Focus NewsImportant
Trending

ಅಪರಿಚಿತ ವಾಹನ ಡಿಕ್ಕಿ: ಕರಡಿ ಸಾವು

ಯಲ್ಲಾಪುರ: ಹೆದ್ದಾರಿ ದಾಟುತ್ತಿದ್ದ ಕರಡಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕರಡಿ ಮೃತಪಟ್ಟ ಘಟನೆ ಇಲ್ಲಿನ ಕೋಳಿಕೇರಿಯಲ್ಲಿ ನಡೆದಿದೆ. ಯಲ್ಲಾಪುರ-ಬಳ್ಳಾರಿ ಹೆದ್ದಾರಿಯಲ್ಲಿ ಬೆಳಗ್ಗಿನ ಜಾವ ಸುಮಾರು 5-30ರ ಸಮಯದಲ್ಲಿ ಕರಡಿ ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ಕರಡಿಗೆ 6ರಿಂದ 8ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಕರಡಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button