೆ ತನ್ನ ಕೈಲಾದ ಆರ್ಥಿಕ ನೆರವು ಮತ್ತಿತರ ಸೇವೆ ನೀಡುವುದರ ಜೊತೆ ಹಲವರ ಶೈಕ್ಷಣಿಕ ಪ್ರಗತಿಗೆ ನೆರವಾಗಿ ಅಲ್ಲಿನವರ ಸಂಕಷ್ಟಕ್ಕೆ ನಮ್ಮವರೊಬ್ಬರು ಇದ್ದಾರೆ ಎನಿಸಿಕೊಂಡವರು ರಾಘವೇಂದ್ರ ದೇವರಾಬಾವಿ.

ಜಿಲ್ಲೆಯ ಅನೇಕ ತಾಲೂಕುಗಳಲ್ಲಿದೆ ಗೋದಾವರಿ ಸಹಕಾರಿ

ಸಹಕಾರಿ ಕ್ಷೇತ್ರದಲ್ಲಿ ನೂರಾರು ಕೋಟಿ ವಹಿವಾಟಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಗೋದಾವರಿ ಸೌಹಾರ್ದ ಸಹಕಾರಿಯನ್ನು ಪ್ರಾರಂಭಿಸಿ ಸಂಕಷ್ಟದಲ್ಲಿರುವ ಹಾಗೂ ಸ್ವಯಂ ಉದ್ಯೋಗವನ್ನು ಮಾಡುವ ಹಲವು ಗ್ರಾಹಕರಿಗೆ ಆರ್ಥಿಕ ನೆರವನ್ನು ನೀಡಿ , ದುಡಿಯುವ ಕೈಗಳಿಗೂ ಉದ್ಯೋಗದಾತರಾದವರು ಇವರು.

ತನ್ನ ತಾಯಿ ಗೋದಾವರಿಯ ಹೆಸರನ್ನು ಶಾಶ್ವತವಾಗಿ ಇಡಬೇಕೆನ್ನುವ ಕನಸಿಂದ ಇವರು ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಗೋಕರ್ಣದಲ್ಲಿ ಹೋಟೆಲ್ ದಿ ಗೋದಾವರಿ ಎನ್ನುವ ಅತ್ಯಂತ ಸುಂದರ ಮತ್ತು ಸುಸಜ್ಜಿತ ತ್ರೀ ಸ್ಟಾರ್ ಹೋಟೆಲ್ ಅನ್ನು ನಿರ್ಮಿಸಿ ಪ್ರವಾಸೋದ್ಯಮ ಬೆಳವಣಿಗೆಗೆ ಹೊಸ ಕೊಡುಗೆ ನೀಡಿದ್ದು , ತಾಲೂಕಾ ಕೇಂದ್ರವೂ ಅಲ್ಲದ ಗೋಕರ್ಣದಂತ ಗ್ರಾಮೀಣ ಪ್ರದೇಶದಲ್ಲಿ ಹೊಟೆಲ್ ದಿ ಗೋದಾವರಿ ಪ್ರವಾಸಿಗರನ್ನು ಕೈ ಬೀಸಿ ಕರೆದು ಇಲ್ಲಿಯ ಘನತೆಯನ್ನು ಹೆಚ್ಚಿಸಿದೆ.

ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದು, ತಮ್ಮ ಸೌಹಾರ್ದ ಸಹಕಾರಿಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕಾರಿಯ ಅರ್ಥಕ್ಕೆ ಮಹತ್ವ ಬರುವಂತೆ ನೋಡಿಕೊಳ್ಳುತ್ತಿರುವ ಇವರ ಈ ಎಲ್ಲ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಇವರಿಗೆ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ ಎಂಬುದು ಮುಖ್ಯವಲ್ಲ ಬದುಕಿಗೆ ಹೇಗೆ ಜೀವ ತುಂಬಿದ ಎಂಬುದು ಮುಖ್ಯ. ಕಲೆ, ಶಿಕ್ಷಣ, ಸಾಹಿತ್ಯ, ಕ್ರೀಡೆ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕಾರ್ಯಗಳಿಗೆ ಸಹಕರಿಸಿ , ಪ್ರೋತ್ಸಾಹಿಸಿ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಮಾನವೀಯ ಮೌಲ್ಯಗಳುಳ್ಳ ಈ ಯುವ ನಾಯಕನಲ್ಲಿ ಹೋರಾಟದ ಮನೋಭಾವ,ಶಿಸ್ತು , ಅಪರಿಮಿತ ಶ್ರಮ ,ಸಾಧನೆಯ ತುಡಿತ , ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ವಿಶೇಷತೆಯಿಂದಾಗಿ ಎತ್ತರದ ವ್ಯಕ್ತಿತ್ವ ರಾಘವೇಂದ್ರನಾಯಕ ದೇವರಬಾವಿ ಅವರದ್ದು.

ವಿದೇಶಿ ನೆಲದಲ್ಲಿ ಪ್ರತಿಷ್ಠಿತ ಪುರಸ್ಕಾರ ಪಡೆಯಲಿರುವ ಯುವ ನಾಯಕ

ಇವರಿಗೆ ಹತ್ತು ಹಲವಾರು ಪ್ರಶಸ್ತಿಗಳು ಗೌರವಗಳು ಭಾಜನವಾಗಿವೆ.ಇಂತಹ ಸಾಧಕರಿಗೆ ವಿಶ್ವವಾಣಿ ವಿದೇಶಿ ನೆಲದಲ್ಲಿ ಈ ಗೌರವ ನೀಡುತ್ತಿರುವುದು ಪ್ರಶಸ್ತಿ ಮೌಲ್ಯ ಹೆಚ್ಚಿಸುವ ಜೊತೆಯಲ್ಲಿ ರಾಘವೇಂದ್ರನ ಮುಕುಟ ಕಿರೀಟಕ್ಕೆ ಪೋಣಿಸಿದ ಮುತ್ತು ಈ ಪ್ರಶಸ್ತಿ ಆಗಲಿದೆ ಎನ್ನುವುದು ಆತ್ಮೀಯ ಒಡನಾಡಿಗಳ ಮಾತಾಗಿದ್ದು, ಪ್ರಶಸ್ತಿ ಸ್ವೀಕರಿಸಲಿರುವ ಸಾಧಕನ ಸಾಧನೆಗೆ ಶುಭ ಕೊರೋಣ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button