Join Our

WhatsApp Group
Important
Trending

ಪೊಲೀಸ್ ಇಲಾಖೆಯಿಂದ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆ: ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳೇ ಸಿದ್ದರಾಗಿ

ಅಂಕೋಲಾ: ಎಸ್ಪಿ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ,ಗೋಕರ್ಣ ಪೊಲೀಸ್ ಠಾಣೆ ಇವರ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.

ವಾಟ್ಸಪ್ ಮಾಡಿ : ಬಹುಮಾನ ಗೆಲ್ಲಿ

ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಜೂನ್ 26 ರಂದು ಬೆಳಿಗ್ಗೆ 10.30 ಗಂಟೆಗೆ ಗೋಕರ್ಣದ ಭದ್ರಕಾಳಿ ಕಾಲೇಜಿನ ಸಭಾಭವನದಲ್ಲಿ ನಡೆಯಲಿದ್ದು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಅತ್ಯಾಕರ್ಷಕ ಚಿತ್ರಗಳನ್ನು ಬಿಡಿಸಿ ಜೂನ್ 24 ರ ಸಂಜೆ 6 ಗಂಟೆ ಒಳಗೆ ವಾಟ್ಸಪ್ ಸಂಖ್ಯೆ 8904282188 ಗೆ ಕಳುಹಿಸಿ ಕೊಡಬೇಕು.

ಯಾವುದೇ ವಯಸ್ಸಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಚಿತ್ರದ ಮೇಲುಭಾಗದಲ್ಲಿ ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆ ಕಾಲೇಜುಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಉತ್ತಮ ಚಿತ್ರಗಳಿಗೂ ಬಹುಮಾನ ನೀಡಲಾಗುವುದಲ್ಲದೇ ,ಸ್ಪರ್ಧೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಒಂದು ಶಾಲೆ ಇಲ್ಲವೇ ಕಾಲೇಜಿಗೆ ವಿಶೇಷ ಪ್ರೋಪಿ ನೀಡಿ ಗೌರವಿಸಲಾಗುವುದು. ಬಹುಮಾನ ವಿಜೇತರಿಗೆ ಜೂನ್ 25 ರಂದು ಬಹುಮಾನ ಪಡೆದ ಕುರಿತು ಮಾಹಿತಿ ನೀಡಲಾಗುವುದು.

ಬಹುಮಾನ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ರಚಿಸಿರುವ ಚಿತ್ರವನ್ನು ಕಡ್ಡಾಯವಾಗಿ ತರಬೇಕು.
ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಶಾಲೆಯ ಶಿಕ್ಷಕರು, ಬೋಧಕ ವರ್ಗದವರು ಪ್ರೋತ್ಸಾಹ ನೀಡುವಂತೆ ಸಿಪಿಐ ಶ್ರೀಧರ ಅವರು ಗೋಕರ್ಣ ಪೊಲೀಸ್ ಠಾಣೆಯ ಪರವಾಗಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿದ್ಯಾರ್ಥಿಗಳೇ ಇನ್ನೇಕೆ ತಡ : ಚಿತ್ರ ಬಿಡಿಸಿ ,ಬಹುಮಾನ ಪಡೆಯಿರಿ : ಅದಕ್ಕಿಂತ ಮುಖ್ಯವಾಗಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ನಿಮಗೆ ಸಿಕ್ಕ ಸದಾವಕಾಶ ಬಳಸಿಕೊಳ್ಳಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button