Important
Trending

ಮತಾಂತರಕ್ಕೆ ಯತ್ನಿಸಿದ ಆರೋಪ: ಮಹಿಳೆ ಸೇರಿ ಆರು ಮಂದಿಯ ಬಂಧನ

ಶಿರಸಿ: ಸಾರ್ವಜನಿಕರನ್ನು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡಲು ಯತ್ನಿಸಿದ ತಂಡದ ಸದಸ್ಯರನ್ನು ಸ್ಥಳೀಯರ ಸಹಕಾರದೊಂದಿಗೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಪಂಚಲಿoಗ ಸಮೀಪದ ಜಗಳೆಮನೆಯಲ್ಲಿ ನಡೆದಿದೆ. ಪರಮೇಶ್ವರ ನಾಯ್ಕ, ಸುನಿತಾ ನಾಯ್ಕ, ಧನಂಜಯ ಶಿವಣ್ಣ, ಶಾಲಿನಿ ರಾಣಿ,ಕುಮಾರ್ ಲಮಾಣಿ ಹಾಗೂ ತಾರಾ ಲಮಾಣಿ ಬಂಧಿತ ಆರೋಪಿಗಳು.

ಆರೋಪಿಗಳು ಅಕ್ರಮವಾಗಿ ನಮ್ಮ ಮನೆಯನ್ನು ಪ್ರವೇಶಮಾಡಿದ್ದಾರೆ. ನೀವು ಯಾರೆಂದು ಕೇಳಿದಾಗ ನಿಮಗೆ ಆದಂತೆ ಇವರಿಗೂ ತೊಂದರೆಗಳು ಆಗಿದ್ದಾಗ ಕ್ರಿಶ್ಚಿಯನ್ ಧರ್ಮದ ಯೇಸುವನ್ನು ಪ್ರಾರ್ಥಿಸುತ್ತಿದ್ದರಿಂದ ಇವರಿಗೆ ಒಳ್ಳೆಯದಾಗಿದೆ. ಈಗ ನೀವು ನೂರಾರು ಹಿಂದೂ ದೇವರುಗಳನ್ನು ಪೂಜಿಸುವುದನ್ನು ಬಿಟ್ಟು ಯೇಸುವಿನ ಪೋಟೋವನ್ನು ದಿನವೂ ಪೂಜಿಸಿ ನಿಮಗೆ ಒಳ್ಳೆಯದಾಗುತ್ತದೆ. ನಿಮ್ಮ ಮನೆಯಲ್ಲಿದ್ದ ಹಿಂದೂ ದೇವರುಗಳ ಪೋಟೋಗಳನ್ನು ತೆಗೆದು ಹಾಕಿ ಎಂದು ತಾವು ತಂದಿದ್ದ ಪುಸ್ತಕ ದಲ್ಲಿನ ಪ್ರಾರ್ಥನೆಯನ್ನು ನಾವು ಹೇಳುತ್ತೇವೆ ಅದರಂತೆ ನೀವೂ ಅದೇ ರೀತಿಯಾಗಿ ಹೇಳಬೇಕು ಎಂದು ಒತ್ತಾಯ ಪಡಿಸಿ ಹಿಂದೂ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ಯುಂಟು ಮಾಡಿದ್ದಾರೆ ಎಂದು ಆದರ್ಶ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಪ್ರತಾಪ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button