ಇವರೇ ನೋಡಿ! ನಡು ರಸ್ತೆಯಲ್ಲಿ ಅಪಘಾತದಲ್ಲಿ ಗಾಯಗೊಂಡವರಿಗೆ ಯಾರೂ ಸಹಾಯಕ್ಕೆ ಬಂದಿರಲಿಲ್ಲ: ಮಾನವೀಯತೆ ಮೆರೆದ ಯುವಕನಿಗೆ ಪೊಲೀಸರಿಂದ ಸನ್ಮಾನ
ಸಹಾಯಕ್ಕಾಗಿ ಗಾಯಗೊಂಡವರು ಅಂಗಲಾಚುತ್ತಿದ್ದ ವೇಳೆ ಪರಿಸ್ಥಿತಿಯ ಗಂಭೀರತೆ ಅರಿತು ತನ್ನ ಬೈಕ್ ನಲ್ಲಿದ್ದ ಲಗೇಜ್ ಬ್ಯಾಗ್ ಕೆಳಗಿಳಿಸಿ, ರಸ್ತೆಯಂಚಿಗೆ ಇಟ್ಟು, ಅಪಘಾತದಿಂದ ಕೋಮಾವಸ್ಥೆಗೆ ಹೋದಂತಿದ್ದ ಪಿಎಚ್‌ಡಿ ವಿದ್ಯಾರ್ಥಿಯ ಜೀವರಕ್ಷಣೆಗೆ ಮುಂದಾಗಿದ್ದ ಯುವಕ.
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದವರು ಸಹಾಯಕಕ್ಕಾಗಿ ಅಂಗಲಾಚುತ್ತಿದ್ದರು. ಆದರೆ, ಕೆಲ ಸಮಯದ ವರೆಗೆ ಯಾರೊಬ್ಬರೂ ಗಾಯಾಳುಗಳ ಸಹಾಯಕ್ಕೆ ಬಂದಿಲ್ಲ. ವಾಹನ ಸವಾರರು ಗಾಯಾಳುಗಳನ್ನು ನೋಡುತ್ತಾ, ಅದೇ ಮಾರ್ಗದಲ್ಲಿ ಮುಂದೆ ಸಾಗುತ್ತಿದ್ದರೆ ವಿನ: ಸಹಾಯಕ್ಕೆ ಬಂದಿರಲಿಲ್ಲ. ಈ ವೇಳೆ ಮಾನವೀಯತೆ ಮೆರೆದಿದ್ದು, ಇದೇ ಯುವಕ..
ಹೌದು, ಶನಿವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಘಟನಾ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ತಕ್ಷಣಕ್ಕೆ ಆಂಬುಲೆನ್ಸ್ ಸೇವೆಗೆ ಕರೆ ಮಾಡುವುದು ಕಷ್ಟ ಸಾಧ್ಯವಾದ ಪರಿಸ್ಥಿತಿಯಲ್ಲಿ ಗಾಯಾಳುಗಳು ತಮ್ಮ ಸಹಾಯಕ್ಕಾಗಿ ಅದೇ ದಾರಿಯಲ್ಲಿ ಹೋಗುತ್ತಿರುವ ಇತರೇ ಕೆಲ ವಾಹನ ಸವಾರರಲ್ಲಿ ವಿನಂತಿಸಿದ್ದರು. ಆದರೆ, ಯಾರೂ ಸಹಾಯಕ್ಕೆ ಮುಂದೆ ಬರಲಿಲ್ಲ ಎನ್ನಲಾಗಿದೆ.
