Focus NewsImportant
Trending

ನೀಲಗೋಡ ಯಕ್ಷೀ ಚೌಡೇಶ್ವರಿ ಸನ್ನಿಧಿಯಲ್ಲಿ ಅಮವಾಸ್ಯೆಯ ನಿಮಿತ್ತ ತೀರ್ಥಸ್ನಾನ : ರಾಜ್ಯದ ಮೂಲೆ ಮೂಲೆಯಿಂದ ಹರಿದುಬಂದ ಭಕ್ತಸಾಗರ

ಹೊನ್ನಾವರ: ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಅಮವಾಸ್ಯೆಯ ನಿಮಿತ್ತ ನವಚಂಡಿಕಾ ಯಾಗ ಧಾರ್ಮಿಕ ವಿಧಿ ವಿಧಾನದಂತೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಮತ್ತು ಹರಕೆ ಸಲ್ಲಿಸಿದರು. ಭಕ್ತರ ಸಂಕಷ್ಟವನ್ನು ಪರಿಹರಿಸುವ ಜಗನ್ನಮಾತೆ ಶ್ರೀ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಡೆಯುವ ದರ್ಶನದಲ್ಲಿ ದೇವಿ ಸೂಚಿಸಿದ ಸೂಚನೆಯಂತೆ ಭಕ್ತರು ಅಮವಾಸೆಯಂದು ತಿರ್ಥ ಸ್ನಾನ ಮಾಡುತ್ತಾರೆ,

ಪ್ರಧಾನ ಅರ್ಚಕರಾದ ಮಾರ್ಗದರ್ಶನದಂತೆ ವಿವಿದ ದಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ, ಭಕ್ತರಿಗಾಗಿ ವಿಷೇಶ ಪ್ರಾರ್ಥನೆಗಳು ನಡೆಯುತ್ತದೆ,ದೇವಾಲಯದಲ್ಲಿ ಪ್ರತಿ ಅಮವಾಸೆಯಂದು ಲೋಕ ಕಲ್ಯಾಣಾರ್ಥವಾಗಿ ನವ ಚಂಡಿಕಾ ಯ್ಯಾಗವು ಮಾದೇವ ಸ್ವಾಮೀಯವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿ ನವಚಂಡಿಕಾ ಯ್ಯಾಗ ತಿರ್ಥ ಸ್ನಾನ, ತುಪ್ಪದದೀಪ ಸೆವೆ, ಹೂವಿನ ಅಲಂಕಾರ ಸೇವೆ, ಹಣ್ಣುಕಾಯಿ ಸೇವೆ, ಅನ್ನದಾನ ಸೇವೆ, ಸಲ್ಲಿಸಿದರು.

ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿಯವರು ಮಾತನಾಡಿ ತಾಯಿಯ ಕ್ಷೇತ್ರದಲ್ಲಿ ಪ್ರತಿ ಅಮವಾಸೆಯಂದು ಸಾವಿರಾರು ಭಕ್ತರು ಆಗಮಿಸುತ್ತಾರೆ, ಪ್ರತಿ ಅಮವಾಸೆಯಂದು ಲೋಕಕಲ್ಯಾಣಾರ್ಥವಾಗಿ ನವಚಂಡಿಕಾ ಯಾಗ ನಡೆಯುತ್ತದೆ, ಅನೇಕ ಭಕ್ತರು ಅನ್ನದಾಸೋಹದಲ್ಲಿ ಪಾಲಗೋಳ್ಳುತಾರೆ. ಅಮವಾಸೆಯ ತಿರ್ಥಸ್ನಾನ ಮಾಡಿದರೆ ಅವರ ಕಷ್ಟ ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ . ಇಲ್ಲಿಗೆ ಕರ್ನಾಟ ರಾಜ್ಯ ಅಷ್ಟೆ ಅಲ್ಲದೆ ಬೇರೆ ಬೇರೆ ರಾಜ್ಯದಿಂದಲು ಭಕ್ತರು ಬಂದು ದೇವಿಯ ದರ್ಶನಮಾಡಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆರೆ ಎಂದರು. ಇದೇ ವೇಳೆ, ದೇವಾಲಯಕ್ಕೆ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು,

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button