ಮನೆಯ ಯಜಮಾನನ ತಂದೆ ಮೃತಪಟ್ಟಿದ್ದರು. ಹೀಗಾಗಿ ಮನೆಯವರೆಲ್ಲರೂ ಕುಟುಂಬ ಸಮೇತ ತಮ್ಮೂರಿಗೆ ಮರಳಿದ್ದರು. ಇದೇ ಸಮಯವನ್ನು ದುಷ್ಕರ್ಮಿಗಳು ಹೊಂಚುಹಾಕಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಆದರೆ, ಈ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕಾರವಾರ: ಮನೆಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ಕಳುವಾದ ಸ್ವತ್ತುಗಳ ಸಮೇತ ಬಂಧಿಸಿದ ಘಟನೆ ಕಾರವಾರದಲ್ಲಿ ನಡೆದಿದೆ. ತಂದೆಯವರು ಮೃತರಾದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮನೆಯವರು ತಮ್ಮೂರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು, ಮನೆಯ ಬಾಗಿಲು ಒಡೆದು ಚಿನ್ನಾಭರಣ ದೋಚಿದ್ದರು.
ಮೂಲತಃ ತಾಲೂಕಿನ ವೈಲವಾಡದ ಸುಶಾಂತ ಶೇಟ್, ನಗರದಲ್ಲಿ ಬಾಡಿಕೆ ಮನೆಮಾಡಿಕೊಂಡಿದ್ದು, ತಂದೆಯವರು ಮೃತರಾದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ತಮ್ಮೂರಿಗೆ ತೆರಳಿದ್ದರು. ಏಪ್ರಿಲ್ 13 ರಂದು ವಾಪಸ್ ಕಾರವಾರಕ್ಕೆ ಆಗಮಿಸಿದಾಗ ಅವರಿಗೆ ಶಾಕ್ ಕಾದಿತ್ತು.
ಹಾಕಿದ್ದ ಬೀಗ ಒಡೆದ ಬಂಧಿತರು ಚಿನ್ನಾಭರಣ ದೋಚಿಸಿದ್ದರು. ಕಾಜುಬಾಗದ ರೋಹಿತ ಆನಂದ ಹರಿಜನ, ದುರ್ಗಾದೇವಿ ದೇವಸ್ಥಾನ ಸಮೀಪದ ನಿವಾಸಿ ಅಸ್ಪಾಕ್ ಉಸ್ಮಾನ್ ಕಡವಾಡಿ, ಹಾಗು ಪಶ್ಚಿಮ ಬಂಗಾಳದ ಪುರಪೂರ ಮೂಲದ ಅಸ್ಲಂ ಶೇಖ್ ನೂರ್‌ಅಲಂ ಶೇಖ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ಸುಶಾಂತ ಶೇಟ್ ದೂರು ನೀಡಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಾರವಾರ ಪೊಲೀಸರು, ಆರೋಪಿಗಳನ್ನು 48 ಗಂಟೆಯಲ್ಲಿ ಬಂಧಿಸಿದ್ದಾರೆ. 43 ಗ್ರಾಂ ತೂಕದ ಮಾಂಗಲ್ಯ ಸರ, 10 ಗ್ರಾಂ ಬಂಗಾರದ ಚೈನು, 5 ಗ್ರಾಂ ಚೈನು, 18 ಗ್ರಾಂ ಉಂಗುರ, 2 ಗ್ರಾಂ ಕಿವಿಯೋಲೆ, ತಲಾ 1 ಗ್ರಾಂನ ಉಂಗುರ, ಕಿವಿಯೋಲೆ, 15 ಗ್ರಾಂ ಕಾಲುಗಜ್ಜೆ, 20 ಗ್ರಾಂ ಬೆಳ್ಳಿ ಸರ, 3 ಗ್ರಾಂ ಬ್ರೆಸ್‌ಲೈಟ್ ಕಳ್ಳತನವಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದ್ರಿನಾಥ್, ಡಿವೈಎಸ್‌ಪಿ ಅರವಿಂದ್ ಕಲ್ಗುಜ್ಜಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸಂತೋಷ್ ಶೆಟ್ಟಿ, ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888…
ವಿಸ್ಮಯ ನ್ಯೂಸ್, ಕಾರವಾರ