Follow Us On

WhatsApp Group
Uttara Kannada
Trending

ಹೀಗೆ ಓಡಾಡಿದ್ರೆ ಹೇಗೆ ಸ್ವಾಮಿ?

ಕ್ವಾರಂಟೈನ್‍ನಲ್ಲಿದ್ದವರ ಬಿಂದಾಸ್ ತಿರುಗಾಟ

ಹೊನ್ನಾವರ: ಹೊನ್ನಾವರದಲ್ಲಿ ಹೊರಗಿನಿಂದ ಬಂದವರ ಕ್ವಾರಂಟೈನ್ ಮಾಡುವಲ್ಲಿ ವೇಳೆ ಬೇಜವಾಬ್ದಾರಿತ, ನಿರ್ಲಕ್ಷ್ಯ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈನಿಂದ ಆಗಮಿಸಿದ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡಿದ್ದ. ಅದಕ್ಕೂ ಮೊದಲು ಸೀಲ್ ಹಾಕಿಸಿಕೊಂಡ ವ್ಯಕ್ತಿಯೊಬ್ಬ ಅಂಗಡಿಗೆ ತೆರಳಿ ನೀರಿನ ಬಾಟಲ್ ಖರೀದಿಸಿದ್ದ.. ಈಗ ಮತ್ತೆ ಇಂತಹದೇ ಅವಾಂತರ ನಡೆದಿದೆ. ಹೊರರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಿ ಸುರಕ್ಷತೆಯ ದೃಷ್ಟಿಯಿಂದ ಕ್ವಾರಂಟೈನ್ ಮಾಡಬೇಕಾಗಿರುವುದು ಸ್ಥಳಿಯ ಆಡಳಿತ ಜವಬ್ದಾರಿಯಾದರೂ, ಇದುವರೆಗೂ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವಲ್ಲಿ ಹೊನ್ನಾವರ ತಾಲೂಕಾಡಳಿತ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈನಿಂದ ಆಗಮಿಸಿದ ವ್ಯಕ್ತಿ ಸರ್ಕಾರಿ ಕ್ವಾರೈಂಟಿನ್ ಸ್ಥಳಕ್ಕೆ ನಡೆದುಕೊಂಡು ಬಂದಿದ್ದರುವುದನ್ನು ಮತ್ತು ಅದಕ್ಕು ಪೂರ್ವದಲ್ಲಿ ಬೇಂಗಳೂರಿನಿಂದ ಬಂದು ಸಿಲ್ ಹಾಕಿಸಿಕೋಂಡು ಅಂಗಡಿಗೆ ನೀರಿನ ಬಾಟಲಿ ಕರಿದಿಸಿ ಹೋಗಿರುವ ಬಗ್ಗೆಯು ನಮ್ಮ ವಿಸ್ಮಯ ಟಿವಿ ವರದಿ ಮಾಡಿತ್ತು. ವರದಿಯಾದ ಬಳಿಕ ಎಚ್ಚೆತ್ತುಕೊಂಡು ಮತ್ತೆ ಅಂತಹ ತಪ್ಪು ಆಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಇದೀಗ ಬುಧವಾರ ರಾತ್ರಿ ಬಂದು ಆಸ್ಪತ್ರೆ ಟೆಸ್ಟ್ ಮಾಡಿಸಿಕೊಂಡ ವ್ಯಕ್ತಿಯೊಬ್ಬ ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸರ್ಕಾರಿ ಆಸ್ಪತ್ರೆಯ ಹೊರಾಂಗಣದಲ್ಲಿ ಕುಳಿತಿದ್ದಾನೆ. ಆದ್ರೆ, ಇದು ವ್ಯಕ್ತಿಯಿಂದ ಆದ ತಪ್ಪಲ್ಲ. ವ್ಯವಸ್ಥೆಯಿಂದ ಆದ ಲೋಪ.. ಈ ವ್ಯಕ್ತಿಗೆ ಅಂಬುಲೆನ್ಸ ಅಥವಾ ಇತರೆ ವಾಹನದ ವ್ಯವಸ್ಥೆ ಇಲ್ಲದೇ ಈ ಸಮಸ್ಯೆ ಉದ್ಬವಿಸಿದೆ. ಈ ಬಗ್ಗೆ ಮುತವರ್ಜಿ ವಹಿಸಬೇಕಾದ ತಾಲೂಕ ಆಡಳಿತ ಈ ವ್ಯವಸ್ಥೆ ಕಲ್ಪಿಸದೇ ನಿಲಕ್ಷ ವಹಿಸಿದೆ. ಮುಂಬೈನಿಂದ ಆಗಮಿಸಿದವರು ಕುಳಿತು ಬೇಸರಗೊಂಡು ಸುತ್ತಲು ವಾಕ್ ಮಾಡಿದ್ದಾರೆ. ಆಸ್ಪತ್ರೆಗೆ ಬಂದ ಸ್ಥಳಿಯರು ಇದನ್ನು ಗಮನಿಸಿ ಭಯಗೊಂಡಿದ್ದಾರೆ. ಅಧಿಕಾರಿಗಳು ನಿಲಕ್ಷ ವಹಿಸುತ್ತಿದ್ದಾರೆ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯಾಡಳಿತದ ಗಮನಕ್ಕೆ ತಂದಾಗ ಅಧಿಕಾರಿಗಳು ಬಂದರು ಇಲಾಖೆಯ ವಾಹನದ ಮೂಲಕ ಕ್ವಾರಂಟೈನ್ ಸ್ತಳಕ್ಕೆ ಕರೆದುಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಮುಂಬೈನಂಟು ಹೊಂದಿರುವ ಐದು ಪಾಸಟಿವ್ ಪ್ರಕರಣ ಪತ್ತೆಯ ಬಳಿಕವು ಎಚ್ಚೆತ್ತುಕೊಂಡು ಅಲ್ಲಿಂದ ಬರುವವರ ಮೇಲೆ ನಿಗಾ ವಹಿಸಬೇಕಿದ್ದ ಇಲಾಖೆ ಪದೇಪದೇ ನಿಲಕ್ಷವಹಿಸುತ್ತಿರುವುದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈನಿಂದ ಬರುವವರ ತಾಲೂಕಾ ಆಸ್ಪತ್ರೆಯಲ್ಲಿ ಟೆಸ್ಟ ಮಾಡಿದ ಬಳಿಕ ಕ್ವಾರಂಟೈನಗೆ ರವಾನಿಸಲಾಗುತ್ತಿದೆ. ಅಂಬುಲೆನ್ಸ ಬೇರೆಡೆ ಹೋಗುವದರಿಂದ ಇದರ ಬಳಕೆಗೆ ಸ್ವಲ್ಪ ಸಮಸ್ಯೆ ಉದ್ಬವಿಸಿದೆ. ನಾಳೆಯಿಂದ ಇಲಾಖೆಯ ಒಂದು ವಾಹನ ಇದಕ್ಕಾಗಿಯೇ ಮೀಸಲಿಡುವ ಮೂಲಕ ಸಮಸ್ಯೆ ಉಂಟಾಗದಂತೆ ಗಮನಹರಿಸುತ್ತೇವೆ ಎಂದು ತಾಲೂಕ ದಂಡಾದಿಕಾರಿ ವಿವೇಕ ಶೇಣ್ವಿ ನಮ್ಮ ವಿಸ್ಮಯ ಟಿವಿಗೆ ಮಾಹಿತಿ ಮತ್ತು ಭರವಸೆ ನೀಡಿದ್ದಾರೆ,

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button