Uttara Kannada
Trending

ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಹೊನ್ನಾವರ: ತಾಲೂಕಿನಲ್ಲಿ ಒಂದು ಕರೊನಾ ಕೇಸ್ ದೃಢಪಟ್ಟಿದೆ. ಪಟ್ಟಣದ ರಾಯಲಕೇರಿ ಅಂಬೇಡ್ಕರ್ ನಗರದ ನಿವಾಸಿ 40 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೊನ್ನಾವರದಲ್ಲಿ ಹೆಚ್ಚೆಚ್ಚು ಪ್ರಕರಣ ದಾಖಲಾಗುತ್ತಿದ್ದು, ಇಂದು ಒಂದೇ ಕೇಸ್ ದೃಢಪಟ್ಟಿರುವುದು ಸ್ವಲ್ಪಮಟ್ಟಿನ ಆತಂಕವನ್ನು ದೂರಮಾಡಿದೆ.

ಕಾರು ಗುದ್ದಿ ಹೊನ್ನಾವರದ ಸೈಕಲ್ ಸವಾರ ಸಾವು

ಹೊನ್ನಾವರ: ತಾಲೂಕಿನ ಕರ್ಕಿ ಕೋಣಕಾರದ ಸಾಲಿಕೇರಿ ಸಮೀಪ ಕಾರು ಚಾಲಕನೊಬ್ಬ ತನ್ನ ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಚಲಿಸುತ್ತಿದ್ದ ಸೈಕಲ್ ಮತ್ತು ನಿಂತಿದ್ದ ರಿಕ್ಷಾಗೆ ಗುದ್ದಿ ಅಪಘಾತಪಡಿಸಿದ ಘಟನೆಯಲ್ಲಿ ಸೈಕಲ್ ಸವಾರ ಮೃತಪಟ್ಟಿದ್ದಾನೆ. ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಕಾರ್ ಗುದ್ದಿದ ರಭಸಕ್ಕೆ ಸೈಕಲ್ ಸವಾರ ಹಳದೀಪುರ ಸಾಲಿಕೇರಿಯ ಬಿಕಾರಿ ವಾಸು ಗೌಡ (65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸೈಕಲ್ಗೆ ಗುದ್ದಿದ ನಂತರವೂ ಕಾರ್ ರಸ್ತೆಯ ಪಕ್ಕದಲ್ಲಿದ್ದ ಆಟೋ ರಿಕ್ಷಾಗೂ ಡಿಕ್ಕಿಯಾಗಿದ್ದು ರಿಕ್ಷಾ ಜಖಂ ಗೊಂಡಿದೆ.

ಘಟನೆಗೆ ಸಂಬoಧಿಸಿದoತೆ ರಿಕ್ಷಾ ಚಾಲಕ ಪ್ರಶಾಂತ ಆಸೀಸ್ ಡಿಸೋಜ ಕಾರ್ ಚಾಲಕ ಬಂಟ್ವಾಳದ ಪ್ರದೀಪ ಗೋವಿಂದ ನಾಯಕನ ವಿರುದ್ಧ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ತನಿಖೆ ಕೈಗೆತ್ತಕೊಂಡಿದ್ದಾರೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button