ವೀರಭದ್ರೇಶ್ವರ ಬೀರದೇವ ದೇವಸ್ಥಾನದ ಪಕ್ಕದಲ್ಲಿ ನೂತನ ಸಮುದಾಯ ಭವನ: ಮೇ 4 ರಂದು ಭವ್ಯ ಕಟ್ಟಡ ಉದ್ಘಾಟನೆ

- ಸಮುದಾಯ ಭವನದ ಕನಸು ನನಸು
- ಫಲಕೊಟ್ಟ ದಶಕಗಳ ಪ್ರಯತ್ನ
- ಮೇ 4 ರಂದು ಭವ್ಯ ಕಟ್ಟಡ ಉದ್ಘಾಟನೆ
- ಆಮಂತ್ರಣ ಪತ್ರಿಕೆ ಬಿಡುಗಡೆ
ಅಂಕೋಲಾ: ಬೇಳಾ ಬಂದರದ ಶ್ರೀ ವೀರಭದ್ರೇಶ್ವರ ಬೀರದೇವ ದೇವಸ್ಥಾನದ ಪಕ್ಕದಲ್ಲಿ ತಲೆ ಎತ್ತಿ ನಿಂತ ನೂತನ ಸಮುದಾಯ ಭವನ. ದಶಕಗಳ ಕನಸು ನನಸಾದ ಸಂತ್ರಪ್ತಿ. ಮೇ 4 ರ ರವಿವಾರ ಉದ್ಘಾಟನೆಗೊಳ್ಳಲಿರುವ ಭವ್ಯ ಕಟ್ಟಡ. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸರ್ವರಿಗೂ ಸ್ವಾಗತ ಕೋರಿದ ಪ್ರಮುಖರು ಅಂಕೋಲಾ ತಾಲೂಕಿನ ಪ್ರಮುಖ ಧಾರ್ಮಿಕ ಶಕ್ತಿ ಕೇಂದ್ರಗಳಲ್ಲಿ ಬೇಳಾ ಬಂದರದ ಶ್ರೀ ವೀರಭದ್ರೇಶ್ವರ ದೇವಸ್ಥಾನವೂ ಒಂದಾಗಿದ್ದು ಸ್ಥಳೀಯರ ಹಾಗೂ ಸುತ್ತಮುತ್ತಲಿನ ಅಸಂಖ್ಯ ಆಸ್ತಿಕ ಭಕ್ತರ ಆರಾಧ್ಯ ದೈವವಾಗಿದೆ.

ಸುತ್ತ ಮತ್ತಲೂ ವಿಶಾಲ ಬಯಲು ಪ್ರದೇಶ ಹಾಗೂ ಬೆಟ್ಟ ಗುಡ್ಡ, ಹಳ್ಳ ಕೊಳ್ಳಗಳುಳ್ಳ ಈ ಸುಂದರ ಪರಿಸರಿದಲ್ಲಿ ಸಮುದಾಯ ಚಟುವಟಿಕೆಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ನೂರಾರು ಜನರು ಒಂದೆಡೆ ಸೇರಿ ವಿವಿಧ ಕಾಯಕ್ರಮ ಹಮ್ಮಿಕೊಳ್ಳಲು ಸಮುದಾಯ ಭವನದ ಅಗತ್ಯತೆ ಮನಗಂಡ ಹಿರಿ-ಕಿರಿಯರು ವಿಸ್ತೃತ ಯೋಚನೆ ಹಾಗೂ ಯೋಜನೆ ಮೂಲಕ ಕಾರ್ಯಪ್ರವತ್ತರಾಗಿದ್ದರು.
ಸಮುದಾಯ ಭವನದ ಉದ್ಘಾಟನಾ ಸಮಾರಂಭ
ಹಲವರ ನಾನಾ ರೀತಿಯ ಸೇವೆ , ಶ್ರಮ ಹಾಗೂ ಸಹಾಯ ಸಹಕಾರ ಮತ್ತು ಸರ್ಕಾರದ ಅನುದಾನ ಮಂಜೂರಿಯಾದ ಫಲವಾಗಿ ಬಹು ಲಕ್ಷ ರೂ ಅಂದಾಜು ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣವಾಗಿದೆ. ಈ ಸಮುದಾಯ ಭವನದ ಉದ್ಘಾಟನಾ ಸಮಾರಂಭ 04.05.2025ರ ರವಿವಾರ ಬೆಳಿಗ್ಗೆ 12 ಘಂಟೆಗೆ ನಡೆಯಲಿದ್ದು, ಅದಕ್ಕೂ ಪೂರ್ವ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಮತ್ತಿತರ ಧಾರ್ಮಿಕ ಕಾರ್ಯ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ

