Important
Trending

ಮನೆಯೊಳಗೆ ಕಾಣಿಸಿಕೊಂಡಿದ್ದ ಅಪರೂಪದ ಮಾಂಸಾಹಾರಿ ಸಸ್ತನಿ!

ಅಂಕೋಲಾ: ತಾನು ಸ್ರವಿಸುವ ಸುಗಂಧ ವಸ್ತುವಿನ ಮೂಲಕವೇ, ಗುರುತಿಸಲ್ಪಡುವ ಮಾಂಸಾಹಾರಿ ಸಸ್ತನಿ ವರ್ಗಕ್ಕೆ ಸೇರಿದ ಅಪರೂಪದ 3 ಪುನುಗು ಬೆಕ್ಕುಗಳು ತಾಲೂಕಿನ ಮಂಜಗುಣಿಯ ಮನೆಯೊಂದರಲ್ಲಿ ಕಾಣಿಸಿಕೊಂಡು, ಸ್ಥಳೀಯರಲ್ಲಿ ಆತಂಕ ಹಾಗೂ ಕುತೂಹಲ ಮೂಡಿಸಿತ್ತು. ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಭಾರತದ ಇತರೆಡೆಯೂ ಈ ಅಪರೂಪದ ವನ್ಯಜೀವಿಗಳು ಕಂಡು ಬರುತ್ತವೆ. ಅಂಕೋಲಾದ ಮನೆಯಲ್ಲಿ ಕಂಡು ಬಂದ 3 ಪುನುಗು ಬೆಕ್ಕುಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಂರಕ್ಷಿಸಿ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಮಂಜಗುಣಿಯ ನಿವಾಸಿ ಸಂಜಯ ನಾಯ್ಕ ಎನ್ನುವವರ ಮನೆಯ ಅಟ್ಟದ ಮೇಲೆ ಮೂರು ಪುನುಗು ಬೆಕ್ಕುಗಳು ಕಂಡು ಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ವನ್ಯಜೀವಿ ಮತ್ತು ಉರಗ ಸಂರಕ್ಷಕ ಸ್ವಾಮುವೆಲ್ ಸಹ ಕಾರದಲ್ಲಿ ಮನೆಯೊಳಗೆ ಇದ್ದ ಪುನುಗು ಬೆಕ್ಕುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಡಿ.ಸಿ.ಎಫ್ ರವಿಶಂಕರ್, ಎ.ಸಿ.ಎಫ್ ಕೃಷ್ಣ ಅಣ್ಣಯ್ಯ ಗೌಡ, ಆರ್ ಎಫ್ ಓ ಗಣಪತಿ. ನಾಯಕ ಬಾಸಗೋಡ ಇವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಆರ್. ಎಚ್. ನಾಯ್ಕ, ಅರಣ್ಯ ರಕ್ಷಕ ಸಿದ್ಧಣ್ಣ, ಪುನುಗು ಬೆಕ್ಕುಗಳ ಸಂರಕ್ಷಣೆಗೆ ಯಶಸ್ಸಿ ಕಾರ್ಯಾಚರಣೆ ನಡೆಸಿದ್ದರು, ಸಂಜಯ ನಾಯ್ಕ ಕುಟುಂಬ ಸದಸ್ಯರು, ಸ್ಥಳೀಯರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button