
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸ್ಥಳದ ಬಳಿಯೇ ಉಪವಾಸ ಕುಳಿತು ಮೇ 8 ರಿಂದ ಧರಣಿ ಹಮ್ಮಿಕೊಳ್ಳಬೇಕೆಂದಿದ್ದ ಬೃಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಅಧ್ಯಕ್ಷರಾದ ಪ್ರಣವಾನಂದ ಸ್ವಾಮಿಗಳು, ಭಾರತ ಮತ್ತು ಪಾಕಿಸ್ತಾನ ಯುದ್ಧ ಸಾಧ್ಯತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಮ್ಮ ಉಪವಾಸ ಸತ್ಯಾಗ್ರಹ ಕೈಬಿಟ್ಟು , ವಾತಾವರಣ ತಿಳಿಗೊಂಡ ಬಳಿಕ ಮುಂದೊಮ್ಮೆ ಸುಮಾರು 15 ದಿನಗಳ ಕಾಲ ಜಿಲ್ಲೆಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟಿಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಶಿರೂರು ಗುಡ್ದ ಕುಸಿತದಲ್ಲಿ ನೊಂದ ಕುಟುಂಬ ಸದಸ್ಯರಾದ ಮೋಹನ ಗೌಡ , ವಿನೋದ ನಾಯ್ಕ , ಸ್ವಾಮೀಜಿಗಳ ಅನುಯಾಯಿಗಳಾದ ಡಿಜಿ ನಾಯ್ಕ , ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