Big News
Trending

ಇಂಥವರು ಕೋಟಿಗೊಬ್ಬರು. ಯಾಕೆ ಗೊತ್ತಾ?

ಕುಮಟಾ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಫೋಟೋದ ಮೇಲೆ ಬರೆದಿದ್ದ ಈ ಸಾಲುಗಳನ್ನು ನೋಡಿ.. ಎಷ್ಟು ಅರ್ಥಪೂರ್ಣವಾಗಿದೆ. ಗಾಂಧಿಜೀಯವರ ಕೆಳಗಡೆಯೇ ಹೊಲಿಗೆ ಯಂತ್ರವನ್ನಿಡಿದು ಹುಳಿತಿದ್ದ ಈ ಬಹುಮುಖ ಪ್ರತಿಭೆ, ಪಿ.ಎನ್. ಪಟಗಾರವರು ಆ ಸಾಲು ಪ್ರತಿದಿನವೂ ನನ್ನನ್ನು ಎಚ್ಚರಿಸುತ್ತಲೇ ಇರುತ್ತದೆ ಎನ್ನುತ್ತಲೆ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತಿಗಿಳಿದರು. ಇವರು ಜೀವನದ ಅರ್ಧದಷ್ಟು ಸಮಯವನ್ನು ಸಮಾಜಸೇವೆಗಾಗಿಯೇ ಮೀಸಲಿಟ್ಟಿದ್ದಾರೆ. ಮಕ್ಕಳು ಛದ್ಮವೇಶಕ್ಕೆ ಬಳಸುವ ಉಪಕರಣಗಳನ್ನು ಇವರು ತಯಾರಿಸುತ್ತಾರೆ. ರಾಜ್ಯದಲ್ಲಿಯೇ ಇದು ತೀರಾ ಅಪರೂಪವಾಗಿದ್ದು, ಬೆಂಗಳೂರಿನ ತಂಡವೊಂದು ಇವರ ಬಳಿ ಒಂದಿಷ್ಠು ಉಪಕರಣವನ್ನು ಮಾಡಿಸಿತ್ತು. 600 ವಿಧದ ಉಪಕರಣಗಳನ್ನು ತಂದುವರೆಗೆ ತಯಾರಿಸಿದ್ದಾರೆ. ಅಲ್ಲದೆ ಪಿ.ಎನ್ ಪಟಗಾರರವರು ತಮ್ಮ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ದಿನಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. 20 ವರ್ಷಗಳಿಂದ ಈ ಅಭ್ಯಾಸ ಬೇಳೆಸಿಕೊಂಡಿರುವ ಇವರು, ಉತ್ತಮ ಲೇಖನ, ಸಾಹಿತಿಗಳ ಪರಿಚಯ, ಸಾಧಕರ ಬಗ್ಗೆ ಬರೆದ ಲೆಖನ, ಕೃಷಿ ಅಂಕಣ, ವಿವಿಧ ಆಚರಣೆ, ಇತಿಹಾಸ ವೈಭವದ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಿಟ್ಟಿಕೊಂಡಿರುವುದು ಅಚ್ಚರಿಯ ವಿಷಯವಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಬಟ್ಟೆ ಹೂಲಿಯುವ ಪ್ರವೃತ್ತಿ ದಶಕಗಳಿಂದ ಕೈಗಂಟಿದೆ. ಸದ್ಯ ಇಡೀ ದೇಶವೇ ಕರೊನಾ ಮಹಮಾರಿಯಿಂದ ಕಂಗೆಟ್ಟಿದೆ. ಜನರು ಸುರಕ್ಷತೆ ದೃಷ್ಠಿಯಿಂದ ಮಾಸ್ಕ್ ಬಳಸುವುದು ಅನಿವಾರ್ಯವಾದರೂ ಬೇಡಿಕೆಯಿರುವಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಈ ಮಾಸ್ಕ್‍ಗಳು ಎಲ್ಲರಿಗೂ ಸಿಗುವಂತಾಗಬೇಕು ಎನ್ನುವ ಕಾರಣಕ್ಕೆ ಸ್ವತಃ ನಾನೇ ಬಟ್ಟೆಯ ಮಾಸ್ಕ್‍ಗಳ ತಯಾರಿಕೆಯನ್ನು ಶುರು ಮಾಡಿದ್ದಾರೆ. ಒಂದೊಂದು ಪ್ರದೇಶಗಳಿಗೆ ಕೊಂಡೊಯ್ದು ಉಚಿತವಾಗಿ ಜನರಿಗೆ ಪೂರೈಕೆ ಮಾಡುತ್ತಿದ್ದಾರೆ. ಇದುವರೆಗೆ 500ಕ್ಕೂ ಅಧಿಕ ಮಾಸ್ಕ್‍ಗಳನ್ನು ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪಿ.ಎಸ್ ಪಟಗಾರ. ಮಾಸ್ಕ್ ನೀಡುವುದರ ಜೋತೆಗೆ ಕೊರೋನಾ ಜಾಗೃತಿಯನ್ನೂ ಮೂಡಿದಿದ್ದೇನೆ. ಬಿಸಿ ನೀರನ್ನು ಏಕೆ ಕುಡಿಯಬೇಕು.? ಸಾಮಾಜಿಕ ಅಂತರವೆಂದರೇನು.? ಎಂಬುದರ ತಿಳುವಳಿಕೆ ಮೂಡಿಸುತ್ತಿದ್ದೇನೆ. ಇದೇ ಮೊದಲಲ್ಲ. ಪ್ಲಾಸ್ಟಿಕ್ ನಿಷೇಧದ ಆದೇಶ ಹೊರಬಂದಾಗಲೂ ಹಲವೆಡೆ ತೆರಳಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮನದಟ್ಟು ಮಾಡಿಸಿದ್ದೇನೆ. ಜೊತೆಗೆ 400ಕ್ಕೂ ಹೆಚು ಬಟ್ಟೆಯ ಚೀಲಗಳನ್ನು ತಯಾರಿಸಿ ಉಚಿತವಾಗಿ ನಿಡಿ ಅದನ್ನೇ ಬಳಸುವಂತೆ ವಿನಂತಿಸಿಕೋಂಡಿದ್ದಿದೆ ಎಂದು ಮಾಹಿತಿ ನೀಡಿದರು. ನನ್ನ ಪಯಣದಲ್ಲಿ ಅರ್ಧದಷ್ಟು ಜೀವನವನ್ನು ಸಾಮಾಜಿಕ ಸೇವೆಗಾಗಿ ಮುಡಿಪಾಗಿಟ್ಟಿದ್ದೆನೆ. ಮೊದಮೊದಲು ಅನೇಕರು ಪಟಗಾರ್‍ಗೆ ತಲೆ ಸಮ ಇಲ್ಲ ಎಂದು ಕೆಲವರು ವ್ಯಂಗವಾಡಿದ್ದರು. ಆದರೆ, ಕೆಲಸ ಮಾಡುವವರು ಪ್ರತಿಕ್ರಿಯೆ ನೀಡುತ್ತಾ ಕೂರಬಾರದು. ಅದರಿಂದ ಕೆಲಸ ಮಾಡಲಾಗುವುದಿಲ್ಲ. ನಾನು ನನ್ನ ಕಾಯಕದಲ್ಲೆ ನಿರತನಾದೆ. ನಂತರ ಹಲವಾರು ಯುವಕರು ಪ್ರೋತ್ಸಾಹ ತುಂಬಿದರು, ಕೈ ಜೋಡಿಸಿದರು ಎಂದು ಸಂತಸಪಟ್ಟರು. ಪಿ.ಎನ್ ಪಟಗಾರ ಅವರ ವಿಶೇಷತೆಗಳಲ್ಲಿ ಇದೂ ಕೂಡ ಒಂದು. ಸಮಾಜದಲ್ಲಿ ಯಾರೇ ಮೃತರಾದರೂ ಸಹ ಅಂತ್ಯಕ್ರಿಯೆಯಲ್ಲಿ ಬಾಗಿಯಾಗುತ್ತಾರೆ. ಇದುವರೆಗೆ 800ಕ್ಕೂ ಹೆಚ್ಚು ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಬಾಲ್ಯದಲ್ಲಿ ದೆವ್ವ ಭೂತಗಳ ಬಗ್ಗೆ ಹೆಳುತ್ತಿದ್ದರು. ದೆವ್ವವನ್ನು ನೋಡಿಯೆ ಬಿಡಬೇಕು ಎಂದು ಹಠ ಹೊತ್ತು ವೀಕ್ಷಣೆಗೆ ಹೋಗುತ್ತಿದ್ದೆ. ಈಗ ಅದು ಅಬ್ಯಾಸವಾಗಿಬಿಟ್ಟಿದೆ ಎಂದು ಹೇಳುತ್ತಾರೆ ಪಿ.