Big News
Trending

ಸಾವಿರಕ್ಕೆ 1 ಲಕ್ಷ ,25 ಸಾವಿರಕ್ಕೆ 5 ಲಕ್ಷ ದಿಢೀರ್ ಸಾಲ ? 10 ಸಾವಿರಕ್ಕೆ ನೌಕರಿ,ವಿದೇಶಿ ಉದ್ಯೋಗದಾಸೆ ತೋರಿಸಿ ಪಂಗನಾಮ: ಓಡಿಹೋಗಲು ಯತ್ನಿಸಿದ ವಂಚಕನ ಸೆರೆ

ಅಮಾಯಕರಿಗೆ ಮರಳು ಮಾಡುವುದಲ್ಲದೇ, ತನ್ನ ವಂಚನೆ ಜಾಲದಲ್ಲಿ ಬಿದ್ದವರನ್ನು ಪುಸಲಾಯಿಸಿ ಅವರ ಮೂಲಕವೇ ಅವರ ಪರಿಚಿತರೂ ತನ್ನ ಖೆಡ್ಡಾಗೆ ಬೀಳುವಂತೆ ಮಾಡುವಲ್ಲಿ ನಿಸ್ಸೀಮ ಆಗಿದ್ದ ಎನ್ನಲಾಗಿದೆ

ಅಂಕೋಲಾ: ಕಡಿಮೆ ಬಡ್ಡಿಗೆ ಹೆಚ್ಚಿನ ಹಣ,ವಿದೇಶಿ ಉದ್ಯೋಗ ಮತ್ತಿತರ ಆಮಿಷ ತೋರಿಸಿ ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ಪಂಗನಾಮ ಹಾಕುತ್ತಿದ್ದ ವಂಚಕನನನ್ನು ಅಂಕೋಲಾ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಕುಮಟಾ ತಾಲೂಕಿನ ಗಾಂಧಿನಗರ ನಿವಾಸಿ ನಾಗರಾಜ್ ವಿ ವೆರ್ಣೇಕರ್ (35) ಬಂಧಿತ ಆರೋಪಿಯಾಗಿದ್ದು, ಈತನು ಈ ಹಿಂದಿನಿಂದಲೂ ಅಂಕೋಲಾ, ಕಾರವಾರ ಮತ್ತಿತರೆಡೆ ಲಾಡ್ಜ್ ನಲ್ಲಿ ಉಳಿದುಕೊಂಡು ತನ್ನ ಪ್ರಯಾಣದ ನೆಪದಲ್ಲಿ ಅಮಾಯಕ ಕೆಲ ರಿಕ್ಷಾ ಚಾಲಕರ, ಮತ್ತಿತರರ ಸ್ನೇಹ ಮಾಡಿ, ಅವರ ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ತನ್ನ ವಂಚನೆಯ ಬಲೆ ಬೀಸುತ್ತಿದ್ದ ಎನ್ನಲಾಗಿದೆ.

ಆಧಾರ ಕಾರ್ಡ್, ಪೋಟೋದಂತ ಕನಿಷ್ಟ ದಾಖಲಾತಿ ಜೊತೆಯಲ್ಲಿ 5 ಸಾವಿರ ನೀಡಿದರೆ 1 ಲಕ್ಷ, 25 ಸಾವಿರ ನೀಡಿದರೆ 5 ಲಕ್ಷ ದಿಡೀರ್ ಸಾಲ, 10 ಸಾವಿರಕ್ಕೆ ವಿವಿಧ ಉದ್ಯೋಗ, ವಿದೇಶಿ ನೌಕರಿ ಮುಂತಾದ ಆಮಿಷ ತೋರಿಸಿ ಅಮಾಯಕರಿಗೆ ಮರಳು ಮಾಡುವುದಲ್ಲದೇ, ತನ್ನ ವಂಚನೆ ಜಾಲದಲ್ಲಿ ಬಿದ್ದವರನ್ನು ಪುಸಲಾಯಿಸಿ ಅವರ ಮೂಲಕವೇ ಅವರ ಪರಿಚಿತರೂ ತನ್ನ ಖೆಡ್ಡಾಗೆ ಬೀಳುವಂತೆ ಮಾಡುವಲ್ಲಿ ನಿಸ್ಸೀಮ ಆಗಿದ್ದ ಎನ್ನಲಾಗಿದೆ.

ತನ್ನ ವಂಚನೆ ಜಾಲ ಬಯಲಾಗದಿರಲೆಂದು ಆಗಾಗ ತಾನು ಉಳಿದು ಕೊಂಡ ಲಾಡ್ಜ ಬದಲಿಸುವುದು,, ಬೇರೆ ಬೇರೆ ಮೊಬೈಲ್ ಸಿಮ್ ಬಳಸುವುದು, ನಕಲಿ ಬಂಗಾರದ ರೋಪ್ ಚೈನ್ ಮತ್ತಿತರ ಅಭರಣ ತೊಟ್ಟು ಸ್ಥಿತಿವಂತನಂತೆ ಫೋಸ್ ಕೊಡುವುದು , ಮತ್ತಿತರ ಚಾಲಾಕಿ ಬುದ್ಧಿ ತೋರಿಸುತ್ತಿದ್ದ ಎನ್ನಲಾಗಿದೆ.

