Follow Us On

WhatsApp Group
Big News
Trending

ಕಾಮನ ವೇಷ: ಇಡೀ ರಾಜ್ಯದಲ್ಲಿ ಇಲ್ಲಿ ಮಾತ್ರ ಇದೆ ಇಂಥ ಆಚರಣೆ

ಹೊನ್ನಾವರ: ಹೋಳಿ ಹಬ್ಬವೆಂದರೆ ಬಣ್ಣಗಳನ್ನು ಎರಚುವುದು, ನಂತರ ಒಂದಿಷ್ಟು ಸಿಹಿ ತಿಂಡಿಯನ್ನು ಮಾಡಿ ಸವಿಯುವುದಷ್ಟೇ ಅಲ್ಲ. ಅದಕ್ಕೂ ಮಿಗಿಲಾದ ಹಲವಾರು ಪದ್ಧತಿಗಳು, ಆಚರಣೆಗಳು ನಮ್ಮ ನಾಡಿನ ಕರಾವಳಿ ತೀರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲಾ, ಶಿರಸಿ, ಕಾರವಾರ ಮುಂತಾದ ಭಾಗದಲ್ಲಿದಲ್ಲಿ ಹೋಳಿ ಹಬ್ಬದ ಆಚರಣೆ ಬಹಳ ಅದ್ದೂರಿಯಿಂದ ನಡೆಯುತ್ತದೆ ಹಾಗೂ ಇಲ್ಲಿಯ ಹೋಳಿ ಸಂಭ್ರಮ ಸವಿಯುವುದು, ಆ ಜಾನಪದ ಶೈಲಿಯ ಕುಣಿತವನ್ನು ವೀಕ್ಷಿಸುವುದೇ ಒಂದು ಅದ್ಬುತ ಸಂಗತಿ. ಇಂಥ ಒಂದು ವಿಶೇಷ ಆಚರಣೆ ಕಾಮನ ವೇಷ.. ಇಡೀ ರಾಜ್ಯದಲ್ಲಿ ಹೊನ್ನಾವರ ಬಿಟ್ಟರೆ ಇಂಥ ಆಚರಣೆ ಮತ್ತೆಲ್ಲೂ ಇಲ್ಲ.

ಈ ಒಂದು ಕಾಮನ ವೇಷದ ಕುರಿತಾಗಿ ಮಾಹಿತಿ ನೀಡಿರುವ ಸ್ಥಳೀಯರಾದ ಹೊನ್ನಾವರದ ನರಸಿಂಹ ಭಟ್ ಅವರು, ಇಡಿ ರಾಜ್ಯದಲ್ಲಿಯೇ ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದಲ್ಲಿ ಮಾತ್ರ ಈ ಒಂದು ಕಾಮನ ವೇಷವನ್ನು ಧರಿಸುತ್ತಾರೆ. ಈ ಒಂದು ಕಾಮನ ವೇಷ ಧರಿಸುವ ಪದ್ದತಿ ತಲಾ ತಲಾಂತರಗಳಿoದ ನಡೆದುಕೊಂಡು ಬಂದಿದ್ದು, ಇದಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಹೋಳಿ ಹಬ್ಬದಂದು 15 ರಿಂದ 20 ಕಾಮನ ವೇಷದ ಗುಂಪುಗಳನ್ನು ಮಾಡಲಾಗುತ್ತದೆ ಹಾಗೂ ಒಂದೊoದು ಗುಂಪಿನಲ್ಲಿ 30 ಕ್ಕೂ ಅಧಿಕ ಕಾಮನ ವೇಷಾಧಾರಿಗಳು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಈ ಹೋಳಿ ಹಬ್ಬದ ವಿಶೇಷವಾಗಿ ಎಲ್ಲರ ಗಮನ ಸೇಳೆಯುವುದೆಂದರೆ ಸುಗ್ಗಿ ಕುಣಿತ. ಇವುಗಳಲ್ಲಿ ಬೇಡರ ವೇಷ, ಕಾಮನ ವೇಷ ಸೇರಿದಂತೆ ಹಲವು ವಿದಗಳಿವೆ. ಇವುಗಳಲ್ಲಿ ವಿಶೇಷವಾದ ಒಂದು ವೇಷವೆಂದರೆ ಅದು ಕಾಮನ ವೇಷ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದಲ್ಲಿ ಮಾತ್ರ ತೋಡುವ ವೇಷ ಇದಾಗಿದೆ. ಶಿರಸಿಯಲ್ಲಿ ಹೇಗೆ ಬೇಡರ ವೇಷವೂ ಪ್ರಸಿದ್ಧಿ ಪೆಡೆದಿದೆಯೋ ಅದೇ ರೀತಿ ಹೊನ್ನಾವರದ ಕಡತೋಕಾ ಗ್ರಾಮದಲ್ಲಿ ತೋಡುವ ಈ ಕಾಮನ ವೇಷಕ್ಕೆ ಅದರದ್ದೆ ಆದಂತಹ ಹಲವು ವಿಶೇಷತೆಗಳಿವೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777..

ವಿಸ್ಮಯ ನ್ಯೂಸ್. ಹೊನ್ನಾವರ.

Back to top button