ಈ ವೇಳೆ ಬೆಳಗಾವಿಯಿಂದ ಗೋಕರ್ಣಕ್ಕೆ ಇದೇ ಮಾರ್ಗದ ಮೂಲಕ ಬೈಕ್ ಮೇಲೆ ತೆರಳುತ್ತಿದ್ದ ಆಂಧ್ರಪ್ರದೇಶದ ಕರ್ನೂಲ್ ನ ಯುವಕ ರವಿಪ್ರಕಾಶ ರೆಡ್ಡಿ , ಪರಿಸ್ಥಿತಿ ಅರಿತು, ತನ್ನ ಬೈಕ್ ನಲ್ಲಿದ್ದ ಲಗೇಜ್ ಬ್ಯಾಗ್ ಕೆಳಗಿಳಿಸಿ, ರಸ್ತೆಯಂಚಿಗೆ ಇಟ್ಟು ಅಪಘಾತದಿಂದ ಕೋಮಾವಸ್ಥೆಗೆ ಹೋದಂತಿದ್ದ ಪಿ.ಎಚ್ ಡಿ ವಿದ್ಯಾರ್ಥಿಯ ಜೀವ ರಕ್ಷಣೆ ಮುಂದಾಗಿದ್ದಾರೆ.
ಪಕ್ಕದಲ್ಲೇ ಇದ್ದ ಇನ್ನೋರ್ವ ಗಾಯಾಳುವಿನ ನೆರವು ಪಹೆದು ತನ್ನ ಬೈಕ್ ಮೇಲೆ ಕೂರಿಸಿಕೊಂಡು ಬಹುದೂರದ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದ. ಮಾನವೀಯ ಸಹಾಯ ಹಸ್ತ ಚಾಚಿದ ಯುವಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಈ ಯುವಕನ ಮಾನವೀಯ ಕಾರ್ಯದ ಕುರಿತು ವಿಸ್ಮಯ ಟಿವಿ ವೆಬ್ ನಲ್ಲಿ ಸುದ್ದಿ ನಿನ್ನೆ ಪ್ರಕಟವಾಗಿದ್ದು, ಯುವಕನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ರವಿಪ್ರಕಾಶನ ಕಾರ್ಯ ಮೆಚ್ಚಿದ ಅಂಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಗೋಕರ್ಣಕ್ಕೆ ತೆರಳಿದ್ದ ಯುವಕನನ್ನು, ರವಿವಾರ ವಾಪಸ್ ಅಂಕೋಲಾ ಪೊಲೀಸ್ ಠಾಣೆಗೆ ಕರೆಸಿಕೊಂಡು ಸನ್ಮಾನಿಸಿ ಗೌರವಿಸಿದರು. ಮಾನವೀಯತೆ ಮೆರೆದ ಯುವಕನನ್ನು ಸನ್ಮಾನಿಸಿದ ಪೊಲೀಸರ ಕಾರ್ಯವೈಖರಿ ಕೂಡಾ ಮೆಚ್ಚುವಂಥದ್ದು..
ಯುವಕ ರವಿಪ್ರಕಾಶ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಿವಿಲ್ ಎಂಜಿನಿಯರಿoಗ್ ಪದವಿ ಪಡೆದು ಮಹಾರಾಷ್ಟ್ರದ ಪುಣೆಯ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕನ್ಸ್ಟ್ರಕ್ಷನ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಕಾಲೇಜಿನಲ್ಲಿ ರಿಯಲ್ ಎಸ್ಟೇಟ್ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿನೆ.
ಸ್ನಾತಕೋತ್ತರ ಪದವಿ ಮುಗಿಸಿ ಪುಣೆಯಿಂದ ಹೊರಟು ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಾದ ಗೋಕರ್ಣ ಮುರುಡೇಶ್ವರ ಉಡುಪಿ ಪಟ್ಟಣವನ್ನು ವೀಕ್ಷಿಸಿ ಬಳ್ಳಾರಿ ಮೂಲಕ ಹುಟ್ಟೂರು ಆಂಧ್ರಪ್ರದೇಶದ ಕರ್ನೂಲಿಗೆ ತೆರಳುವ ಉದ್ದೇಶದಿಂದ ಬಂದಿದ್ದರು.
ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಕೃಷ್ಣಾನಂದ ನಾಯಕ ಪಿಎಸ್ಐ ಇಸಿ ಸಂಪತ್ ಪಿಎಸ್ಐ ಪ್ರೇಮನಗೌಡ ಪಾಟೀಲ್ ಹಾಗೂ ಸಿಬ್ಬಂದಿ ಮತ್ತು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ರವಿಪ್ರಕಾಶ ಅವರನ್ನು ಗೌರವಿಸಿ ಶುಭ ಹಾರೈಸಿದರು.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