Follow Us On

WhatsApp Group
Big News
Trending

ಎಷ್ಟೆ ಮನವಿ ನೀಡಿದ್ರೂ ಸ್ಪಂದಿಸದ ಐ.ಆರ್.ಬಿ: ಊರಿನವರ ಹಿತ ರಕ್ಷಣೆಗೆ ಮುಂದಾದ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ಬೆಳಕೆ

ಬಸ್ ತಂಗುದಾಣ ನಿರ್ಮಿಸಿ ಲೋಕಾರ್ಪಣೆ

ಭಟ್ಕಳ: ಹಲವು ದಿನಗಳಿಂದ ಬೆಳಕೆಯಲ್ಲಿ ಬಸ್ಸು ತಂಗುದಾಣ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಇತ್ತು. ಹಿರಿಯರು, ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ನೆನೆದುಕೊಂಡು ನಿಂತು ಬಸ್ಸಿಗಾಗಿ ಕಾಯುವ ಸನ್ನಿವೇಶ ಮನಸ್ಸಿಗೆ ಕಸಿವಿಸಿ ಎನಿಸುತ್ತಿತ್ತು. ಆ ಕಾರಣಕ್ಕಾಗಿ ಬೆಳಗೆಯಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಿದ್ದೇವೆ ಎಂದು ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಹೇಳಿದರು.

ಹಲವು ದಿನಗಳಿಂದ ಬೆಳಕೆಯಲ್ಲಿ ಬಸ್ಸು ತಂಗುದಾಣ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಇತ್ತು. ಹಿರಿಯರು, ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ನೆನೆದುಕೊಂಡು ನಿಂತು ಬಸ್ಸಿಗಾಗಿ ಕಾಯುವ ಸನ್ನಿವೇಶ ಮನಸ್ಸಿಗೆ ಕಸಿವಿಸಿ ಎನಿಸುತ್ತಿತ್ತು. ಆ ಕಾರಣಕ್ಕಾಗಿ ಬೆಳಗೆಯಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಿದ್ದೇವೆ ಎಂದು ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಹೇಳಿದರು.

78 ನೇ ಸ್ವಾತಂತ್ರ‍್ಯೋತ್ಸವ ಸುಸಂದರ್ಭದಲ್ಲಿ ಗ್ರಾಮೀಣ ವ್ಯವಸಾಯ ಸಂಘ ನಿಯಮಿತದ ವತಿಯಿಂದ ಭಟ್ಕಳ ತಾಲೂಕಿನ ಬೆಳಕೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊAಡು ಬಸ್ಸು ತಂಗುದಾಣವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಬಸ್ಸು ತಂಗುದಾಣ ತೀರಾ ಅವಶ್ಯವಾಗಿದ್ದು ಇದು ನಮ್ಮ ನಿಮ್ಮೆಲ್ಲರ ಆಸ್ತಿ ಇದನ್ನು ನಾವು ಜೋಪಾನವಾಗಿ ಕಾಪಾಡಿಕೊಂಡು ಹೋಗಬೇಕು ಎಂದರು.

ಬೆಳಕೆ ಗ್ರಾಮ ಪಂಚಾಯತ ಅಧ್ಯಕ್ಷ ಜಗದೀಶ ನಾಯ್ಕ ಮಾತನಾಡಿ ಇದೊಂದು ಸಮಾಜಮುಖಿ ಕಾರ್ಯವಾಗಿದ್ದು ನಾವು ಅನೇಕ ಬಾರಿ ಐ.ಆರ್.ಬಿ ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು ಬಸ್ಸ್ ತಂಗುದಾಣ ನಿರ್ಮಿಸಿ ಕೊಟ್ಟಿರಲಿಲ್ಲ. ಇದೀಗ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿಯಮಿತ ಮಾದೇವ ನಾಯ್ಕರವರ ನೇತೃತ್ವದಲ್ಲಿ ಬಸ್ಸು ತಂಗುದಾಣ ನಿರ್ಮಿಸಿ ಕೊಟ್ಟಿರುವುದು ಖುಷಿಯ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪಾಂಡುರAಗ ನಾಯ್ಕ, ಲಲಿತಾ ಕೊರ್ಗ ನಾಯ್ಕ, ಭಟ್ಕಳ ಬಿಜೆಪಿ ಮಂಡಳ ಅಧ್ಯಕ್ಷ ಲಕ್ಮೀನಾರಾಯಣ ನಾಯ್ಕ, ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ

Back to top button