ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಸ್ಕಾರ್ಪಿಯೋ ವಾಹನ ತಡೆಯಲು ಯತ್ನಿಸಿದಾಗ, ಪೊಲೀಸರನ್ನೂ ಲೆಕ್ಕಿಸದೇ ಅವಾಚ್ಯ ಶಬ್ದದಿಂದ ನಿಂದಿಸಿ, ತಳ್ಳಾಟ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.
ಅಂಕೋಲಾ: ತಾಲೂಕಿನ ಉದ್ದಿಮೆದಾರನೋರ್ವ ಮತ್ತು ಆತನ ಜೊತೆಗಿದ್ದ ಕೆಲವರು, ತಾವು ತಂದಿದ್ದ ದ್ವಿಚಕ್ರ ವಾಹನ ಮತ್ತು ಸ್ಕಾರ್ಪಿಯೋ ವಾಹನವನ್ನು ರಾ.ಹೆ.66ರ ಹಟ್ಟಿಕೇರಿಯ ಟೋಲ್ ನಾಕಾ ಬಳಿ ನಿಯಮಬಾಹಿರವಾಗಿ ಕೊಂಡೊಯ್ಯುವುದನ್ನು ಪ್ರಶ್ನಿಸಿದ ಗುತ್ತಿಗೆದಾರ,, ಐ. ಆರ್.ಬಿ ಸಿಬ್ಬಂದಿಗಳೊಂದಿಗೆ ರಂಪಾಟ ನಡೆಸಿದ್ದರು.
ಈ ವೇಳೆ ಅದೇ ಮಾರ್ಗವಾಗಿ ಹೊರಟಿದ್ದ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಸ್ಕಾರ್ಪಿಯೋ ವಾಹನ ತಡೆಯಲು ಯತ್ನಿಸಿದಾಗ, ಪೊಲೀಸರನ್ನೂ ಲೆಕ್ಕಿಸದೇ ಅವಾಚ್ಯ ಶಬ್ದದಿಂದ ನಿಂದಿಸಿ, ತಳ್ಳಾಟ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲಾ ಘಟನಾವಳಿಗಳ ದ್ರಶ್ಯ ಟೋಲ್ ಗೇಟಿನ ಸಿ. ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ಅಲಗೇರಿಯ ಸುರೇಶ .ಆರ್ . ನಾಯಕ, ಬೊಮ್ಮಯ್ಯ ಎಸ್, ಗೋಪಾಲ ಜಿ ನಾಯಕ, ಸುರೇಶ ಜಿ.ನಾಯಕ ಇವರೇ ಬಂಧಿತ ಆರೋಪಿಗಳಾಗಿದ್ದು ಇವರೊಡನೆ ಓರ್ವ ಅಪ್ರಾಪ್ತ ಬಾಲಕನು ಇದ್ದಾನೆ ಎನ್ನಲಾಗಿದೆ. ತಾಲೂಕಿನಲ್ಲಿ ಈ ವಿಷಯ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿತ್ತು.,
ಎಡಿಶನಲ್ ಎಸ್ಪಿ ಬದ್ರೀನಾಥ, ಡಿವೈಎಸ್ಪಿ ಅರವಿಂದ ಕಲಗುಜ್ಜಿ ಠಾಣೆಗೆ ಭೇಟಿ ನೀಡಿದ್ದರು. ಹಿರಿಯ ಅಧಿಕಾರಿಗಳ ಮಾಗದರ್ಶನದಲ್ಲಿ ಸಿ. ಪಿ.ಐ. ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.