Follow Us On

WhatsApp Group
Focus News
Trending

ಹೊನ್ನಾವರ ರೋಟರಿ ಕ್ಲಬ್ ನೂತನ ಪದಾದಿಕಾರಿಗಳ ಪದಗ್ರಹಣ

ಹೊನ್ನಾವರ: ರೋಟರಿ ಕ್ಲಬ್ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹೊನ್ನಾವರ ಪಟ್ಟಣದ ರೋಟರಿ ಪಾರ್ಕ್ ಸಭಾ ಭವನದಲ್ಲಿ ನಡೆಯಿತು, ರೋಟರಿ ಕ್ಲಬ್ ನೂತನ ಅಧ್ಯಕ್ಷ ದೀಪಕ ಲೋಪಿಸ್, ಕಾರ್ಯದರ್ಶಿ ರಾಜೇಶ ನಾಯ್ಕ, ಖಜಾಂಚಿ ಎಸ್.ಎನ್.ಹೆಗಡೆ ಪಟ್ಟಣದ ರೋಟರಿ ಪಾರ್ಕ್ ನಲ್ಲಿ ಆಯೋಜಿಸಿದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ಲೆನಿ ಡಿ ಕೊಸ್ತಾ ಮಾತನಾಡಿ, ರೋಟರಿ ಕ್ಲಬ್ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಇಲ್ಲಿ ಪ್ರತಿ ವರ್ಷ ನೂತನ ಪದಾಧಿಕಾರಿಗಳು ಆಯ್ಕೆ ಮಾಡಲಾಗುತ್ತದೆ. ಎಲ್ಲರಿಗೂ ನಾಯಕತ್ವ ದೊರಕುತ್ತದೆ. ಹೊಸ ಹೊಸ ಯೋಜನೆಗಳು ಕಾರ್ಯಗತವಾಗುತ್ತದೆ. ಹೊನ್ನಾವರ ರೋಟರಿ ಕ್ಲಬ್ 57 ವರ್ಷಗಳ ಯಶಸ್ವಿ ಸೇವೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಶೈಲೇಶ ಹಳದೀಪುರ ಮಾತನಾಡಿ, ಹೊನ್ನಾವರ ರೋಟರಿ ಕ್ಲಬ್ ನಲ್ಲಿ ಹಿರಿಯ ಮತ್ತು ಕಿರಿಯ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸರ್ವ ಸದಸ್ಯರು ಅಭಿನಂದನೆ ಅರ್ಹರಾಗಿದ್ದಾರೆ ಎಂದು ಹೇಳಿದರು. ನೂತನ ಅಧ್ಯಕ್ಷ ದೀಪಕ ಲೋಪಿಸ್ ಮಾತನಾಡಿ, ನನ್ನ ಸೇವಾ ಮನೋಭಾವನೆ ನೋಡಿ ನನ್ನನ್ನು ಗುರುತಿಸಿ ರೋಟರಿಯಲ್ಲಿ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಇದು ಅತ್ಯಂತ ಸಂತಸ ತಂದಿದೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

ರೋಟರಿ ಕ್ಲಬ್ ಗೆ ರಾಜೀವ ಶಾನಭಾಗ ಮತ್ತು ಹೇಮಾವತಿ ನಾಯ್ಕ ಸೇರ್ಪಡೆಗೊಂಡರು. ಉತ್ತಮ ಸಹಾಯ ಸಹಕಾರ ನೀಡಿದವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು, ನೂತನ ಪದಾದಿಕಾರಿಗಳಿಗೆ ವಿವಿಧ ಸಂಘ ಸಂಸ್ಥೆಯವರು ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಮಹೇಶ ಕಲ್ಯಾಣಪುರ, ಡಾಕ್ಟರ ಗಾಯಿತ್ರಿ ಗುನಗಾ, ಪದಗ್ರಹಣ ಅಧಿಕಾರಿಯಾಗಿ ನಾರಾಯಣ ಯಾಜಿ, ಸಂತೋಷ ನಾಯ್ಕ, ಡಾ. ಗೌತಮ ಬಳಕೂರ, ಜಿ.ಪಿ. ಹೆಗಡೆ, ಸ್ಟಿಫನ್ ರೊಡ್ರಿಗಿಸ್, ರಂಗನಾಥ ಪೂಜಾರಿ, ದಿನೇಶ ಕಾಮತ, ಅನುಷಾ ಫರ್ನಾಂಡೀಸ್, ರಾಜೇಶ ನಾಯ್ಕ, ಸತೀಶ ಭಟ್ಟ, ಇದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Back to top button