ಎನ್ ಪಟಗಾರ. ಕಥೆ ಕವನಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿರುವ ಇವರು ಏಳು ನಾಟಕ ಪುಸ್ತಕಗಳನ್ನು ಬರೆದಿದ್ದಾರೆ. ಜೊತೆಗೆ ನಿರ್ದೇಶನ ಮಾಡಿಯೂ ಗಮನ ಸೆಳೆದಿದ್ದಾರೆ. ಜನ ಸಂಖ್ಯೆ ಎರಿಕೆ ಕುರಿತು ಬರೆದ ಸಾಮಾಜಿಕ ಸಂದೇಶವುಳ್ಳ ನಾಟಕ ಜಿಲ್ಲೆಯೆಲ್ಲೆಡೆ ಪ್ರದರ್ಶನ ಕಂಡು ಜನಮೆಚ್ಚುಗೆಗೆ ಪಾತ್ರವಾಗಿತ್ತು, ಇವರು 40 ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಗುಡಿಸುತ್ತಿದ್ದಾರೆ. ದೇವಸ್ಥಾನ, ಶಾಲೆ, ಅಶ್ವತಮರ ಹೀಗೆ ಎಲ್ಲಾ ಕಡೆ ಸ್ವಚ್ಚಗೊಳಿಸುವುದು ಮುಂತಾದವುಗಳ ಜೋತೆಗೆ ಬೆಸಿಗೆಯ ಸಮಯದಲ್ಲಿ ಪಕ್ಷಿಗಳಿಗೆ ನೀರಿಡುವ ಹವ್ಯಾಸವನ್ನು ಸಹ ಅನೇಕ ವರ್ಷಗಳಿಂದ ನಿತ್ಯದ ದಿನಚರಿಯಲ್ಲಿ ರೂಡಿಸಿಕೊಂಡಿದ್ದಾರೆ.
ಪಿ.ಎನ್. ಪಟಗಾರವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ್ ಗ್ರಾಮದವರು. ನಾರಾಯಣ ಪಟಗಾರ ಹಾಗೂ ದೇವಿ ದಂಪತಿಯ ಪುತ್ರ, 18 ವರ್ಷಗಳಿಂದ ಚಂದಾವರದ ಗಣಪತಿ ದೇವಸ್ಥಾನ ಕೇರಿಯಲ್ಲಿ ವಾಸವಿದ್ದಾರೆ. ನಿವೃತ್ತ ಶಿಕ್ಷಕರಾಗಿರುವ ಇವರು ಸದ್ಯ ಚಂದಾವರ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಬೇರೆ ಬೆರೆ ಶಾಲೆಗಳಿಗೆ ಕ್ರೀಡಾ ತರಬೇತಿ ನೀಡುವುದರ ಜೊತೆಗೆ ಉಪನ್ಯಾಸವನ್ನು ನಿಡುತ್ತಿದ್ದಾರೆ. ನಿಶ್ವಾರ್ಥ ಸಾರ್ವಜನಿಕ ಸೇವೆ ಇಂದಿನ ದಿನದಲ್ಲಿ ಬಹಳ ಕಷ್ಟ, ಆದರೆ ಆ ಕಾರ್ಯದಲ್ಲಿ ಸಿಗುವ ಆತ್ಮ ತೃಪ್ತಿ ಬೇರಾವುದರಲ್ಲೂ ಸಿಗುವುದಿಲ್ಲ ಎನ್ನುವುದು ಕೋಟಿ ಕನಸುಗಳ ಕೋಟೆ ಕಟ್ಟಿದ, ಸಾಮಾಜಿಕ ಸೇವೆಗೆ ಅರ್ಧ ಜೀವನ ಮುಡಿಪಿಟ್ಟ ಸವ್ಯಸಾಚಿ ಪಿ.ಎನ್. ಪಟಗಾರವರ ರವರ ಮನದಾಳದ ಮಾತಾಗಿದೆ.

ವಿಸ್ಮಯ ನ್ಯೂಸ್ ಯೋಗೇಶ ಮಡಿವಾಳ. ಕುಮಟಾ

Back to top button