ಶಿರಸಿ ತಾಲೂಕಿನ ಅರೆಕೊಪ್ಪಕ್ಕೆ ತಡರಾತ್ರಿ ಅಧಿಕಾರಿಗಳ ಆಗಮನ
ಓರ್ವ ವ್ಯಕ್ತಿಯ ವಿಚಾರಣೆ
ಶಿರಸಿ: ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಉಗ್ರಸಂಪರ್ಕದ ನಂಟಿನ ಚರ್ಚಚೆ ನಡೆದಿದ್ದವು. ಇದಕ್ಕೆ ಸಮರ್ಥನೆ ಎಂಬಂತೆ ಕೆಲ ಬೆಳವಣಿಗೆಗಳು ನಡೆಯುತ್ತಿವೆ.
ದೇಶಾದ್ಯಂತ ಬಂಧನಕ್ಕೊಳಗಾದ ಉಗ್ರರ ಜಾಡು ಬೆನ್ನತ್ತಿರುವ ಎನ್.ಐ.ಎ ತಂಡ, ಶಿರಸಿಗೆ ಭೇಟಿ ನೀಡಿ ತನಿಖೆ ನಡೆಸಿದೆ. ಹೌದು, ಬಂಧಿತ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಸಂಶಯದ ಹಿನ್ನಲೆಯಲ್ಲಿ ಜಿಲ್ಲೆಯ ಶಿರಸಿ ತಾಲೂಕಿನ ಅರೆಕೊಪ್ಪಕ್ಕೆ ತಡರಾತ್ರಿ ರಾತ್ರಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಭೇಟಿ ನೀಡಿ ವ್ಯಕ್ತಿಯೋರ್ವನನ್ನು ತನಿಖೆ ನೆಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಸಹಾಯಕನೊಂದಿಗೆ ಎನ್.ಐ.ಎ ತಂಡ ಆಗಮಿಸಿತ್ತು. ತಾಲೂಕಿನ ಅರೆಕೊಪ್ಪಕ್ಕೆ ಆಗಮಿಸಿ ವ್ಯಕ್ತಿಯನ್ನು ಮೂರು ಘಂಟೆಗಳ ಕಾಲ ವಿಚಾರಣೆ ನಡೆಸಿದೆ ಎನ್ನಲಾಗಿದೆ.
ಕೆಲ ಬಂಧಿತ ಉಗ್ರರೊಂದಿಗೆ ಸಂಪರ್ಕ ಹಿನ್ನಲೆಯಲ್ಲಿ ಶಿರಸಿಗೆ ಭೇಟಿ ನೀಡಿದ ತಂಡ, ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಸಿಮ್ ಬಳಕೆಯಾದ ಹಿನ್ನೆಲೆಯಲ್ಲಿ ಅದರ ಕುರಿತು ಇಲ್ಲಿನ ವ್ಯಕ್ತಿಯ ವಿಚಾರಣೆ ನಡೆಸಿದೆ. ಕೇವಲ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆದು ತಂಡ ವಾಪಸ್ ತೆರಳಿದೆ.
ವಿಸ್ಮಯ ನ್ಯೂಸ್, ಶಿರಸಿ
ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ
ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H. 66, ಕುಮಟಾ
9880003735/9449360181