ಇವನ ವಂಚನೆ ಜಾಲದಲ್ಲಿ ಸಿಲುಕಿ ಈ ಹಿಂದೆಯೇ ತಾಲೂಕಿನ ಕಂತ್ರಿಯ ಮಹಿಳೆ, ಕಾಕರಮಠದ ಪುರುಷ, ಕಾರವಾರದ ನಂದನ ಗದ್ದಾ – ಬಾಡದ ಪುರುಷ, ಗಿಂಡಿವಾಡದ ಮಹಿಳೆ, ಬಿಳಿ ಹೊಂಯ್ಲಿ ಮಹಿಳೆ ಸೇರಿದಂತೆ ಹಲವರಿಗೆ ಪಂಗನಾಮ ಬಿದ್ದಿದೆ. ಇತ್ತೀಚೆಗೆ ಈತ ವಜ್ರಳ್ಳಿ ಮತ್ತು ಅಡಿಗೋಣ ವ್ಯಾಪ್ತಿಯ ಒಂದಿಬ್ಬರು ಯುವಕರಿಗೂ ವಿವಿಧ ಅವಿಷ ತೋರಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಅಂತೆಯೇ ಇತರೆಡೆಯೂ ಇನ್ನು ಕೆಲವರು ಹಣ ಕಳೆದುಕೊಂಡಿರುವ ಸಾಧ್ಯತೆ ಕೇಳಿ ಬಂದಿದೆ.

ಈತನ ನಯ ವಂಚನೆಗೆ ಅರಿಯದೇ ಮರುಳಾದ ತಪ್ಪಿಗೆ ತನ್ನನ್ನೇ ತಾನು ಹಳಿದುಕೊಳ್ಳುತ್ತಿದ್ದ ಅಂಬಾರಕೋಡ್ಲ ಶಿರಕುಳಿಯ ರಿಕ್ಷಾ ಚಾಲಕ ಕೊನೆಗೂ ಎಚ್ಚೆತ್ತು ಕೊಂಡು, ವಂಚಕ ವೆರ್ಣೇಕರ ಮತ್ತೆ ಅಂಕೋಲಾಕ್ಕೆ ಬಂದು ಬಾರ್ & ರೆಸ್ಟೋರೆಂಟ್ ಹೊಂದಿಕೊಂಡಿರುವ ಲಾಡ್ಜ್ ನಲ್ಲಿ ಬಾಡಿಗೆ ರೂಮ ಪಡೆದು ಮಜಾ ಉಡಾಯಿಸುತ್ತಿರುವನ್ನು ನೋಡಿ ಪೋಲೀಸರಿಗೆ ವಿಷಯ ತಿಳಿಸಿದ್ದಾನೆ.

ಪೊಲೀಸರು ಬರುತ್ತಲೇ ರೂಮಿನಿಂದ ಕಾಲ್ಕಿತ್ತು ಓಡಿ ಪರಾರಿಯಾಗಲು ಯತ್ನಿಸಿದ ವೆರ್ಣೇಕರನನ್ನು, ಪಿ. ಎಸೈ ಈಸಿ ಸಂಪತ್ ಮಾರ್ಗದರ್ಶನದಲ್ಲಿ, ಹಿಡಿದು ಹೆಡೆಮುರಿ ಕಟ್ಟಿದ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆತ ತಾನು ಮೋಸ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಈತ ವಂಚಿಸಿದ ಹಣದಲ್ಲಿ ಬಹುಪಾಲನ್ನು ಓರ್ವ ಮಹಿಳೆ ಮತ್ತು ಅವಳ ಗಂಡ ಪಡೆದುಕೊಂಡಿದ್ದು, ಉಳಿದ ಹಣ ಈತನ ಮೋಜು – ಮಸ್ತಿಗೆ ಖರ್ಚಾಗಿದೆ ಎನ್ನಲಾಗಿದ್ದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ. ಐ. ಎ ಸೈ ಪ್ರೇಮನ ಗೌಡ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬಂಧನ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಮಂಜುನಾಥ ಲಕ್ಮಾಪುರ ಬಗ್ಗೆ ನಾಗರಿಕ ವಲಯದಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿದ್ದು, ಅಪರಾಧ ವಿಭಾಗದ ಹಿರಿಯ ಹವಾಲ್ದಾರ ಮೋಹನದಾಸ ಶೇಣ್ಣಿ, ಸಿಬ್ಬಂದಿಗಳಾದ ಶ್ರೀಕಾಂತ್ ಕಟಬರ್ ಹಾಗೂ ಸುರೇಶ ಬೆಳ್ಳುಳ್ಳಿಯವರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವುದು ಇಂತಹ ಹತ್ತಾರು ಪ್ರಕರಣಗಳಲ್ಲಿ ಕಂಡುಬರುತ್ತಿದ್ದು, ನಾಗರಿಕರು ಹಣ ದ್ವಿಗುಣ, ಮತ್ತಿತರ ಆಮಿಷದ ವಂಚನೆ ಜಾಲಕ್ಕೆ ಸಿಲುಕದೇ,ತಾವೇ ಖುದ್ದಾಗಿ ಮುಂಜಾಗ್ರತೆ ವಹಿಸಬೇಕು ಮತ್ತು ವಂಚಕರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಆಯಾ ವ್ಯಾಪ್ತಿಯ ಪೋಲೀಸರಿಗೆ ಮಾಹಿತಿ ನೀಡುವಂತೆ ಸಿಪಿಐ ಕೃಷ್ಣಾನಂದ ನಾಯಕ, ಪಿಎಸೈ ಈ ಸಿ ಸಂಪತ್ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಈಗಲೂ ಕೂಲಿ -ನಾಲಿ ಕೆಲಸ ಮಾಡಿಕೊಂಡು ಕಷ್ಠದ ಜೀವನ ದೂಡುತ್ತಿರುವ ವೆರ್ಣೇಕರನ ತಾಯಿ, ತನ್ನ ಮಗನ ಈ ವಂಚನೆ ಕೃತ್ಯದಿಂದ ಮುಪ್ಪಿನಲ್ಲೂ ಕೊರಗುವಂತಾಗಿರುವುದು ವಿಪರ್ಯಾಸವೇ ಸರಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button