ಈ ಕುರಿತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸ್ಥಳೀಯ ಪ್ರಮುಖ ಮತ್ತು ವಕೀಲ ಉಮೇಶ ನಾಯ್ಕ, ಹಿಂದುಳಿದ ವರ್ಗಗಳ ಇಲಾಖೆ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿನಿಧಿ ಮತ್ತಿತರರ ನೆರವಿನಿಂದ ಊರಿನ ಸಮಸ್ತರ ಸಹಕಾರದಿಂದ ಈ ಸಮುದಾಯ ಭವನ ಮೇ 4 ರಂದು ಉದ್ಘಾಟನೆ ನಡೆಯಲಿದ್ದು, ದೇವಾಸ್ಥಾನದ ಪಕ್ಕ ಇದ್ದ ಜಮೀನನ್ನು ದೇವಸ್ಥಾನದ ಹೆಸರಿನಲ್ಲಿ ಖರೀದಿಸಿ, ಆ ಬಳಿಕ ನಡೆಸಿದ ದಶಕಗಳ ಪ್ರಯತ್ನ ಕೈಗೂಡಿ ಸಮುದಾಯ ಭವನದ ಕನಸು ನನಸಾದ ಬಗ್ಗೆ ಹೇಳಿದರು.
ಶಾಸಕ ಸತೀಶ ಸೈಲ್ ಅವರ ಸಹಾಯ ಹಸ್ತ
ದೇವಸ್ಥಾನ ಸಂಘದ ಅಧ್ಯಕ್ಷರಾದ ಗೋಪಾಲ ಕೆ ನಾಯ್ಕ ಮಾತನಾಡಿ , ಸಮಿತಿ ಪದಾಧಿಕಾರಗಳು, ಸದಸ್ಯರ ಮತ್ತು ಊರನಾಗರಿಕರ ವಿಶೇಷ ಸೇವೆ ಸಹಕಾರದ ಅಂಗವಾಗಿ ಸಮುದಾಯ ಭವನ ಲೋಕಾರ್ಪಣೆ ಗೊಳಿಸಲು ಹೆಮ್ಮೆ ಇದೆ ಎಂದು ಹೇಳಿ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ , ಶಾಸಕ ಸತೀಶ ಸೈಲ್ ಅವರ ಸಹಾಯ ಹಸ್ತ ನೆನಪಿಸಿಕೊಂಡರು.
ಸಂಘದ ಉಪಾಧ್ಯಕ್ಷರಾದ ಸೀತಾರಾಮ ಎಮ್ ನಾಯ್ಕ ಸಮುದಾಯ ಭವನ ಲೋಕಾರ್ಪಣೆ ಕುರಿತು ಮಾತನಾಡಿದರು. ಕಾರ್ಯದರ್ಶಿ ಮೋಹನ ಎಚ್ ನಾಯ್ಕ , ಸದಸ್ಯ ಚಂದ್ರಕಾಂತ ನಾಯ್ಕ ಇದ್ದರು. ಮೇ 4 ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮ , ಅನ್ನಸಂತರ್ಪಣೆ , ಕಟ್ಟಡ ಉದ್ಘಾಟನೆ, ಕಾರ್ಯಕ್ರಮದ ಸಮಾರೋಪ ಸೇರಿದಂತೆ ಎಲ್ಲ ಕಾರ್ಯಗಳಲ್ಲಿ ಶ್ರೀ ದೇವರ ಭಕ್ತಾದಿಗಳು , ಊರ ಹಾಗೂ ಪರ ಊರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮತ್ತು ಅತಿಥಿ ಗಣ್ಯರು ಸಹಿತ ಸರ್ವರಿಗೆ ಶ್ರೀ ವೀರಭದ್ರೇಶ್ವರ ಬೀರದೇವ ದೇವಸ್ಥಾನ ಸಂಘದ ಪರವಾಗಿ ಹಾಗೂ ಊರಿನ ಸಮಸ್ತ ನಾಗರಿಕರ ಪರವಾಗಿ ಸ್ವಾಗತ ಕೋರಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