Follow Us On

Google News
Big News
Trending

ಅಂಕೋಲಾದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ಧನಲ್ಲಿಯೂ ಪಾಸಿಟಿವ್ ಕೇಸ್!

ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 6-7 ಜನರಲ್ಲಿ ಸೋಂಕು ?
ಸಂಪರ್ಕಕ್ಕೆ ಬಂದವರಲ್ಲಿ ಆತಂಕ!

ಅoಕೋಲಾ : ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಮೃತರಾದ 78ರ ವೃದ್ಧರೋರ್ವರಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣಗಳು ಕಂಡುಬoದಿದೆ ಎಂದು ಹೇಳಲಾಗಿದ್ದು, ವಯೋ ಸಹಜ ಕಾಯಿಲೆ ಅಥವಾ ಇತರೆ ಕಾರಣಗಳಿಂದ ಕಳೆದ 4-5 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇವರಿಗೆ ಯಾವುದೇ ಹೊರಗಿನ ಟ್ರಾವೆಲ್ ಹಿಸ್ಟರಿ ಇರದೇ ಮನೆಯಲ್ಲಿಯೇ ಇದ್ದು, ತದ ನಂತರ ಆಸ್ಪತ್ರೆಗೆ ದಾಖಲಾದ ಇವರಿಗೆ ಮರಣೋತ್ತರ ಪರೀಕ್ಷೆ ವೇಳೆ ಪಾಸಿಟಿವ್ ಕಾಣಿಸಿಕೊಂಡಿರುವುದು ಅಚ್ಚರಿ ಎನಿಸಿದೆ.

ಅದೇ ಆಸ್ಪತ್ರೆಯಲ್ಲಿ ಸುಮಾರು 38 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಮತ್ತೆ 6-7 ಜನರಲ್ಲಿ ಪಾಸಿಟಿವ್ ಲಕ್ಷಣ ಗೋಚರಿಸಿದೆ ಎನ್ನಲಾಗಿದ್ದು, ಈ ಕುರಿತು ಹೆಲ್ತಬುಲೆಟಿನ್‌ನಲ್ಲಿ ಧೃಡಗೊಳ್ಳಬೇಕಿದೆ. ಅದ್ಯಾವುದೋ ಕಾರಣದಿಂದ ಇದೇ ಆಸ್ಪತ್ರೆಯ ಹಿರಿಯ ವೈದ್ಯರೋರ್ವರನ್ನು ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ಹಲವು ಅನುಮಾನ ಮತ್ತು ಆತಂಕಕ್ಕೆ ಎಡೆಮಾಡಿದೆ. ಆಸ್ಪತ್ರೆಯ ವಾತಾವರಣದ ಕುರಿತು ಹಲವರಲ್ಲಿ ಭಯ ಹೆಚ್ಚುತ್ತಿದ್ದು, ಸಂಪರ್ಕಕ್ಕೆ ಬಂದವರಲ್ಲಿ ಆತಂಕ ಮನೆಮಾಡಿದೆ. ಆಸ್ಪತ್ರೆ ಸಂಪೂರ್ಣ ಸೀಲ್-ಡೌನ್‌ಗೆ ಒಳಪಡುವ ಮಾಹಿತಿ ಇದೆ.


ಅಂತ್ಯ ಸಂಸ್ಕಾರ : ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಪಿ.ಪಿ.ಇ ಕಿಟ್ ಧರಿಸಿ ಆತನ ಕುಟುಂಬಸ್ಥರೇ ನೆರವೇರಿಸಿದರು. ತಾಲೂಕಾಡಳಿತದ ನಿರ್ದೇಶನದಲ್ಲಿ ಪಿ.ಎಸ್.ಐ ಇ.ಸಿ.ಸಂಪತ್ತ್ ಮತ್ತು ಕರೊನಾ ವಾರಿಯರ್ಸಗಳು ಕರ್ತವ್ಯ ನಿರ್ವಹಿಸಿದರು.


ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button
Idagunji Mahaganapati Chandavar Hanuman