Big News
Trending

ಶಿವಯೋಗಿಯ ಪೂಜೆಮಾಡಿ ಪಾದೋದಕ ಪ್ರಸಾದ ಪಡೆದರೆ ಶತಕೋಟಿ ಯಜ್ಞಮಾಡಿದ ಪುಣ್ಯ ಲಭಿಸುತ್ತದೆ: ಶ್ರೀ ಶಿವಲಿಂಗ ಮಹಾಸ್ವಾಮಿಗಳು

ಶಿರಸಿ: ಶಿವಯೋಗಿಯ ಪೂಜೆಮಾಡಿ ಪಾದೋದಕ ಪ್ರಸಾದ ಪಡೆದರೆ ಶತಕೋಟಿ ಯಜ್ಞಮಾಡಿದ ಪುಣ್ಯ ಲಭಿಸುತ್ತದೆ ಎಂದು ಬಣ್ಣದ ಮಠದ ಪೀಠಾದ್ಯಕ್ಷರಾದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ನುಡಿದರು.ಅವರು ಬಣ್ಣದ ಮಠದಲ್ಲಿ ನಡೆದ ಮ.ನಿ.ಪ್ರ.ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳ 29 ನೇ ಪುಣ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಆಶಿರ್ವಚನ ನೀಡಿದರು.

ವೀರಶೈವರಲ್ಲಿ ಯಜ್ಞಮಾಡುವದಿಲ್ಲ.ಬದಲಾಗಿ ಶಿವಯೋಗಿಯಂತಹ ಗುರುಗಳಿಗೆ ಪೂಜೆ ಮಾಡಿ ಪಾದೋದಕಪಡೆಯುತ್ತಾರೆ.ಗುರು ಎನ್ನುವುದು ಮುಕ್ಕೋಟಿ ದೇವರಿಗೂ ಮಿಗಿಲಾದದ್ದು,ಗುರುಗಳ ದಿವ್ಯದೃಷ್ಠಿ ಒಮ್ಮೆ ಭಕ್ತರ ಮೇಲೆ ಬಿತ್ತೆಂದರೆ ಆ ಭಕ್ತನ ಸಕಲ ಪಾಪ ಕರ್ಮಗಳು ಕಳೆದು ಮುಕ್ತಿ ಹೊಂದುತ್ತಾನೆ.ಗುರು ಎನ್ನುವುದು ಸಾಕ್ಷಾತ್ ದೇವರಗಳ ಸಾಕಾರ ರೂಪ.ಗುರುಗಳ ದರ್ಶನ ಪಡೆಯುವುದು ಮೂವತ್ತು ಕೋಟಿ ದೇವರುಗಳ ದರ್ಶನಕ್ಕೆ ಸಮವೆಂದು ನುಡಿದರು.ನಾವು ಮಾಡುವ ಕಾಯಕದಲ್ಲಿಯೇ ದೇವರನ್ನು ಕಾಣಬೇಕು.ಆತ್ಮಶುದ್ದಿಯಾದ ಕಾಯಕದಿಂದ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆಂದು ನುಡಿದರು.

ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾಸ್ವಮಿಗಳು ಆಶಿರ್ವಚನ ನೀಡಿ ಶ್ರೀ ಗುರುಸಿದ್ದಯೋಗೀಂದ್ರ ಮಹಾಸ್ವಾಮಿಗಳು ಮಹಾನ್ ಕಾಯಕ ಶಿವಯೋಗಿಗಳು.ಅವರ ಕೃಪಾ ದೃಷ್ಠಿಗೆ ಬಿದ್ದ ಎಷ್ಟೋ ಶಿಶ್ಯರು ಪಾವನರಾಗಿ ಹೋಗಿದ್ದಾರೆ.ನಮಗೂ ಕೂಡಾ ಅವರ ಕೃಪಾ ದೃಷ್ಠಿ ಬೇಕಿದ್ದರೇ ಶ್ರೀಗಳ ಲಿಂಗೈಕ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ನುಡಿದರು.ನಾವು ಮಾಡುವ ಕಾರ್ಯದಲ್ಲಿ ಶ್ರದ್ದೆಯಿರಬೇಕು.ಕಾಯಾ ವಾಚಾ ಮನಸ್ಸಿನಿಂದ ಮಾಡಿದ ಎಲ್ಲಾ ಕಾರ್ಯಗಳು ನಮಗೆ ಯಾವತ್ತೂ ಫಲ ತಂದುಕೊಡುತ್ತವೆ ಎಂದರು.ನನ್ನ ಜೀವನಕ್ಕೆ ಬಣ್ಣ ತುಂಬಿದವರೇ ಈ ಬಣ್ಣದ ಮಠದ ವ್ಯವಸ್ಥಾಪಕರಾದ ಎಸ್ ಬಿ ಹಿರೇಮಠ.ನಾನು ಇದೇ ಮಠದ ಶಿಶ್ಯನಾಗಿದ್ದ ಸಂದರ್ಭದಲ್ಲಿ ನನಗೆ ಭವಿಷ್ಯಕ್ಕೆ ಬೇಕಾದ ಅಗತ್ಯವಾದ ಮಾರ್ಗದರ್ಶನ ನೀಡಿದ್ದಾರೆ.ಆದ್ದರಿಂದ ಈ ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಗಳಲ್ಲೂ ನಾನು ಪಾಲ್ಗೊಳ್ಳುತ್ತಿದ್ದೇನೆ ಮತ್ತು ಅವರ ಹಿಂದೆ ನಿಂತು ಕೆಲಸಮಾಡುತ್ತೇನೆಂದು ಹೇಳಿದರು.

ವೇದಿಕೆಯಲ್ಲಿ ವೀರಶೈವ ಸಮಾಜದ ಕೆ ಎಸ್ ಶೆಟ್ಟರ್,ಶಿವಯೋಗಿ ಹಂದ್ರಾಳ,ಬಸಲಿoಗಯ್ಯ ಹಿರೇಮಠ ಗಬಸಾವಳಗಿ,ಬಸವರಾಜ ಚಕ್ರಸಾಲಿ,ಶಿವಾನಂದ ಶಿವನಂಚಿ ಹಾಗು ಅಶೋಕ ಗೌಡ್ರು ಬೊಮ್ಮನಳ್ಳಿ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button